July 21, 2025
1745406338817.jpg


ಹಿರಿಯೂರು:
ಕಳೆದ 25 ವರ್ಷಗಳಿಂದ ಇಲ್ಲಿಯ ತನಕ ಕೇವಲ ಮೂರರಿಂದ ನಾಲ್ಕು ಬಾರಿ ದಿಂಡಾವರ ಕೆರೆ ತುಂಬಿದ್ದು, ಸತತ ಬರಗಾಲಕ್ಕೆ ಒಳಗಾದ ದಿಂಡಾವರದ ಜನತೆ ಋಷಿಶೃಂಗೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಹೋಮವನ್ನು ಮಂಗಳವಾರ ಮಾಡಿಸಿದ್ದಾರೆ.
ದಿಂಡಾವರ ಗ್ರಾಮದ ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರು ಸೇರಿ ದಿಂಡಾವರ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಹೋಮದ ಪ್ರಯುಕ್ತ ಕನಿಷ್ಠ ಒಂದೊಂದು ರೂಪಾಯಿಗಳನ್ನು ಸ್ವೀಕರಿಸಿ ಈ ಹೋಮ ಮಾಡಲಾಗಿದೆ.
ಋಷಿಶೃಂಗಿ ಮಹರ್ಷಿಗಳು ರಾಮಾಯಣದಲ್ಲಿ ದಶರಥ ಮಹಾರಾಜರಿಗೆ ಪತ್ರ ಕಾಮೇಷ್ಠಿಯಾಗವನ್ನು ಮಾಡಿರುತ್ತಾರೆ ಹಾಗೂ ಮಹರ್ಷಿಗಳು ಹೋದಲೆಲ್ಲಾ ಮಳೆ-ಬೆಳೆ ಸುಸೂತ್ರವಾಗಿ ಆಗುತ್ತದೆ ಎಂಬ ನಂಬಿಕೆ ಇಡೀ ರಾಜ್ಯವೇ ಈ ದೇವಸ್ಥಾನಕ್ಕೆ ಶಿರಬಾಗಿ ಬರುವುದನ್ನು ನೋಡುತ್ತಾ ಬಂದಿರುತ್ತೇವೆ.
ಈ ಸಂದರ್ಭದಲ್ಲಿ ಚಂದ್ರಗಿರಿ , ದಿಂಡಾವರ ನಾರಾಯಣಸ್ವಾಮಿ, ಸುರೇಶ್ ಗೌಡ, ಶ್ರೀನಿವಾಸ್ ಹೆಚ್ಚೆ, ಗ್ರಾಮಪಂಚಾಯಿತಿ ಸದಸ್ಯ ವಿರೂಪಾಕ್ಷ ಸೇರಿದಂತೆ ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ಕೂಡಿ ಹೋಮ ಮಾಡಿಸುತ್ತಿರುತ್ತಾರೆ.
ಎಲ್ಲಾ ಋಷಿಮುನಿಗಳು ಹಾಗೂ ಭಕ್ತರು ಭಗವಂತನಲ್ಲಿ ಲೀನವಾದರೆ ಇಲ್ಲಿ ಭಗವಂತನಾದ ಮಹಾದೇವ ಋಷಿಶೃಂಗಿ ಮಹರ್ಷಿಗಳಲ್ಲಿ ಲೀನವಾಗಿರುವ ಭಾರತದಲ್ಲಿರುವ ಏಕೈಕ ದೇವಾಲಯ ಇದಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading