January 29, 2026
d23-tm4A.jpg

ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಕ್ಲುಲ್ಲಕ ಕಾರಣವನ್ನ ಮುಂದೆ ಇಟ್ಟು ಕೊಂಡು ದೇವಸ್ಧಾನವೋಂದರ ಅರ್ಚಕ ಮತ್ತು ಆತನ ಪತ್ನಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಶ್ರೀರಾಂಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗದವರನ್ನ ತಾಲೂಕಿನ ಹಂದನಕೆರೆಯ ಶ್ರೀ ಆಂಜನೇಯಸ್ವಾಮಿ ದೇವಸ್ಧಾನದ ಅರ್ಚಕ ರಾಮಚಂದ್ರಯ್ಯ ಮತ್ತು ಈತನ ಪತ್ನಿ ರೇಖ ಎನ್. ಎಂದು ತಿಳಿದು ಬಂದಿದ್ದು ಹಲ್ಲೆ ಮಾಡದವರನ್ನ ಹಂದನಕೆರೆ ಸಮೀಪವಿರುವ ಹೊಸುರಾಳು ಗ್ರಾಮದ ರಾಮಣ್ಣ, ಪರಪ್ಪ, ಲಕ್ಷö್ಮಮ್ಮ ಎಂದು ಹೇಳಲಾಗಿದ್ದು ಗಾಯಗೊಂಡವರು ಹೊಸದುರ್ಗ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಚಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಹಿನ್ನೆಲೆ: ಹಲ್ಲೆ ಮಾಡಿರುವ ರಾಮಣ್ಣ, ಪರಪ್ಪ, ಲಕ್ಷö್ಮಮ್ಮ ಎಂಬುವವರು ಅರ್ಚಕ ಆರ್.ರಾಮಚಂದ್ರಯ್ಯ ಎಂಬುವವರ ಜಮೀನಿನ ಪಕ್ಕದಲ್ಲೆ ವಾಸಿವಾಗಿದ್ದುಕೊಂಡು ಕಳೆದ ದಿನಾಂಕ ೨೧ ರಂದು ಮಂಗಳವಾರ ದೇವಸ್ಧಾನದ ಪೂಜೆ ಮುಗಿಸಿಕೊಂಡು ಅರ್ಚಕ ಆರ್.ರಾಮಚಂದ್ರಯ್ಯ ಮತ್ತು ಈತನ ಪತ್ನಿ ರೇಖ ರಾಮಣ್ಣ, ಪರಪ್ಪ ಮತ್ತು ಲಕ್ಷö್ಮಮ್ಮ (ತಂದೆ.ತಾಯಿ.ಮಗ) ಎಂಬುವವರ ಜಮೀನು ಮುಂದೆ ನಡೆದು ಕೊಂಡು ಹೋಗುತ್ತಿದ್ದ ಸಂಧರ್ಬದಲ್ಲಿ ನಮ್ಮ ಜಮೀನಿನ ದಾರಿಯಲ್ಲಿ ಏಕೆ ನಡೆದುಕೊಂಡು ಬರುತ್ತೀಯಾ ಎಂದು ಪ್ರಶ್ನಿಸಿ ಇದು ನನ್ನ ಜಮೀನಿನ ದಾರಿ ಈ ದಾರಿಯಲ್ಲಿ ಓಡಾಡಬೇಡ ಎಂದು ಏರಿದ ದ್ವನಿಯಲ್ಲಿ ಪ್ರಶ್ನಿಸಿದಾಗ ಅರ್ಚಕ ಆರ್.ರಾಮಚಂದ್ರಯ್ಯ ಈ ದಾರಿಯಲ್ಲೆ ಓಡಾಡಬೇಕು ನಮಗೆ ಓಡಾಡಲು ಬೇರೆ ದಾರಿ ಇಲ್ಲ ಎಂದು ಉತ್ತರ ನೀಡುತ್ತಿದ್ದಂತೆ ರಾಮಣ್ಣ, ಪರಪ್ಪ ಮತ್ತು ಲಕ್ಷö್ಮಮ್ಮ ಎಂಬುವವರು ಏಕಾ ಎಕಿ ಆರ್.ರಾಮಚಂದ್ರಯ್ಯ ಮತ್ತು ರೇಖ ಎಂಬುವವರು ಮೇಲೆ ಅಲ್ಲಿಯೇ ಇದ್ದ ಆಯುಧಗಳಿಂದ ಹಲ್ಲೆ ನಡೆಸಿದ್ದಲ್ಕದೆ ಅವರು ಸಾಕಿರುವ ನಾಯಿಯನ್ ಛೂ ಬಿಟ್ಟು ಕಚ್ಚಿಸಿದ್ದಾರೆ, ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ೨೦೨೨ ರಲ್ಲೂ ಸಹಾ ಇವರು ನಮ್ಮ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ, ಅಂದು ಶ್ರೀರಾಂಪುರ ಪೋಲಿಸ್ ಠಾಣೆಗೆ ದೂರು ನೀಡಿದಾಗ ಠಾಣೆಯಲ್ಲಿ ಎನ್.ಸಿ.ನೀಡಿ ಹಲವು ಬಾರಿ ಪಂಚಾಯತಿ ಮಾಡಿರುತ್ತಾರೆ ಇದಾದ ಮೆಲೂ ಸಹಾ ಮತ್ತೆ ಇದೇವ ರೀತಿ ಎರಡು ಬಾರಿ ಗಲಾಟೆಯಾಗಿ ಎಫ್.ಐ.ಆರ್. ಮಾಡಿರುತ್ತಾರೆ ಎಂಸದು ದೂರುದಾರಾದ ರೇಖ ತಿಳಿಸಿದ್ದಾರೆ.
ಬಾಕ್ಸ್ ಐಟಂ
ಪೋಲೀಸರ ಮೇಲೆ ಆರೋಪ: ಘಟನೆ ನಡೆದ ದಿನ ನಮ್ಮ ಸಂಬAಧಿಕರು ಹೋಗಿ ಶ್ರೀರಾಂಪುರ ಠಾಣೆಯಲ್ಲಿ ದೂರು ನೀಡಿದರೂ ಸಹಾ ಸ್ವೀಕರಿಸದೆ ನಾಳೆ ಬನ್ನಿ ಎಂದು ಹೇಳಿ ವಾಪಾಸ್ ಕಳುಹಿಸಿದ್ದಾರೆ, ಮರು ದಿನ ದೂರು ದಾಖಲಿಸಿಕೋಮಡಿದ್ದಾರೆ, ಇಷ್ಟೆಲ್ಲಾ ಆದರೂ ಸಹಾ ಶ್ರೀರಾಂಪುರ ಠಾಣೆಯಲ್ಲಿ ದೌರ್ಜನ್ಯ ಎಸಗಿದವರ ವಿರುದ್ದ ಯಾವುದೇ ಬಿಗಿ ಬಂದೂಬಸ್ತ್ ಮಾಡಿ ಕ್ರಮ ಕೈಗೊಂಡಿರುವುದಿಲ್ಲ, ಪರಪ್ಪ ಮತ್ತು ಲಕ್ಷö್ಮಮ್ಮ ಎಬುವವರು ನಮ್ಮ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾರೆ, ಈ ಹಿಂದೆ ಈ ವಿಚಾರ ಕೆಲ್ಲೋಡು ಗ್ರಾಮಸ್ಧರಿಗೆ ತಿಳಿದು ಅವರನ್ನ ದೇವಸ್ಧಾನಕ್ಕೆ ಕರೆಯಿಸಿ ಪಂಚಾಯಿತಿ ಮಾಡಿ ದಂಡ ಹಾಕಿ ಇನ್ನು ಮುಂದೆ ಈ ರೀತಿ ಮಾಡದಂತೆ ತಿಳುವಳಿಕೆ ನೀಡಿದರೂ ಸಹಾ ನಮ್ಮ ಮೇಲೆ ಹಲ್ಲೆ ಮಾಡುವುದನ್ನ ನಿಲ್ಲಿಸಿಲ್ಲ.
ಆರ್.ರಾಮಚಂದ್ರಯ್ಯ, ಅರ್ಚಕ

ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ದೂರು: ಈ ಹಿನ್ನೆಲೆಯಲ್ಲಿ ನಾವು ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ಹೋಗಿ ದೂರು ನೀಡಿ ನ್ಯಾಯ ಮತ್ತು ಭದ್ರತೆ ಒದಗಿಸಿಕೊಡುವಂತೆ ಜಿಲ್ಲಾ ರಕ್ಷಣಾಧಿಕಾರಿಯವರ ಹತ್ತಿರ ಮನವಿ ಮಾಡಿಕೊಳ್ಳುತ್ತೇವೆ ನ್ಯಾಯ ಮತ್ತು ಭದ್ರತೆ ಸಿಗದಿದ್ದರೆ ಸಿಗುವವರೆಗೂ ಸಹಾ ಪ್ರತಿಭಟನೆ ಮತ್ತು ಹೋರಾಟ ಮಾಡಲಿದ್ದೇವೆ.
ರೇಖ ಎನ್.
ಹಲ್ಲೆಗೊಳಗಾದ ದೂರುದಾರಳು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading