March 16, 2026
IMG-20241023-WA0119.jpg

ನಾಯಕನಹಟ್ಟಿ:: ಕಳೆದ 15 ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ತತ್ತರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ತೆ ಮಳೆ ಅವಾಂತರದಿಂದ ರೈತರ ಬೆಳೆಗಳು ಜಮೀನಿನಲ್ಲಿ ಬೆಳೆಯಲಿ ನೀರು ನಿಂತು ಬೆಳೆಗಳು ಕೊಚ್ಚಿಹೋಗಿವೆ ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಮುಂತಾಗಬೇಕು ಎಂದು ಕೆಎಂ ಪ್ರಹ್ಲಾದ್ ಹೇಳಿದ್ದಾರೆ.

ಬುಧವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಪಕ್ಕದಲ್ಲಿರುವ ದೊಡ್ಡ ಹಳ್ಳದಲ್ಲಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನಮ್ಮ ನಾಯಕನಹಟ್ಟಿ ಹೋಬಳಿ ಈ ವರ್ಷ ಉತ್ತಮ ಮಳೆಯಾಗಿದೆ ಮತ್ತೊಂದೆಡೆ ರೈತರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ನಮ್ಮ ನಲಗೇತನಹಟ್ಟಿ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಗ್ರಾಮ ಇಲ್ಲಿನ ರೈತರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿರುವ ರೈತರು ಜಾಸ್ತಿ ಇದ್ದಾರೆ ಇಲ್ಲಿನ ಪ್ರಮುಖ ಬೆಳೆಗಳಾದ ಶೇಂಗಾ, ಈರುಳ್ಳಿ, ಸೇವಂತಿಗೆ ಹೂವು, ರಾಗಿ ,ಮೆಕ್ಕೆಜೋಳ, ಸಜ್ಜೆ.ನವಣೆ. ಬೆಳೆಗಳನ್ನು ಬೆಳೆಯುತ್ತಾರೆ ಮಳೆಯ ಅವಾಂತರಕ್ಕೆ ರೈತರು ಬೆಳೆದ ಬೆಳೆಯಲ್ಲಿ ನೀರು ನಿಂತು ಕೆಲವು ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ ಒಟ್ಟಾರೆಯಾಗಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಬೆಳೆ ಪರಿಹಾರ ಕೊಡಿಸಲು ಮುಂದಾಗಬೇಕು ಎಂದರು.

ಇನ್ನೂ ಇದೆ ವೇಳೆ ಬಿ.ಎಸ್. ದೊಡ್ಡಬೋರಯ್ಯ ಮಾತನಾಡಿದರು. ಈ ಭಾಗದ ರೈತರಿಗೆ ಉತ್ತಮ ಮಳೆಯಾಗಿದೆ ಸಾವಿರಾರು ಎಕರೆ ಪ್ರದೇಶದ ರೈತರಿಗೆ ನೀರು ಉಣಿಸುವ ಹಿರೇಕೆರೆ ಕೋಡಿ ಬೀಳುವ ಹಂತದಲ್ಲಿದೆ ರೈತರಿಗೆ ಖುಷಿ ವಿಚಾರ ಎಂದರು

ಇದೇ ಸಂದರ್ಭದಲ್ಲಿ ಕಂಪಲ್ಲಿ ಬೋರಯ್ಯ , ಈಗಲೂ ತಿಪ್ಪೇಸ್ವಾಮಿ, ಮಾರಯ್ಯರು ತಿಪ್ಪೇಸ್ವಾಮಿ, ಸಿ.ಚನ್ನಕೇಶವ,

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading