December 14, 2025
FB_IMG_1729684138943.jpg


ಚಿತ್ರದುರ್ಗ  ಅ.23:
ಬ್ರಿಟೀಷರ ಸಂಕೋಲೆಯಿಂದ ದೇಶವನ್ನು ಮುಕ್ತಿಗೊಳಿಸಿ, ಸ್ವತಂತ್ರದೆಡೆಗೆ ತರಲು ಹೋರಾಡಿದ ಸಾಧ್ವಿ ಹಾಗೂ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಗುಣ, ಶೌರ್ಯ, ಜೀವನ ಆದರ್ಶಗಳು ಇಂದಿನ ಮಹಿಳೆಯರಿಗೂ ಸ್ಫೂರ್ತಿದಾಯಕ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ದೇಶ ಹಾಗೂ ಈ ನಾಡು ಕಂಡಂತಹ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮ. ಅವರ ಜೀವನ ಇಂದಿಗೂ ನೈಜ ಮತ್ತು ನಿರಂತರ ಉದಾಹರಣೆ. ತನ್ನ ನಡೆ ನುಡಿಗಳ ಮೂಲಕ ಸ್ವಾತಂತ್ರ್ಯದ ಸ್ವಾಭಿಮಾನವನ್ನು ಹುಟ್ಟು ಹಾಕಿದ ದಿಟ್ಟ ಮಹಿಳೆ. ಇಂದು ಹೆಣ್ಣು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಹೀಗೆ ಎಲ್ಲಾ ರೀತಿಯಲ್ಲೂ ಸಹ ಸರಿಸಮಾನಳು. ಅಂತರಿಕ್ಷ ವಲಯಲ್ಲಿ ಸಾಧನೆ ಮಾಡುವಂತಹ ಛಲ ಹೆಣ್ಣು ಮಕ್ಕಳಲ್ಲಿದೆ. ಪೋಷಕರು ತಮ್ಮ ಮಕ್ಕಳಿಗೆ ಚನ್ನಮ್ಮನವರ ಧೈರ್ಯ, ಶೌರ್ಯ, ತತ್ವಾದರ್ಶಗಳನ್ನು ಬಿತ್ತಬೇಕು. ಎಂತಹದೇ ಸಂದರ್ಭದಲ್ಲಿಯೂ ಧೃತಿಗೆಡದೆ ಮುನ್ನಡೆದು ಉತ್ತಮ ಸಂಸ್ಕಾರವಂತರಾಗಿ ಬಾಳಬೇಕು ಎಂದು ತಿಳಿಸಿದರು.
ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಡಾ.ಎನ್.ಮಮತ ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚನ್ನಮ್ಮ ಜೀವನ ವೃತ್ತಾಂತವನ್ನು ತಿಳಿಸಿದ ಅವರು, ಬ್ರಿಟೀಷರ ವಿರುದ್ದ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಅವರ ದೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಬ್ರಿಟೀಷರು 1824 ಅಕ್ಟೋಬರ್ 23 ರಂದು ಕಿತ್ತೂರಿನ ಕೋಟೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ, ಬ್ರಿಟೀಷರನ್ನು ಹತ್ತಿಕ್ಕಿದ ಸವಿ ನೆನಪಿಗಾಗಿ ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತದೆ. ಅವರು ಕಿತ್ತೂರು ಸಂಸ್ಥಾನವನ್ನು ಉಳಿಸಲು ಅನಿವಾರ್ಯವಾಗಿ ಬಾಲ್ಯದಲ್ಲಿಯೇ ವೀರಗಚ್ಚೆ ಹಾಕಿದ ಮಹಿಳಾ ಮುಕಟ ಮಣಿ. ನಮ್ಮ ಮಣ್ಣಿನ ಸತ್ವ ನಿಂತಿರುವುದೇ ಇಂತಹ ಮಹಾನ್ ಜೀವಗಳ ಹಿನ್ನೆಲೆಯಲ್ಲಿ. ಈ ಹಿಂದೆ ಇಂತಹ ಮಹನೀಯರ ಬಗ್ಗೆ ವಚನ, ಕೀರ್ತನೆಗಳಲ್ಲಿ ಹೇಳುವುದನ್ನು ನಾವು ಕೇಳಿದ್ದೇವೆ. ಮನೋರಂಜನೆಯ ಮೂಲಕ ನೈತಿಕ ಸಮಾಜವನ್ನು ಕಟ್ಟುವ ಕೆಲಸ ಮಾಡಲಾಗುತ್ತಿತ್ತು. ಹೀಗಾಗಿ ಇಂತಹ ಮಹನೀಯರ ಜೀವನ ಮೌಲ್ಯ, ತತ್ವಾದರ್ಶಗಳನ್ನು ತಮ್ಮ ಮಕ್ಕಳಿಗೂ ತಿಳಿಸಿ ಭವಿಷ್ಯವನ್ನು ಅರಿತು ಜೀವಿಸಬೇಕು ಎಂದರು.
ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಅವರು ಗೀತಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಜೆ.ಶಿವಪ್ರಕಾಶ್, ಉಮಾ ರಮೇಶ್, ಶೈಲಾ ಕಲ್ಲೇಶ್, ಮೋಕ್ಷಾ ರುದ್ರಸ್ವಾಮಿ, ಜಿ.ಬಸವರಾಜಪ್ಪ, ಪ್ರಕಾಶ್, ಮಂಜುನಾಥ ಸ್ವಾಮಿ, ನರೇಂದ್ರ ಬಾಬು, ವೀರಶೈವ ಸಮಾಜದ ವೀರೇಂದ್ರ ಕುಮಾರ್, ಎನ್.ತಿಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ಚಿದಾನಂದಪ್ಪ, ಅಕ್ಕನ ಬಳಗದ ಪ್ರೇಮ ಬಾಲಚಂದರ್, ಅಖಿಲ ಭಾರತ ವೀರಶೈವ ಸಮಾಜದ ಮಹಿಳಾ ನಿರ್ದೇಶಕಿ ರೀನಾ ವೀರಭದ್ರಪ್ಪ, ಶಿವಸಿಂಪಿ ಸಮಾಜದ ನಿರ್ದೇಶಕ ಕೊಟ್ರೇಶ್ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading