
ನಾಯಕನಹಟ್ಟಿ: ಆರೋಗ್ಯಕರ ಜೀವನ ಉತ್ತಮ ದೃಷ್ಟಿಗೆ ದಾರಿ ಎಂದು ಕರವೇ ಕನ್ನಡಸೇನೆ ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷ ಕೆ. ಜಿ. ಮಂಜುನಾಥ್ ಜೋಗಿಹಟ್ಟಿ ಅಭಿಪ್ರಾಯಪಟ್ಟರು.
ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ನಾಯಕನಹಟ್ಟಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿತ್ರದುರ್ಗ ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗ ಚಿತ್ರದುರ್ಗ ಜಿಲ್ಲೆ ತಾಲೂಕು ವೈದಾಧಿಕಾರಿಗಳ ಕಚೇರಿ ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ನಾಯಕನಹಟ್ಟಿ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಕಣ್ಣಿನ ಇತರೆ ತೊಂದರೆಗಳಿಗೆ ಚಿಕಿತ್ಸೆ ಇವರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಂಕರ ಕಣ್ಣಿನ ಆಸ್ಪತ್ರೆ ಮದರಕೆರೆ ಸಹ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕ ಕನ್ನಡ ಸೇನೆ ವತಿಯಿಂದ 5ನೇ ಬಾರಿ ಶಿಬಿರವನ್ನು ಆಯೋಜಿಸಿದ್ದು ಗ್ರಾಮೀಣ ಪ್ರದೇಶದ ಕೊಡು ಬಡವರಿಗೆ ಈ ಶಿಬಿರವು ವರದಾನವಾಗಿದ್ದು ವೃದ್ಧರ ಕಣ್ಣಿನ ಸಮಸ್ಯೆಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು ಪ್ರತಿಯೊಬ್ಬರು ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು ಚಿತ್ರದುರ್ಗ ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಆಗಮಿಸುತ್ತಿದ್ದು ಮಾನವನ ದೇಹದಲ್ಲಿ ಅತಿ ಮುಖ್ಯವಾದ ಅಂಗ ಕಣ್ಣು ಈ ಶಿಬಿರ ಐದನೇ ಬಾರಿ ಯಶಸ್ವಿಯಾಗಿದೆ ಇದಕ್ಕೆ ಸಹಕಾರ ನೀಡಿದ ಕರ್ನಾಟಕ ಕನ್ನಡ ಸೇನೆಯ ಪದಾಧಿಕಾರಿಗಳಿಗೂ ಮತ್ತು ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಉತ್ತಮವಾದ ಆಹಾರ ಕ್ರಮಗಳನ್ನು ಅನುಸರಿಸುವುದನ್ನು ಜನ ಮರೆತಿದ್ದಾರೆ. ಉತ್ತಮ ಚಟುವಟಿಕೆಯುಳ್ಳ ಜೀವನ ಶೈಲಿ ರೂಡಿಸಿಕೊಳ್ಳಬೇಕು ಎಂದರು,
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಒಂದನೇ ವಾರ್ಡಿನ ಸದಸ್ಯ ಎಂ ಟಿ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹೋಬಳಿ ಘಟಕ ಉಪಾಧ್ಯಕ್ಷ ಕೆ.ಪಿ ನಾಗರಾಜ್ ಜಾಗನೂರಹಟ್ಟಿ, ಪ್ರದೀಪ್ ಸೇರಿದಂತೆ ಶಂಕರ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.