ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಕಳೆದ ಭಾರಿ ಮಳೆ ಇಲ್ಲದೆ ಕಂಗಾಲಾಗಿದ್ದ ತಾಲೂಕಿನ ಜನತೆಗೆ ಈಗ ಮುಖದಲ್ಲಿ ನಗು ಕಾಣಿಸುತ್ತಿದೆ, ಈ ವಷವೂ ಕೂಡ ಮಳೆ ಸಕಾಲಕ್ಕೆ ಬಾರದೆ ಕೈ ಕೋಟ್ಟಿದ್ದ ಪರಿಣಾಮ ಸಾವೆ,ಮತ್ತು ಮೆಕ್ಕೆಜೋಳ ರೈತರ ನಿರೀಕ್ಷೆಯಷ್ಟು ಬೆಳೆ ಬರಲಿಲ್ಲ ಆದರೂ ಸಹಾ ಕಳೆದ ಒಂದು ವಾರದಿಂದ ಬಿಟ್ಟು ಬಿಟ್ಟು ಬರುತ್ತಿರುವ ಮಳೆಗೆ ತಾಲೂಕಿನಾಧ್ಯಂತ ಸಂವೃದ್ದ ಮಳೆಯಾಗಿದೆ, ಇದರಿಂದ ರೈತಾಪಿ ವರ್ಗಕ್ಕಂತು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿದೆ ಅದಲ್ಲೂ ಹೊಸದುರ್ಗ ಪಟ್ಟಣಕ್ಕೆ ನೀರು ಒದಗಿಸುವ ಎಕೈಕ ನದಿ ಎಂದರೆ ಅದು ತಾಲೂಕಿನ ಕೆಲ್ಲೋಡು ಬಳಿ ಇರುವ ವೇದಾವತಿ ಭರ್ತಿಯಾಗಿ ನೀರು ಬ್ಯಾರೇಜ್ ಮೇಲೆ ಹರಿಯುತ್ತಿರುವುದನ್ನು ನೋಡಿದರೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಈ ವೇದಾವತಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೊಸದುರ್ಗ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಕಷ್ಟದ ಕೆಲಸವೇನಲ್ಲ ಎನ್ನುವಂತಾಗಿದ್ದು ಇದರಿಂದ ನದಿಯ ಹಾಸು ಪಾಸಿನಲ್ಲಿರುವ ರೈತರು ಹರ್ಷ ಚಿತ್ತರಾಗಿದ್ದಾರೆ.
ತಾಲ್ಲೂಕಿನ ಜೀವನಾಡಿಯಾದ ವೇದಾವತಿ ನದಿಯು ಹರಿದು ವಾಣಿ ವಿಲಾಸ ಸಾಗರ ಸೇರಿ ಜಿಲ್ಲೆಯ ಬಹುತೇಕ ರೈತರಿಗೆ ಬೆಳೆ ಬೆಳೆಯಲು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗಿದ್ದು. ಕಳೆದ ವರ್ಷ ಸರಿಯಾಗಿ ಮಳೆಯಾಗದೆ ಹೊಸದುರ್ಗ ತಾಲ್ಲೂಕನ್ನು ಬರಿ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೊಷಣೆ ಮಾಡಲಾಗುತ್ತು, ಈ ಮಧ್ಯೆ ಉತ್ತಮ ಮಳೆ ಆದ ಕಾರಣ ಕೆಲ್ಲೊಡು ಬ್ಯಾರೆಜ್ ಸೇರಿ ಆಲಗಟ್ಟ, ಬಲ್ಲಾಳಸಮುದ್ರ, ಕಾರೆಹಳ್ಳಿ ಚೆಕ್ ಡ್ಯಾಮ್‌ಗಳು ಬsÀರ್ತಿಯಾಗಿ ಹರಿದು ವಾಣಿ ವಿಲಾಸ ಸಾಗರ ಡ್ಯಾಮ್ ಸೇರಿದೆ.ವಾಣಿ ವಿಲಾಸ ಸಾಗರದಲ್ಲೂ ಸಹಾ ನೀರು ಭರ್ತಿಯಾಗಿ ಕೋಡಿ ಬಿದ್ದಿದೆ ಇದರಿಂದ ವಾಣಿ ವಿಲಾಸ ಪ್ರದೇಶದಲ್ಲಿರುವ ಸಾಕಷ್ಟು ಜಮೀನುಗಳಿಗೆ ನೀರು ನುಗ್ಗಿ ಆ ಭಾಗದ ರೈತರನ್ನ ಚಿಂತಾಗ್ರಸ್ಧರನ್ನಾಗಿ ಮಾಡಿದೆ.
ಕಳೆದ ೨೦೧೭ ರಿಂದ ೨೦೨೧ ರವರೆಗೆ ಬರಗಾಲದ ಹಿನ್ನೆಲೆ ಹೊಸದುರ್ಗ ಪಟ್ಟಣಕ್ಕೆ ೨೩ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಪ್ರಸಂಗ ಇದ್ದು ಕಳೆದ ೨ ವರ್ಷಗಳಿಂದ ಮತ್ತು ಇದೀಗ ದೈವ ಕೃಪೆಯಿಂದ ಬ್ಯಾರೇಜ್ ಚೆಕ್ ಡ್ಯಾಮ್‌ನಲ್ಲಿ ನೀರು ಇರುವ ಕಾರಣ ಪಟ್ಟಣದ ಜನತೆ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ

ಭದ್ರಾ ಮೇಲ್ಡಂಡೆ ಯೋಜನೆಯಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು ಅಮೃತ್ ಯೋಜನೆಯಡಿ ಸುಮಾರು ೯೦೦೦ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸಲು ೩೩ ಕೋಟಿ ಅನುದಾನದಲ್ಲಿ ಡಿ.ಪಿ.ಆರ್ ತಯಾರಿಸಲಾಗಿದ್ದು ಈಗಾಗಲೆ ಈ ಯೋಜನೆ ಅನುಷ್ಠಾನಗೊಳಿಸಿ ಕಾಮಗಾರಿ ಭರದಿಂದ ಸಾಗುತ್ತಿದೆ, ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು.
ಬಿ.ಜಿ.ಗೋವಿಂದಪ್ಪ, ಶಾಸಕರು

Äದ್ದೀಕರಣ ಬಾವಿ ಮುಳುಗಡೆ: ಶುದ್ದಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲು ಸಾದ್ಯವಾಗುತ್ತಿರುವುದಿಲ್ಲ
ಹೊಸದುರ್ಗ:ಶುದ್ದೀಕರಣ ಬಾವಿ ಮುಳುಗಡೆ: ಶುದ್ದಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲು ಸಾದ್ಯವಾಗುತ್ತಿರುವುದಿಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ನಾಗಭೂಷಣ್ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸದುರ್ಗ ಪÀಟ್ಟಣಕ್ಕೆ ನೀರುಣಿಸುವ ವೇದಾವತಿ ನದಿಯಾದ ಕೆಲ್ಲೋಡು ಬ್ಯಾರೇಜ್ ನೀರು ಪಟ್ಟಣದ ಜನತೆಗೆ ಸರಬರಾಜು ಮಾಡಲಾಗುತ್ತಿದ್ದು ಇತ್ತೀಚೆಗೆ ಕಳೆದ ೩-೪ ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ವೇದಾವತಿ ನದಿಯು ಗರಿಷ್ಠ ಮಟ್ಟ ದಾಟಿ ಹರಿಯುತ್ತಿರುವುದರಿಂದ ಬ್ಯಾರೇಜ್ ಪಕ್ಕದಲ್ಲಿರುವ ಶುದ್ದೀಕರಣ ಬಾವಿಯು ಮುಳುಗಡೆಯಾಗಿರುವುದರಿಂದ ಪಟ್ಟಣಕ್ಕೆ ಶುದ್ದಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲು ಸಾದ್ಯವಾಗುತ್ತಿರುವುದಿಲ್ಲ ಅದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸರಬರಾಜು ಆಗುತ್ತಿರುವ ನೀರನ್ನು ಬಳಕೆಗೆ ಹೊರತುಪಡಿಸಿ ಕುಡಿಯಲು ಹಾಗೂ ಅಡುಗೆ ಮಾಡಲು ಬಳಸಬಾರದು ಅವರು ಮನವಿ ಮಾಡಿದ್ದಾರೆ
ಹೊಸದುರ್ಗ ಪಟ್ಟಣದ ಹಾಗೂ ಕೆಲ್ಲೋಡು ಗ್ರಾಮಕ್ಕೆ ಸುಮಾರು ೫೦,೦೦೦ ಜನ ಸಂಖ್ಯೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ಪಂಪ್ ಹೌಸ್ ಮೂಲಕ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಸಂವೃದ್ದ ಮಳೆ ಬಂದ ಹಿನ್ನೆಲೆಯಲ್ಲಿ ಈ ಭಾರಿಯೂ ಸಹಾ ವೇದಾವತಿ ಭರ್ತಿಯಾಗಿದೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ,ಪಟ್ಟಣದ ೨೩ ವಾರ್ಡುಗಳಿಗೂ ಸಹಾ ಸಂವೃದ್ದ ನೀರು ಒದಗಿಸಲಾಗುವುದು
ನಾಗಭೂಷಣ್ ಎನ್, ಮುಖ್ಯಾಧಿಕಾರಿ
ಪುರಸಭೆ,ಹೊಸದ
About The Author
Discover more from JANADHWANI NEWS
Subscribe to get the latest posts sent to your email.