March 23, 2026
IMG-20260323-WA0258.jpg

ವ್ಯಾಪಾರ ಬೆಳವಣಿಗೆ ಕುರಿತು ಕಾರ್ಯಗಾರ; ಉದ್ಯಮಿ ಸದ್ಗುರು ಪ್ರದೀಪ್ ಅಭಿಮತ
ಗ್ರಾಹಕರನ್ನ ಸೆಳೆಯುವ ಚಾಣಾಕ್ಷತೆ ವ್ಯಾಪಾರಿಗಳಲ್ಲಿರಬೇಕು
ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ನಾವು ಮಲಗಿದ ಮೇಲೆ ಕಾಣುವ ಕನಸು, ನಮ್ಮ ನಿಜ ಜೀವನದಲ್ಲಿ ನನಸಾಗುವುದಿಲ್ಲ. ನಾವು ಮಲಗದೆ ಕಾಣುವ ಕನಸನ್ನು ನನಸು ಮಾಡಿಕೊಳ್ಳಲು ನಿದ್ದೆ ಮಾಡದೆ, ನಮ್ಮ ಗುರಿಯ ಕಡೆಗೆ ಸಾಗಿದಾಗ ನಾವು ಅದರಲ್ಲಿ ಯಶಸ್ವಿಯಾಗಬಹುದು. ವ್ಯಾಪಾರಸ್ಥನಿಗೆ ಹೇಗೆ ತನ್ನೆಡೆಗೆ ಗ್ರಾಹಕನನ್ನ ಸೆಳೆಯಬೇಕೆಂಬ ಚಾಣಾಕ್ಷತೆ ಇರಬೇಕೆಂದು ಯುವ ಉದ್ಯಮಿ ಸದ್ಗುರು ಪ್ರದೀಪ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಕರ್ನಾಟಕ ಆರ್ಯವೈಶ್ಯ ಮಂಡಳಿ, ಸದ್ಗುರು ಆಯುರ್ವೇದ ಉತ್ಪನ್ನಗಳು ಹಾಗೂ ವಾಸವಿ ಯುವಜನ ಸಂಘದ ಸಂಯುಕ್ತಾಶ್ರಯದಲ್ಲಿ ಸದ್ಗುರು ಪ್ರದೀಪ್ ನೇತೃತ್ವದಲ್ಲಿ ಆರ್ಯ ವೈಶ್ಯ ವ್ಯಾಪಾರ ಬೆಳವಣಿಗೆಯ ಕುರಿತಾ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಅತಿಯಾದ ವಿದೇಶಿ ಬಹು ರಾಷ್ಟ್ರೀಯ ಕಂಪನಿಯ ಹಾವಳಿಯಿಂದ ಚಿಲ್ಲರೆ ವ್ಯಾಪಾರ ಮಾಡಿ ಬದುಕು ನಡೆಸುತ್ತಿದ್ದ ಲಕ್ಷಾಂತರ ಕುಟುಂಬಗಳು ಇಂದು ಅವಸಾನದ ಹಂಚಿನಲ್ಲಿದ್ದು, ವ್ಯಾಪಾರಿಗಳು ಅತಿ ಚಾಣಾಕ್ಷತನದ ನಡೆಯಿಂದ ಗ್ರಾಹಕ ನೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು. ಗ್ರಾಹಕನ ಮೆಚ್ಚುಗೆಗೆ ಪಾತ್ರವಾದಾಗ ಮಾತ್ರ ಗ್ರಾಹಕರು ಹೆಚ್ಚು ಹೆಚ್ಚು ತಮ್ಮ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಾರೆ ಎಂದು ತಿಳಿಸಿದರು.
ಕಳೆದ ೨೫ ವರ್ಷಗಳ ಹಿಂದೆ ನಮ್ಮ ಹಿರಿಯರು ತಮ್ಮ ಬದುಕಿನದ್ದಕ್ಕೂ ವ್ಯಾಪಾರವನ್ನೇ ಮಾಡಿ ಜೀವನ ನಡೆಸುತ್ತಿದ್ದರು. ಪ್ರಸ್ತುತ, ಬದಲಾದ ಸನ್ನಿವೇಶದಲ್ಲಿ ಎಲ್ಲಾ ವರ್ಗದವರು ವ್ಯಾಪಾರವನ್ನು ಹೆಚ್ಚು ಮಾಡುತ್ತಿದ್ದು, ಆರ್ಯವೈಶ್ಯ ಸಮುದಾಯದವರು ಹಳೆಯ ಪದ್ಧತಿಯ ವ್ಯಾಪಾರವನ್ನು ಬಿಟ್ಟು ನವೀನ ಮಾದರಿಯ ವ್ಯಾಪಾರದ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಬಂದಿದೆ. ನಿಮ್ಮ ವ್ಯಾಪಾರ ವಹಿವಾಟಿಗೆ ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡು ಜಾಹೀರಾತುಗಳ ಮೂಲಕ ಯಾವುದೇ ಖರ್ಚಿಲ್ಲದೆ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು ಎಂದು ಯುವಕರಿಗೆ ಕರೆ ನೀಡಿದರು.
ಈ ವೇಳೆ ಕಾರ್ಯಕ್ರಮದಲ್ಲಿ ರ‍್ಯವೈಶ್ಯ ಮಂಡಳಿಯ ಬಿ.ವಿ. ಲವಕುಮಾರ್, ಪುರಸಭಾ ಮಾಜಿ ಸದಸ್ಯೆ ಡಾ.ಸ್ವಾತಿ ಪ್ರದೀಪ್, ಹೊಸದುರ್ಗ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪ್ರಕಾಶ್, ನವೀನ್ ಸಿಪಿಐ ರಮೇಶ್, ವಿವೇಕ್, ವಿಜಯ್, ಹಾಗೂ ಶ್ರೀರಾಂಪುರ ಹಿರಿಯೂರು ಅಜ್ಜಂಪುರ ಕಡೂರು ಯುವಜನ ಸಂಘದ ಸದಸ್ಯರುಗಳು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading