ಹಿರಿಯೂರು:
ನಮ್ಮ ಸಮಾಜದ ಜನರು ಮೊದಲು ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು, ಸುಸಂಸ್ಕೃತ ವ್ಯಕ್ತಿಗಳಾಗಿ ಜೀವನ ನಡೆಸಬೇಕು ಎಂಬುದಾಗಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಆರ್.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಹರ್ತಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಗೊಂಡನಹಳ್ಳಿಯಲ್ಲಿ ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ತಿಪ್ಪೇಸ್ವಾಮಿ(ಪಿಟ್ಲಾಲಿ), ತಾಲ್ಲೂಕು ಗೌರಾವಾಧ್ಯಕ್ಷ ಗೋವಿಂದಪ್ಪ, ಹರ್ತಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ. ಪರಮೇಶ್ವರಪ್ಪ, ಪಿ.ಡಿ.ಓ. ಶ್ರೀಮತಿ ಅಸಂತಿಯಾಜ್ ಬೇಗಂ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತಾಪ್ ಸಿಂಹ, ಪಾಂಡಪ್ಪ, ಹನುಮಂತಪ್ಪ, ಮುಖಂಡರು, ಪರಮೇಶ್ವರಪ್ಪ, ಶಂಕ್ರಪ್ಪ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜೆ.ಜೆ. ಹಳ್ಳಿ ಹೋಬಳಿ ಅಧ್ಯಕ್ಷ ಈರಣ್ಣ, ತಾಲ್ಲೂಕು ಉಪಾಧ್ಯಕ್ಷ ಲಕ್ಷ್ಮಣ್ ರಾವ್, ಓಂಕಾರಪ್ಪ, ತಾಲ್ಲೂಕು ಕಾರ್ಯದರ್ಶಿ ಕೆಂಚಪ್ಪ, ರಂಗಸ್ವಾಮಿ ಆಟೋ, ಗ್ರಾಮಸ್ಥರು ಕೃಷ್ಣಪ್ಪ, ನಾಗರಾಜಪ್ಪ, ಮಹಾಲಿಂಗಪ್ಪ, ಲಕ್ಷ್ಮಣಪ್ಪ, ರವಿ, ಯಶೋಧರ, ಪ್ರಸನ್ನ, ಪ್ರಸಾದ, ಅಬ್ದುಲ್ಲಾ, ಪ್ರದೀಪ್, ಸುದೀಪ್, ಪ್ರಜ್ವಲ, ತಿಪ್ಪೇಶ್, ಕೋಟಿ, ಕೋಟೇಶ್, ಚೇತು, ಸಂಕೇತ್, ಶ್ರೀಮತಿ ಉಮಾದೇವಿ, ಶ್ರೀಮತಿ ಕೆಂಚಮ್ಮ, ಶ್ರೀಮತಿ ಜ್ಯೋತಿ, ಶ್ರೀಮತಿ ರಾಧಮ್ಮ, ಶ್ರೀಮತಿ ಕಾವ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.