ಹಿರಿಯೂರು:
ಹೋಟೆಲ್ ಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಹೋಟೆಲ್ ನವರ ಆದ್ಯ ಕರ್ತವ್ಯವಾಗಿದೆ. ಹೋಟೆಲ್ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಗರಸಭೆ ವಾಹನಕ್ಕೆ ನೀಡಿ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ನಗರಸಭೆ ಆಧ್ಯಕ್ಷರಾದ ಅಜಯ್ ಕುಮಾರ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಹೋಟೆಲ್ ಮತ್ತು ಲಾಡ್ಜ್ ಮಾಲೀಕರುಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೆಸಿಡೆನ್ಸಿಯಲ್ ಕಂದಾಯ ಮತ್ತು ನಲ್ಲಿಗಳನ್ನು ವಾಣಿಜ್ಯ ಮಳಿಗೆಗಳಾಗಿ ಪರಿವರ್ತನೆ ಮಾಡಿಕೊಂಡು ಮನೆ ಕಂದಾಯ ನೀರಿನ ಕಂದಾಯ ಮಳಿಗೆ ಬಾಡಿಗೆ ಕಡ್ಡಾಯವಾಗಿ ಪಾವತಿಸಲು ಸಭೆಯಲ್ಲಿ ಅವರು ಸೂಚಿಸಿದರು.
ಪೌರಾಯುಕ್ತರಾದ ಎ.ವಾಸೀಂರವರು ಮಾತನಾಡಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಆಹಾರ ಸಂರಕ್ಷಣಾ ಇಲಾಖೆಯಿಂದ ಕಡ್ಡಾಯವಾಗಿ ಎಫ್.ಎಸ್.ಎಸ್.ಎ.ಐ. ಲೈಸೆನ್ಸ್ ಪಡೆದುಕೊಳ್ಳಬೇಕು. ಮತ್ತು ನಗರಸಭೆಯಿಂದಲೂ ಉದ್ದಿಮೆ ಪರವಾನಿಯನ್ನು ತಪ್ಪದೆ ಪಡೆದುಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ನಗರಸಭಾ ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ ಹೋಟೆಲ್ ಸುತ್ತಮುತ್ತ ವಾತಾವರಣವನ್ನು ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಸರ್ಕಾರ ಹೊರಡಿಸಿರುವ ಆದೇಶದಂತೆ ಆಹಾರಕ್ಕೆ ಟೇಸ್ಟಿಂಗ್ ಪೌಡರ್ ಮತ್ತು ಕಲರ್ ಪೌಡರ್ ಅನ್ನು ಬಳಸಬಾರದು ಎಂಬುದಾಗಿ ಅವರು ಸಲಹೆ ನೀಡಿದರು.
ಈ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿಅಂಬಿಕಾಆರಾಧ್ಯ, ನಗರಸಭಾ ಸದಸ್ಯರಾದ ಹೆಚ್.ಎಂ. ಗುಂಡೇಶ್ ಕುಮಾರ್ ಹಾಗೂ ಕಂದಾಯ ಅಧಿಕಾರಿಗಳಾದ ಜೆ.ಬಿ. ಉಲ್ಲಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ, ಶ್ರೀಮತಿ ಮೀನಾಕ್ಷಿ ಮತ್ತು ಕಿರಿಯ ಆರೋಗ್ಯ ನಿರೀಕ್ಷರಾದ ಅಶೋಕ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.