ಚಿತ್ರದುರ್ಗ ಮಾರ್ಚ್23:
ಚಿತ್ರದುರ್ಗದ ಕೇಂದ್ರೀಯ ವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ 1 ರಿಂದ 5ನೇ ತರಗತಿಗಳ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನಿಸಲಾಗಿದೆ.
1ನೇ ತರಗತಿ ಪ್ರವೇಶಕ್ಕೆ ಆನ್‍ಲೈನ್ ಮೂಲಕ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 02 ರ ರಾತ್ರಿ 11:59 ಕೊನೆಯ ದಿನವಾಗಿದೆ.
ಆಸಕ್ತರು https://admission.kvs.gov.in ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 31.03.2026ಕ್ಕೆ ಅನ್ವಯವಾಗುವಂತೆ ಕನಿಷ್ಠ 6 ವರ್ಷ ವಯಸ್ಸಾಗಿರಬೇಕು. ಎಲ್ಲಾ ತರಗತಿಗಳಿಗೂ ಇದೇ ದಿನಾಂಕದ ಆಧಾರದ ಮೇಲೆ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸೀಟುಗಳ ಹಂಚಿಕೆಯು ಕೆವಿಎಸ್ ಪ್ರವೇಶ ಮಾರ್ಗಸೂಚಿ 2026-27ರ ಅನ್ವಯ ಇರಲಿದೆ.
2 ರಿಂದ 5ನೇ ತರಗತಿಗಳ ಪ್ರವೇಶಕ್ಕಾಗಿ ಆಫ್‍ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾ. 20 ರಿಂದ ಏ. 02 ರ ಸಂಜೆ 4:00 ಗಂಟೆಯ ಒಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯದ ಸಮೀಪವಿರುವ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ಕಚೇರಿಗೆ ಸಲ್ಲಿಸಬೇಕು. 2 ರಿಂದ 5ನೇ ತರಗತಿವರೆಗೆ ಪ್ರವೇಶ ಮತ್ತು ನೋಂದಣಿ ಅರ್ಜಿಗಳ ವಿವರಗಳು https://kvsangathan.nic.in/en/admission ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, 2026-27 ಪ್ರವೇಶ ವೇಳಾಪಟ್ಟಿಯ ಪ್ರಕಾರ ನೋಂದಣಿ ಮಾಡಬೇಕು.
ಅರ್ಜಿ ನಮೂನೆಯಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದಲ್ಲಿ ಪರಿಶೀಲನೆಯ ಸಮಯದಲ್ಲಿ ಅಂತಹ ಪ್ರವೇಶಾತಿಯನ್ನು ರದ್ದುಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಪ್ರಾಂಶುಪಾಲರನ್ನು ಅಥವಾ ಪ್ರವೇಶ ಪ್ರಭಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
============
About The Author
Discover more from JANADHWANI NEWS
Subscribe to get the latest posts sent to your email.