
ಹೊಸದುರ್ಗ: ಮನುಷ್ಯ ಪ್ರತಿ ದಿನವೂ ಸಹಾ ಕ್ರಮಬದ್ದವಾದ ಯೋಗ ಮಾಡುತ್ತಾ ಹೋದಾಗ ಅದರ ಪ್ರಭಾವ ಮತ್ತು ಪರಿಣಾಮ ಎರಡನ್ನೂ ಸಹಾ ಅನುಭವಿಸಲು ಸಾಧ್ಯವಿದೆ, ಯೋಗದಿಂದ ಎಲ್ಲಾ ರೋಗಗಳು ನಿವಾರಣೆಯಾಗಲು ಸಾಧ್ಯ ಎಂದು ಕಂಗುವಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯ ಡಾ:ನಧಾಪ್ ತಿಳಿಸಿದರು.
ತಾಲೂಕಿನ ಕಂಗುವಳ್ಳಿಯ ಆಯುಷ್ ಆಸ್ಪತ್ರೆಯ ಸಭಾಂಗಣದಲ್ಲಿ ೧೧ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಕುರಿತು ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳಿಗೆ ಯೋಗಾಸನಗಳನ್ನು ಮತ್ತು ಪ್ರಾಣಾಯಾಮಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಿಯಮತವಾದ ಯೋಗಾಸನ ಮಾಡುವುದರಿಂದ ಆತಂಕವನ್ನು ಕಡಿಮೆ ಮಾಡುತ್ತದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಡಾಕ್ಟರ್ ಪವನ್ ಕುಮಾರ್ ಮಾತನಾಡಿ ಯೋಗ ವ್ಯಾಯಾಮ ಮಾಡುವುದರಿಂದ ವ್ಯಕ್ತಿತ್ವ ವಿಕಾಸನ ಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಉತ್ತಮ ನಿದ್ರೆಗೆ ಸಹಾಯಕ ಮತ್ತು ಶಾರೀರಿಕ ಮಾನಸಿಕ ಆರೋಗ್ಯ ವನ್ನು ಸ್ವಸ್ತಿತಿಯಲ್ಲಿಡಲು ಪರಿಪೂರ್ಣ ಆರೋಗ್ಯವನ್ನು ನೀಡುತ್ತದೆ ಎಂದು ತಿಳಿಸಿದರು. ಆರೋಗ್ಯ ಮಂದಿರದ ಯೋಗ ತರಬೇತಿದಾರ ಮರುಳ ಸಿದ್ದೇಶ್ವರ ಯೋಗಾಸನಗಳ ಬಗ್ಗೆ ತಿಳಿಸಿಕೊಟ್ಟರು
ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಘಟಕದ ಸಿಬ್ಬಂದಿ ವರ್ಗದವರಾದ ಗುರು ಬಸವರಾಜ್ (ಫಾರ್ಮಸಿಸ್ಟ್) ಮತ್ತು ಭರತ್ ಹಾಗೂ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಮುಖ್ಯೋಉಪಾಧ್ಯಾಯ ರಮೇಶ್ ಮತ್ತು ದೈಹಿಕ ಶಿಕ್ಷಕ ಶಿವಕುಮಾರ್ ಕಂಗುವಳ್ಳಿಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಶಾಲೆ ಮಕ್ಕಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.