March 23, 2026
IMG-20260323-WA0259.jpg

ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ೧೨ನೇ ಶತಮಾನದ ವಚನ ಸಾಹಿತ್ಯ ಚಳುವಳಿಗೆ ಮುನ್ನುಡಿ ಬರೆದ ಆದ್ಯ ವಚಕಾರರ ಶ್ರೀ ದೇವರ ದಾಸಿಮಯ್ಯ ಅವರು ಶ್ರೇಷ್ಠ ದಾರ್ಶನಿಕರು. ನೇಕಾರಿಕೆ ಶ್ರೇಷ್ಠ ಕಾಯಕದ ಮೂಲಕ ಮನುಕುಲದ ಮಾನ ಮುಚ್ಚಲು ಹಾಗೂ ದೇವಾನು ದೇವತೆಗಳಿಗೆ ನೂಲಿನಿಂದ ಬಟ್ಟೆ ನೇಯ್ದೆ ಕೊಟ್ಟರು. ಇಂತಹ ಮಹಾನ್ ವಚನಕಾರರ ಬಗ್ಗೆ ಸರಕಾರ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ, ಕಾಳಜಿ ವಹಿಸಬೇಕು ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಗೋ.ತಿಪ್ಪೇಶ್ ಸರ್ಕಾರವನ್ನ ಆಗ್ರಹಿಸಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರ ದಾಸಿಮಯ್ಯನವರ ಕುಲದಲ್ಲಿ ಹುಟ್ಟಿರುವ ದೇವಾಂಗ ಸಮಾಜದವರು ನಾಡಿನೆಲ್ಲೆಡೆ ನೆಲೆಸಿದ್ದು, ಎಲ್ಲಾ ರಂಗದಲ್ಲಿಯೂ ಅತ್ಯಂತ ಹಿಂದುಳಿದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಆದ್ಯವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ವಚನಗಳು ಸಹಕಾರಿ. ಸಮಾಜದ ಪರಿವರ್ತನೆಗೆ ವಚನಗಳನ್ನು ನೀಡಿದ ಅವರ ಕೊಡುಗೆ ಅಪಾರವಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕ ಓಂಕಾರಪ್ಪ ಉಪನ್ಯಾಸ ನೀಡಿದರು. ತಾಲೂಕು ದೇವಾಂಗ ಸಂಘದ ಉಪಾಧ್ಯಕ್ಷ ಆರ್.ಶಾಂತಮೂರ್ತಿ ಪತ್ರಕರ್ತ ಎಸ್.ಸುರೇಶ್ ನೀರಗುಂದ ಯುವಮುಖಂಡ ಜಿ.ಗಣೇಶಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್.ಗೋವಿಂದರಾಜು, ಬನಶಂಕರಿ ಬ್ಯಾಂಕ್ ಅಧ್ಯಕ್ಷ ಕಮಲ್ ರಾಮಚಂದ್ರ, ಉಪಾಧ್ಯಕ್ಷ ಡಿ.ಆರ್.ನಾಗೇಶಪ್ಪ, ಸಮಾಜದ ಗೌಡ್ರು ಸೇರಿದಂತೆ ದೇವಾಂಗ ಸಮಾಜದ ಮತ್ತಿತರ ಮುಖಂಡರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading