January 29, 2026
1761230615633.jpg

ಹಿರಿಯೂರು:
ತಾಲ್ಲೂಕಿನ ವಾಣಿವಿಲಾಸಸಾಗರ ಜಲಾಶಯದ ಗೇಟ್ ಅನ್ನು ತಾವೇ ಮುಂದೆ ನಿಂತು ಓಪನ್ ಮಾಡಿಸುವ ಮೂಲಕ ಹೊಸದುರ್ಗ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಹೀಗೆ ಆದರೆ ಕಾನೂನು ಸುವ್ಯವಸ್ಥೆ ಮೇಲೆ ಹೊಡೆತ ಬೀಳಲಿದೆ ಎಂಬುದಾಗಿ ರೈತ ಹಿತರಕ್ಷಣಾ ಸಮಿತಿ ಹಾಗೂ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಅವರು ಹೇಳಿದರು.
ನಗರದ ಗ್ರಾಮಾಂತರ ಪೋಲೀಸ್ ಠಾಣೆಗೆ ಭೇಟಿ ನೀಡಿ, ಹೊಸದುರ್ಗಶಾಸಕ ಬಿ.ಜಿ.ಗೋವಿಂದಪ್ಪನವರ ಅಧಿಕಾರ ದುರ್ಬಳಕೆ ವಿರುದ್ಧ ದೂರು ದಾಖಲಿಸಿ, ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ವಾಣಿವಿಲಾಸ ಸಾಗರಕ್ಕೆ ಸಂಬಂಧಪಟ್ಟಂತೆ ತೂಬು ಓಪನ್ ಮಾಡಿಸಿ ನೀರು ಬಿಡುವುದಕ್ಕಾಗಲಿ ಅಥವಾ ನೀರು ನಿಲ್ಲಿವುದಕ್ಕಾಗಲಿ ನೀರಾವರಿ ಸಲಹಾ ಸಮಿತಿ ಹಾಗೂ ಜಿಲ್ಲಾಧಿಕಾರಿಗಳು ಅಧಿಕಾರ ಹೊಂದಿದ್ದಾರೆ. ಆದರೆ ಶಾಸಕರು ತಾವೇ ಮುಂದೆ ನಿಂತು ತೂಬು ಓಪನ್ ಮಾಡಿಸಿದ್ದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿಶ್ರೀನಿವಾಸ್, ಆರ್.ಕೆ.ಗೌಡ್ರು, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎ.ವಿ.ಕೊಟ್ಟೆಗೆ ಕೆ.ಜಿ ಗೌಡ್ರು, ಗ್ರಾಮಪಂಚಾಯಿತಿ ಸದಸ್ಯೆ ಶ್ರೀಮತಿ ಶಶಿಕಲಾ, ರುದ್ರೇಶ್ ಚಲುವಾದಿ, ಸತೀಶ್, ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading