.
ನಾಯಕನಹಟ್ಟಿ ::ಅ.23.
ನಾಯಕನಹಟ್ಟಿ
ಹೋಬಳಿಯಲ್ಲಿ ರೈತರು ಬೆಳೆಯುವ ಪ್ರಮುಖ ಬೆಳೆಯಲ್ಲಿ ಶೇಂಗಾ ಬೆಳೆ ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದಿದೆ ಆದರೆ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾವಲಹಳ್ಳಿ
ರೀ. ಸರ್ವೆ ನಂಬರ್ 21/2 .
7 ಎಕರೆ 28 ಗುಂಟೆ ಮಲ್ಲೂರಹಟ್ಟಿ ಗ್ರಾಮದ ಜಯಲಕ್ಷ್ಮಿ ಶಿವಣ್ಣ ಮತ್ತು ಅದೇ ಗ್ರಾಮದ ರೀ. ಸರ್ವೆ ನಂಬರ್ 33/2 4. ಎಕರೆ 4. ಗುಂಟೆ
ಕೆ ಜಿ ತಿಪ್ಪೇಸ್ವಾಮಿ,
ರೀ. ಸರ್ವೆ ನಂಬರ್ 21ರಲ್ಲಿ 10 ಎಕರೆ ಶಂಕ್ರಪ್ಪ ನಿಜಲಿಂಗಪ್ಪ, ಮತ್ತು ಗೌಡಗೆರೆ ರೀ. ನಂ. 55 ರಲ್ಲಿ 5 ಎಕರೆ ಮತ್ತು 53 ರಲ್ಲಿ 5 ಎಕರೆ ತಿಪ್ಪೇಸ್ವಾಮಿ ಬನಪ್ಪ ಎಂಬುವವರ ಜಮೀನಿನಲ್ಲಿ ಸತತ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರಕ್ಕೆ ಶೇಂಗಾ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಶೇಂಗಾ ಕಟಾವು ಅಂತಕ್ಕೆ ಬಂದ ಸಂದರ್ಭದಲ್ಲಿ ಬೆಳೆಯಲ್ಲಿ ಮೊಳಕೆ ಹೊಡೆದಿವೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕೆಂದು ಮಲ್ಲೂರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಇದೆ ವೇಳೆ ಮಲ್ಲೂರಹಟ್ಟಿ ಗ್ರಾಮದ ಕೆ.ಜಿ. ತಿಪ್ಪೇಸ್ವಾಮಿ ಮಾತನಾಡಿ ಜೀವನದಲ್ಲಿ ಬರೀ ಬರಗಾಲವನ್ನೇ ನೋಡುತ್ತಿದ್ವಿ ಅತಿವೃಷ್ಟಿ ಮಳೆಯಿಂದಾಗಿ ಸಾಲ ಮಾಡಿ ಬೀಜ ಗೊಬ್ಬರ ತಂದು ಜಮೀನಿನಲ್ಲಿ ಬಿತ್ತಿ ಬೆಳೆದ ಶೇಂಗಾ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಸರ್ಕಾರ ಇತ್ತ ಕಡೆ ಗಮನ ಹರಿಸಿ ರೈತರಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯನ್ನು ಮಾಡಿದರು.


ಇನ್ನೂ ರೈತ ಶಿವರಾಜ್ ಮಾತನಾಡಿ ಶೇಂಗಾ ಬೆಳೆಯಲ್ಲಿ ಕೊಳೆ ರೋಗ ಮತ್ತು ಮೊಳಕೆ ಸಹ ಬಂದಿದೆ ಕೇಂದ್ರ ಸರ್ಕಾರಕ್ಕೆ ನಾವು ಬೆಳೆ ಪರಿಹಾರಕ್ಕೆ ಇನ್ಸೂರೆನ್ಸ್ ಕಟ್ಟಿದ್ದೇವೆ ಟೋಲ್ ಫ್ರೀ ನಂಬರ್ ಕೊಟ್ಟಿದ್ದಾರೆ ಅದಕ್ಕೆ ಕರೆ ಮಾಡಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ರೈತರಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಹಶೀಲ್ದಾರ್ ರವರು ಇದರ ಬಗ್ಗೆ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರೈತರಾದ ಶಂಕ್ರಪ್ಪನಿಜಲಿಂಗಪ್ಪ ತಿಪ್ಪೇಸ್ವಾಮಿ,ಬನಪ್ಪ, ಶಿವರಾಜ್ ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.