July 10, 2025
1750684722484.jpg


ಹಿರಿಯೂರು:
ನಂದಿನಿ ಹಾಲು ಮತ್ತು ಉತ್ಪನ್ನಗಳು ಯಾವುದೇ ಕಲಬೆರಕೆ ಇಲ್ಲದ ಮತ್ತು ಪರಿಶುದ್ಧವಾದ ಉತ್ಪನ್ನವಾಗಿದ್ದು, ಹಾಲಿನ ಸೇವನೆಯು ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಒಂದು ಆಹಾರವಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ಪ್ರಣವ್ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ನಂದಿನಿ ಪ್ರಾಂಚೈಸಿ ಪಾರ್ಲರ್ ಮಳಿಗೆಯನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರಿಂದ ರೈತರಿಗಾಗಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೈನುಗಾರಿಕೆ ಮೂಲಕ ಲಕ್ಷಾಂತರ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತಿದೆ. ಹಿರಿಯೂರು ಒಳಗೊಂಡಂತೆ ವಿವಿಧೆಡೆಗಳಲ್ಲಿ ಫ್ರಾಂಚೈಸಿಗಳನ್ನು ತೆರೆದು ನಂದಿನಿ ಉತ್ಪನ್ನಗಳನ್ನು ಸಿಗುವಂತೆ ಮಾಡಲಾಗುತ್ತಿದೆ. ಎಂದರಲ್ಲದೆ,
ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವ ಮೂರ್ತಿ ಅವರು ಮಾತನಾಡಿ ಶಿಮೂಲ್ ವ್ಯಾಪ್ತಿಯ ಚಿತ್ರದುರ್ಗ ವಿಭಾಗದಲ್ಲಿ 400 ಹಾಲು ಉತ್ಪಾದಕರ ಸಂಘಗಳ ಮೂಲಕ ಲೀಟರ್ ಹಾಲು ಉತ್ಪಾದಕರಿಂದ ಸುಮಾರು ಪ್ರತಿ ದಿನ 2.50ಲಕ್ಷ ಲೀಟರ್ ಖರೀದಿ ಮಾಡಿದ ಹಾಲನ್ನು ಸಂಸ್ಕರಿಸಿ ಶುದ್ಧ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ಸುಮಾರು 160ಕ್ಕೂ ಹೆಚ್ಚು ವಿವಿಧ ಬಗೆಗಳ ಉತ್ಪನ್ನಗಳನ್ನು ನೀಡಲಾಗುತ್ತಿದೆ. ನಾವು ನಿರ್ದೇಶಕರಾಗಿ ಆಡಳಿತ ಮಂಡಳಿಗೆ ಬಂದ ಮೇಲೆ ಕೇವಲ 8ತಿಂಗಳಲ್ಲಿ ನಮ್ಮ ಒಕ್ಕೂಟದಿಂದ ಆರು ಪಾರ್ಲರ್ ಗಳು 10ಕ್ಕೂ ಹೆಚ್ಚು ಪ್ರಾಂಚೈಸಿ ಪಾರ್ಲರ್ ಗಳು ಗ್ರಾಹಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದೆ. ಚಳ್ಳಕೆರೆ, ಹಿರಿಯೂರು ನಗರದ ಹಾಗೂ ಯಲ್ಲದಕೆರೆ ಗ್ರಾಮದಲ್ಲೂ ಕೂಡ ಪ್ರಾಂಚೈಸಿ ಪಾರ್ಲರ್ ಗಳನ್ನು ಉದ್ಘಾಟಿಸಲಾಯಿತು ಎಂಬುದಾಗಿ ಅವರು ಹೇಳಿದರು.
ನಂದಿನಿ ಉತ್ಪನ್ನಗಳು ಹೆಚ್ಚಿಗೆ ಮಾರಾಟವಾದಲ್ಲಿ ನಾವು ರೈತರಿಂದ ಇನ್ನೂ ಹೆಚ್ಚು ಹೆಚ್ಚು ಹಾಲು ಖರೀದಿಸಲು ಸಾಧ್ಯವಾಗುತ್ತದೆ. ನಂದಿನಿ ಉತ್ಪನ್ನಗಳು ಕೇವಲ ಜಿಲ್ಲೆ, ತಾಲ್ಲೂಕು, ರಾಜ್ಯವಲ್ಲದೆ ಅಂತರ್ ರಾಜ್ಯಮತ್ತು ವಿದೇಶಗಳಲ್ಲೂ ಸಹ ಉತ್ತಮವಾಗಿ ಮಾರಾಟವಾಗುತ್ತಿದೆ.
ಇದರಿಂದ ಹೈನುಗಾರಿಕೆ ರೈತರಿಗೆ ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳು ಹಾಗೂ ಮುಖ್ಯವಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 50 ನಂದಿನಿ ಮಳಿಗೆಗಳನ್ನು ತೆರೆಯಲು ಗುರಿ ಹೊಂದಲಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಮುಲ್ ಮಾರುಕಟ್ಟೆ ವ್ಯವಸ್ಥಾಪಕರಾದ ಬಿ.ಕೆ.ಪ್ರಮೋದ್, ಜಿಲ್ಲಾ ಮಾರುಕಟ್ಟೆ ಉಸ್ತುವಾರಿ ಬಿ.ಎಂ. ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ, ನಂದಿನಿ ಪಾರ್ಲರ್ ಮಾಲಿಕರಾದ ಕರವೇ ಅಧ್ಯಕ್ಷರಾದ ರಾಮಕೃಷ್ಣಪ್ಪ, ಮುಖಂಡರಾದ ಜಗದೀಶ್ ಕಂದಿಕೆರೆ, ಮಾಜಿ ನಗರಸಭಾ ಸದಸ್ಯರಾದ ರವಿಚಂದ್ರನಾಯಕ್, ದಾದಾಪೀರ್, ಗೋ.ಬಸವರಾಜ್, ಟಿ.ಚಂದ್ರಶೇಖರ್ ಸೇರಿದಂತೆ ಶಿಮುಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading