March 16, 2026
Screenshot_20241023_084145.png

ಚಳ್ಳಕೆರೆ ಅ.23

ನಿಷೇಧಿತ ಪ್ಲಾಸ್ಟಿ ಕವರ್ ಕಟ್ಟಿಕೊಂಡು ಪೌರ ಕಾರ್ಮಿಕರು ಬೆಳ್ಳಂಬೆಳಗ್ಗೆ ಸ್ವಚ್ಚತೆ ಮಾಡುತ್ತಿರುವ ದೃಶ್ಯ ಕಂಡು ಬಂತು.
ಹೌದು ಇದು ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಸಂತೆ ಮೈದಾನ. ಬೆಂಗಳೂರು ರಸ್ತೆ ಸೇರಿದಂತೆ ವಿವಿಧ ಕಡೆ ನಗರಸಭೆ ಪೌರಕಾರ್ಮಿಕರು ಸ್ವಚ್ಚಾ ಕಾರ್ಯ ಮಾಡುತ್ತಿರುವಾಗ ಯಾವುದೇ ಸುರಕ್ಷಿತ ಸಾಧನಗಳನ್ನು ಹಾಕಿಕೊಳ್ಳದೆ ಸ್ವಚ್ಚತೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಪೌರ ಕಾರ್ಮಿಕರು ಕಸ ವಿಲೇವಾರಿ, ಚರಂಡಿ, ರಸ್ತೆ ಹಾಗೂ ಬೀದಿಗಳನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಗ್ಲೌಸ್, ಮಾಸ್ಕ್, ಬೂಟ್, ಸೇರಿದಂತೆ ಸುರಕ್ಷತಾ ಸಾಮಾಗ್ರಿಗಳನ್ನು ಧರಿಸ ಬೇಕು ಆದರೆ ನಿಷೇಧಿತ ಪ್ಲಾಸ್ಟಿ ಕವರ್ ಗಳನ್ನು ಪೌರಕಾರ್ಮಿಕರು ಕಟ್ಟಿಕೊಂಡು ಸ್ವಚ್ಚತೆ ಮಾಡುತ್ತಿದ್ದಾರೆ.

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು .ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ.ಎಂದು ನೀತಿ ಪಾಠ ಹೇಳುವ ಅಧಿಕಾರಿಗಳ ಕಣ್ಣಗೆ ಪೌರಕಾರ್ಮಿಕರು ಜೀವದ ಹಂಗು ತೊರೆದು ಗೊಬ್ಬು ವಾಸನೆ ಸಹಿಸಿಕೊಂಡು ಯಾವುದೇ ಸುರಕ್ಷತಾ ಸಾಮಾಗ್ರಿಗಳಿಲ್ಲದೆ ಸ್ವಚ್ಚತೆ ಮಾಡುತ್ತಿರುವ ದೃಶ್ಯ ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೇ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸುರಕ್ಷತಾ ಸಾಮಾಗ್ರಿಗಳ ಸೌಲಭ್ಯ ನೀಡುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading