
ವರದಿ ಹರೀಶ್ ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ
ಹೋಬಳಿಯ ನೇರಲಗುಂಟೆ ಗ್ರಾ.ಪಂ. ವ್ಯಾಪ್ತಿಯ ಭೀಮನಕೆರೆ ಗ್ರಾಮದಲ್ಲಿ ಕೆರೆ ನೀರಿಗೆ ವಿಷಪೂರಿತ ರಾಸಾಯನಿಕ ಬೆರೆಸಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ, ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ಮೀನುಗಳು ಸಾಯುತ್ತಿದ್ದಾವೆ ಲಕ್ಷಾಂತರ ಮೀನುಗಳು ನೀರಿನಲ್ಲಿ ಸತ್ತುಹೋಗಿವೆ ಇನ್ನೇನು ಮೀನು ಹಿಡಿಯುವಷ್ಟರಲ್ಲಿ ದುಷ್ಕರ್ಮಿಗಳು ಸಾಯಿಸಿದ್ದು ಅಪಾರ ನಷ್ಟವಾಗಿದೆ, ಕೈಗೆ ಬಂದ ತುತ್ತ್ತು ಬಾಯಿಗೆ ಬರಲಿಲ್ಲ 9 ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಮೀನುಗಳು ಇನ್ನೇನು ಹಿಡಿಯುವ ಹಂತಕ್ಕೆ ಬಂದು ಹಾಕಿದ ಸುಮಾರು ಹದಿಮೂರು ಲಕ್ಷ ಬಂಡವಾಳವಾಗಿದ್ದು ಸುಮಾರು 8 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಟೆಂಡರ್ ಕೂಗಿರುವ ಗೌರಣ್ಣ ಅಳಲು ತೋಡಿಕೊಂಡರು. ಅಕ್ಕ-ಪಕ್ಕದ ಮನೆಯ ಹತ್ತಿರ ಸಾಲ, ಬಂಗಾರದವನ್ನು ಗಿರಿವಿ ಇಟ್ಟು ಪಡೆದ ಸಾಲ, ಜಮೀನು ಬೇರೆಯವರಿಗೆ ಅಡವಿಟ್ಟು ಹಣ ಸಾಲ ಪಡೆದುಕೊಂಡಿದ್ದೇನೆ. 2024ರ ಏಪ್ರಿಲ್ 28ರಂದು ಪ್ರಥಮ ಟೆಂಡರ್ ಡಿ.ಡಿ. 3,11,001 ರೂಪಾಯಿಗಳನ್ನು ಕಟ್ಟಿದ್ದೇವೆ. 2ನೇ ಟೆಂಡರ್ 2025 ಏಪ್ರಿಲ್ 28ರಂದು 3,31,001 ರೂಪಾಯಿ ಟೆಂಡರ್ ಹಣ ಕಟ್ಟಿದ್ದೇವು.







ಭೀಮನಕೆರೆ ಸುಮಾರು 100 ಎಕರೆ ವಿಸ್ತೀರ್ಣ ಹೊಂದಿರುವ ಕಳೆದ ವರ್ಷ ಬಾರಿ ಮಳೆಯಿಂದಾಗಿ ಕೆರೆ ಕೋಡಿ ಹರಿದು ಬಿದ್ದಿದ್ದು ಗೌರಣ್ಣ, ದುರುಗೇಶ್ 9 ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಮಾದಿಗ ಸಮುದಾಯದವರು ಮುಂದುವರೆಯ ಬಾರದು ಎಂಬ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಕೆರೆಗೆ ವಿಷಪೂರಿತ ಔಷಧಿ ಸಿಂಪಡಿಸಿದ ಕಾರಣ ಮೀನಿನ ಮರಿಗಳು ಮರಣಹೋಮವಾಗಿದೆ ಕೆರೆಯ ದಡದಲ್ಲಿ ಮೀನುಗಳು ಮೃತಪಟ್ಟು ತೆಲಾಡುತ್ತಿದೆ. ಕೆರೆಯ ನೀರನ್ನು ವಿಷವಾಗಿ ಪರಿವರ್ತೆನೆಯಾಗಿದೆ. ಆ ಊರಿನ ಗ್ರಾಮಸ್ಥರು ಆತಂಕಕ್ಕೆ ಕಾರಣವಾಗಿದೆ.
ಮೀನುಗಳು ಇನ್ನೇನು ಹಿಡಿಯುವ ಹಂತಕ್ಕೆ ಬಂದಾಗ ಸಂಸಾರದ ಬಂಡಿ ಸಾಗಿಸಬಹುದು ಎನ್ನುವ ಆಲೋಚನೆಯಲ್ಲಿದ್ದೆವು ಆದರೆ ಅದ್ಯಾವ ದುಷ್ಕರ್ಮಿಗಳಿಗೆ ಕಣ್ಣು ಬಿತ್ತೊ ಗೊತ್ತಿಲ್ಲ. 1 ಪೈಸೆ ಆದಾಯ ತೆಗೆದುಕೊಳ್ಳದೇ ಗೌರಣ್ಣ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ಇಂತಹ ದೃಷ್ಕçತ್ಯ ಮಾಡುವ ಕಿಡಿಗೇಡಿಗಳಿಗೆ ಸಂಬಧಪಟ್ಟ ಇಲಾಖೆಯವರು ಸೂಕ್ತ ತನಿಖೆ ನೆಡೆಸಿ ನೊಂದ ಮೀನುಗಾರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಒಂದೊAದು ಮೀನು 2 ಕೆಜಿ ತೂಕವಿದ್ದವು ಆದರೆ ಯಾರೋ ನೀರಿನಲ್ಲಿ ವಿಷ ಬೆರಸಿದ್ದರಿಂದ ಲಕ್ಷಾಂತರ ಮೀನುಗಳು ಮರಣಹೊಂದಿ ಅಪಾರವಾದ ನಷ್ಟವಾಗಿದೆ. ಕೆರೆಯಲ್ಲಿ ಜಾಲಿ ಗಿಡಗಳು ಬೆಳೆದಿದ್ದರಿಂದ ಸಾಕಷ್ಟು ಮೀನುಗಳು ಸಿಕ್ಕಿಹಾಕಿಕೊಂಡಿದೆ. 2 ವರ್ಷಗಳಿಂದ ಲಾಭವನ್ನು ಕಾಣಿಸದ ಹಿನ್ನಲೆಯಲ್ಲಿ ಮೀನಿನ ಮರಿಗಳು ಬೆಳೆದು ಮೀನು ಹಿಡಿಯುವಷ್ಟರಲ್ಲಿ ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಈ ಕೆಲಸವನ್ನು ಮಾಡಿರಬಹುದು. ಕೆರೆಯಲ್ಲಿ 1 ಅಥವಾ 2 ಕೆಜಿ ತೂಕದಷ್ಟು ಬೆಳೆದಿಂದ ಸಣ್ಣ ಮೀನುಗಳು ಸಾವಿಗಿಡಾಗಿವೆ. ಸುಮಾರು 2-3 ದಿನಗಳಿಂದ ನೀರಿನ ಮೇಲ್ಬಾಗದಲ್ಲಿ ತೆಲಾಡುತ್ತಿರುವುದು ಕಂಡುಬAದಿದೆ.
ಸಂದರ್ಭದಲ್ಲಿ ಉಪಸ್ಥಿತರಾದ ದುರುಗೇಶ್, ಗೌರಣ್ಣ, ನಾಗಭೂಷಣ್, ಶಾಂತ್, ನಾಗೇಶ್, ಸಂತೋಷ, ಕೆ.ಪಿ.ರಾಜ್, ರಮೇಶ್, ನಾಗರಾಜ್, ಯಜಮಾನ ತಿಪ್ಪೇಸ್ವಾಮಿ, ಜಗನ್ನಾಥ, ವೆಂಕಟೇಶ್, ಸೌಳೂರು ದುರುಗೇಶ್, ಹಾಗೂ ಇನ್ನೂ ಇತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.