March 23, 2026
FB_IMG_1774268673249.jpg

ಚಿತ್ರದುರ್ಗ ಮಾರ್ಚ್ 23:
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರ್ ಫಾರಂನಲ್ಲಿ ಇದೇ ಮಾರ್ಚ್ 26 ಮತ್ತು 27ರಂದು ರಾಜ್ಯ ವಲಯ ಯೋಜನೆಯ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಒಂದು ದಿನದ ಪ್ರತ್ಯೇಕ ಎರಡು ಸಾಂಸ್ಥಿಕ ತರಬೇತಿ ಕಾರ್ಯಗಾರ ಹಾಗೂ ದೇಸಿ ತಳಿಗಳ ವೈವಿಧ್ಯತೆ ಪ್ರದರ್ಶನ ಆಯೋಜನೆ ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಗಾರದಲ್ಲಿ ಕೃಷಿ ಮತ್ತು ತರಕಾರಿ ಬೆಳೆಗಳಲ್ಲಿ ದೇಸಿ ತಳಿಗಳ ಸಂರಕ್ಷಣೆಯ ಪ್ರಾಮುಖ್ಯತೆ ಕುರಿತು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಜಿಕೆವಿಕೆ ಅನುವಂಶಿಯತೆ ಮತ್ತು ಸಸ್ಯ ತಳಿ ಅಭಿವೃದ್ದಿ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೋಹನ್ ರಾವ್ ರೈತರಿಗೆ ಮಾಹಿತಿ ನೀಡುವರು.
ಕತ್ತಲಗೆರೆ ಕೃಷಿ ಸಂಶೋಧನೆ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ನಿರಂಜನ್ ಅವರು, ಭತ್ತದಲ್ಲಿ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆಯ ಮಹತ್ವ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರ ಬಬ್ಬೂರು ಫಾರಂನ ಸಹಾಯಕ ಪ್ರಾಧ್ಯಾಪಕ ಡಾ.ಸಿ ನಂದಿನಿ ಅವರು ಸಿರಿಧಾನ್ಯಗಳ ತಳಿ ವೈವಿಧ್ಯತೆ ಹಾಗೂ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಮಾಹಿತಿ ನೀಡುವರು. ಸಹಜ ಸಮೃದ್ಧ ಸಂಸ್ಥೆಯ ಸಿ.ಎಸ್ ಕೇಶವಮೂರ್ತಿ ಅವರು ವಿವಿಧ ತರಕಾರಿ ಬೆಳೆಗಳಲ್ಲಿ ಸಂರಕ್ಷಣೆ ಮಾಡುತ್ತಿರುವ ದೇಸಿ ಬಿತ್ತನೆ ಬೀಜಗಳ ಕುರಿತು ಹಾಗೂ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವರು.
ಸಹಜ ಸೀಡ್ಸ್ ಮೈಸೂರು ಇವರ ವತಿಯಿಂದ ವಿವಿಧ ಬೆಳೆಗಳಲ್ಲಿ ಲಭ್ಯವಿರುವ ದೇಸಿ ತಳಿಗಳ ಬಿತ್ತನೆ ಬೀಜಗಳ ವಸ್ತು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಸಹ ಆಯೋಜಿಸಲಾಗಿದೆ. ಆದ ಪ್ರಯುಕ್ತ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಚಿತ್ರದುರ್ಗ ಜಿಲ್ಲೆಯ ಆಸಕ್ತ ದೇಸಿ ತಳಿಗಳ ಸಂರಕ್ಷಣೆ ಮಾಡುತ್ತಿರುವ, ಬೆಳೆಯುತ್ತಿರುವ ಹಾಗೂ ಆಸಕ್ತಿ ಹೊಂದಿರುವ 50 ರೈತ ಬಾಂಧವರು ಮೊಬೈಲ್ ಸಂಖ್ಯೆ 8277931058 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ರಜನಿಕಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ಪ್ರತ್ಯೇಕ ತರಬೇತಿಗಳಿಗೆ ಮೊದಲು ನೋಂದಾವಣೆ ಮಾಡಿಕೊಂಡ 50 ಜನ ರೈತ ಬಾಂಧವರಿಗೆ ವಿವಿಧ ದೇಸಿ ತಳಿಗಳ ತರಕಾರಿ ಬೀಜಗಳ ಕಿಟ್ ಅನ್ನು ಸಹ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
==========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading