March 16, 2026
Screenshot_20241022_193541.png

ಚಳ್ಳಕೆರೆ ಸ.23 ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತುಂಗಾ ಭದ್ರ ಅಪ್ಪರ್ ಭದ್ರಾ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿ ಇನ್ನು ಮುಗಿದಿಲ್ಲ ಕೆರೆಗಳಿಗೆ ನೀರು ತುಂಬಿಸಿಲ್ಲ ಆದರೆ ವರುಣ ದೇವ ಕಣ್ಣು ಬಿಟ್ಟು ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದು ನೀರು ಹೊರ ಹೋಗಿತ್ತಿದೆ.
ಕೆರೆಗಳು ಭರ್ತಿಯಾದರೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿ ಪರದಾಡುವಂತಾಗಿದೆ ಇದೇನಾಪ್ಪ ಎಂದು ಕೊಳ್ಳೋದು ಆದ್ರೆ ನಾಯಕನಹಟ್ಟಿ .ತಳುಕು ಹೋಬಳಿ ಸೇರಿದಂತೆ ಬಹತೇಕ ಗ್ರಾಮೀಣ ಭಾಗದಲ್ಲಿನ ಜನ ಜಾನುವಾರುಗಳ ನೀರಿನದಾಹ ನೀಗಿಸಲು ಕೆರೆಯಂಗಳದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು ಈಗ ಏಕಾಏಕಿ ಮಳೆ ಬಂದು ಕೆರೆ ತುಂಬಿರುವುದರಿಂದ ಕುಡಿಯುವ ನೀರಿನ ದಾಹ ನೀಗಿಸಲು ಸಾಧ್ಯವಾಗದೆ ಇರುವುದು ತಲೆ ಬಿಸಿಯಾಗಿದ್ದು ರೈತರ ಕೊಳವೆ ಮೂಲಕ ಟ್ಯಾಂಕ್ ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಜನರೂ ಸಹ ಕುಡಿಯುವ ನೀರಿನ ಸನಸ್ಯೆ ಬಗ್ಗೆ ಅಧಿಕಾರಿಗೆ ದೂರವಾಣಿ ಮೂಲಕ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading