March 17, 2026
IMG-20250423-WA0219.jpg

.

ಹುಂಡಿ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಕಂದಾಯ ಹಾಗೂ ಬ್ಯಾಂಕ್ ಸಿಬ್ಬಂದಿ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿ.

ನಾಯಕನಹಟ್ಟಿ : ಐತಿಹಾಸಿಕ ಗುರು- ತಿಪ್ಪೇರುದ್ರಸ್ವಾಮಿಯ
ವಾರ್ಷಿಕ ಜಾತ್ರೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯವನ್ನು ಬುಧವಾರ ದೇವಸ್ಥಾನದ ಆವರಣದಲ್ಲಿ ಬ್ಯಾಂಕ್‌ ಸಿಬ್ಬಂದಿ ಕಂದಾಯ ಇಲಾಖೆ, ದೇವಸ್ಥಾನ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆಸಲಾಯಿತು.

ಮೊದಲು ಹೊರಮಠ ದೇವಸ್ಥಾನದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು.ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 5:30 ಗಂಟೆಗೆ ಮುಕ್ತಾಯವಾಯಿತು.

ಹೊರಮಠದಲ್ಲಿ 19,000,95 ಒಳಮಠದಲ್ಲಿ 47,290,60 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಈ ವರ್ಷದ ಜಾತ್ರೆಯ ನಂತರ 66,29,155 ಹಣ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು
ದೇವಸ್ಥಾನದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಇನ್ನಿತರೆ ಬೆಳ್ಳಿ ವಸ್ತುಗಳನ್ನು ಕಂದಾಯ ಇಲಾಖೆಗೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಎಚ್‌. ಗಂಗಾಧರಪ್ಪ, ಕಂದಾಯ ನಿರೀಕ್ಷಕ ಚೇತನ್‌ಕುಮಾರ್‌, ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ್, ರವಿ ,ಶಂಕರ್‌, ಕೆನರಾಬ್ಯಾಂಕ್ ಸಿಬ್ಬಂದಿ ವಿರೂಪಾಕ್ಷಪ್ಪ, ಪ್ರಸನ್ನ,, ಕೆ.ಎಚ್.ಚೇತನಾ, ಎಂ. ಬಿ. ಮಹಾಸ್ವಾಮಿ, ವೆಂಕಟೇಶ್, ಬಿ.ಓಬಳೇಶ್, ಕೆ. ಬಿ. ಪುರಂದರ್, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಮನು, ಪ್ರಕಾಶ್,ಶಿವಣ್ಣ, ಶಂಕರ್, ಶಿವರಾಜ್,, ಮಂಜುನಾಥ, ರುದ್ರೇಶ್, ಗುರುಸ್ವಾಮಿ, ಮಹಾದೇವ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading