ಚಳ್ಳಕೆರೆ ಏ24
ದೇವಸ್ಥಾನದಲ್ಲಿ ಹೋಳಿಗೆ ಊಟ ಸವಿದ ಸುಮಾರು ಮುವತ್ತಕ್ಕೂ ಹೆಚ್ಚು ಜನರು ಆರೋಗ್ಯದಲ್ಲಿ ಏರು ಪೇರು.
ಹೌದು ಇದು ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಶ್ರೀ ಮಾರಿಯಮ್ಮ ದೇವಿಯ ಪೂಜಾರಿಯವರು ಹರಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 8=30 ಸುಮಾರಿನಲ್ಲಿ ದೇವಸ್ಥಾನದ ಆವರಣದಲ್ಲಿ ಹರಕೆ ತೀರಿಸಲು ಸುಮಾರು250 ಜನರಿಗೆ ಹೋಳಿಗೆ ಬಾಳೆ ಹಣ್ಣಿನ ಸೀಕರಣೆ ಊಟ ಹಾಕಿಸಿದ್ದಾರೆ ಅದರಲ್ಲಿ ಸುಮಾರು 35 ಕ್ಕೂ ಹೆಚ್ಚು ಜನರಿಗೆ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚಳ್ಳಕೆರೆ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಹಾಗೂ ಅಡುಗೆ ತಯಾರಿಗೆ ಬಳಸಿ ಉಳಿದಿದ್ದ ಬಾದಾಮಿ ಪೌಡರ್ ತಪಾಸಣೆಗೆ ಪಡೆದಿದ್ದಾರೆ.
ಹೆಚ್ಚಿನ ಅನಾವುತ ಸಂಭವಿಸದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದು ಸಂಚಾರಿ ಆರೋಗ್ಯ ತಪಾಸಣೆ ವಾಹನವೂ ಸಹ ಗ್ರಾಮಕ್ಕೆ ಬರಲಿದೆ












ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷಾ.ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ.ಗ್ರಾಮಲೆಕ್ಕಾಧಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.