ನಾಯಕನಹಟ್ಟಿ:: ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ರಾಮಸಾಗರ ಗ್ರಾಮದ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ದೇವರಿಗೆ ಗಂಗಾ ಪೂಜೆಯನ್ನು ಭಾನುವಾರ ಅದ್ದೂರಿಯಾಗಿ ಮಾಡಲಾಯಿತು.







ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗಾದ್ರಿಪಾಲ ನಾಯಕ ಸ್ವಾಮಿ ದೇವರ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಶ ಪ್ರತಿಷ್ಠಾಪನೆ ಹಾಗೂ ಗುಗ್ಗರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಾಮಸಾಗರ ಗ್ರಾಮದಿಂದ ಸಮೀಪದ ಪಾಪಮುತ್ತೆ ಹೊಳೆಯಲಿ ಗಂಗಾ ಪೂಜೆಯನ್ನು ಬುಡಕಟ್ಟ ಸಂಸ್ಕೃತಿಯ ಆಚರಣೆಯಂತೆ ಗ್ರಾಮಸ್ಥರು ಗುಡಿ ಕಟ್ಟಿನ ಅಣ್ಣತಮ್ಮಂದಿರು ನೆರವೇರಿಸಿದರು.
ಇದೆ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ ಮಾತನಾಡಿದರು ಮ್ಯಾಸನಾಯಕ ಬುಡಕಟ್ಟಿನ ಗಟ್ಟಿಮುತ್ತ ನಾಯಕ ಈ ವಂಶದ ಮೂಲಪುರುಷ ರಾಮಸಾಗರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ನೂತನ ದೇವಸ್ಥಾನದ ಲೋಕಾರ್ಪಣೆ ಕಳಸ ಸ್ಥಾಪನೆ ಹಾಗೂ ಗುಗ್ಗರಿ ಹಬ್ಬದ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ಬುಡಕಟ್ಟು ಸಂಸ್ಕೃತಿಯ ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಇಂದು ಶ್ರೀ ಗಾದ್ರಿಪಾಲ ನಾಯಕ ಸ್ವಾಮಿಯ ಗಂಗಾ ಪೂಜೆಯನ್ನು ನಾಳೆ ಕಳಸರೋಹಣ ಮಂಗಳವಾರ ಗುಗ್ಗರಿ ಹಬ್ಬ ಕಾಸು ಮೀಸಲು ಹಾಗೂ ಮಣೆವು ಕಾರ್ಯದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಮ್ಯಾಸ ಮಂಡಲದಲ್ಲಿ ಗಾದ್ರಿಪಾಲ ನಾಯಕನಿಗೆ ವಿಶೇಷವಾದ ಸ್ಥಾನಮಾನವಿದೆ ಇವರೆಲ್ಲರೂ ಪೂರ್ವಜರು ಸತ್ಯ ಶುದ್ಧ ಕಾಯ ವಾಚ ಮನಸುಳ್ಳ ದೈವ ಪುರುಷರು ಈ ಭೂಮಿಯ ಮೇಲೆ ಬದುಕಿ ಬಾಳಿದಂತ ನಮ್ಮ ಪೂರ್ವಜರು ಶ್ರೀ ಗಾದ್ರಿಪಾಲ ನಾಯಕ ಬಹಳ ಸತ್ಯದಿಂದ ಬದುಕಿದ್ದಾರೆ ಮ್ಯಾಸಮಂಡಲದಲ್ಲಿ ಅತಿ ಹೆಚ್ಚು ಪೂಜಿಸಲ್ಲಿಸುವ ದೇವರು ಅಂದರೆ ಶ್ರೀ ಗಾದ್ರಿಪಾಲ ನಾಯಕ ದೇವರು ಇವರು ಪಶುಪಾಲನೆ ಮಾಡಿಕೊಂಡು ಕಂಪಳ ದೇವರಹಟ್ಟಿಯಿಂದ ಗಾದ್ರಿಗುಡ್ಡದವರಿಗೆ ಎಂತಹ ಕಷ್ಟ ಬಂದರೂ ಸಹ ದೇವರ ಎತ್ತುಗಳನ್ನು ರಕ್ಷಿಸಿ ಪಾಲನೆ ಮಾಡಿಕೊಂಡು ಸಾಕಿದ್ದಾರೆ ಬುಡಕಟ್ಟು ಜನಾಂಗ ಎಸ್ಟಿ ಮೀಸಲಾತಿ ಸಿಕ್ಕಿದೆ ಎಂದರೆ ಪೂರ್ವಜರ ಗಾದ್ರಿ ಪಾಲನಾಯಕ ಜಗಳೂರು ಪಾಪ ನಾಯಕ ಕಂಪಳರಂಗ ನಾಯಕ ಸೇರಿದಂತೆ ಕಿಲಾರಿಗಳ ವೇಷ ಭೂಷಣ ಸಲ್ಲಣ್ಣ ಕೋಲು ರುಮಾಲ್ ಕಂಬಳಿ ದೇವರ ಎತ್ತು ಸೇರಿದಂತೆ ಬುಡಕಟ್ಟು ಸಂಸ್ಕೃತಿ, ಲಕ್ಷಣಗಳು ಇವರಲ್ಲಿ ಕಂಡುಬರುತ್ತವೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ನಮಗೆ ನೀಡಿದ್ದಾರೆ
ನಮಗೆ ನಿಜವಾಗಿ ಮೀಸಲಾತಿ ಸಿಕ್ಕಿದೆ ಎಂದರೆ ದೇವರ ಎತ್ತುಗಳು ಪೂರ್ವಜರು ಪೂಜಾರಿ ಕಿಲಾಡಿಗಳು ಇವರೆಲ್ಲರೂ ನಾಗರಿಕ ಪ್ರಪಂಚದಿಂದ ದೂರವಿದ್ದಾರೆ ಇವರೆಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ನಮ್ಮನ್ನು ಗುರುತಿಸಿ ಎಸ್ಟಿ ಮೀಸಲಾತಿ ಕೊಟ್ಟಿದ್ದಾರೆ.
ಮೀಸಲಾತಿ ಸಿಕ್ಕಿದ್ದರಿಂದ ಶಿಕ್ಷಣ ಪಡೆದು ನೌಕರಿ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇವೆ ಮ್ಯಾಸ ನಾಯಕರಿಗೆ ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ವಸತಿ ಆರೋಗ್ಯ ಶಿಕ್ಷಣ ಉದ್ಯೋಗ ಇಲ್ಲ ನಾವು ದೇವರು ದೇವರ ಎತ್ತುಗಳು ಸಂಪ್ರದಾಯ ಉಳಿಸಿಕೊಳ್ಳುವ ಮೂಲಕ ಹಳೆ ಬೇರು ಹೊಸ ಚಿಗುರು ಎನ್ನುವಂತೆ ನಾವೆಲ್ಲರೂ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಮೂರು ಸಂದೇಶ ಕೊಟ್ಟಿದ್ದಾರೆ ನಾನು ಸಾಮಾಜಿಕ ನ್ಯಾಯದ ತೇರನ ಬಹಳ ಕಷ್ಟಪಟ್ಟು ಇಲ್ಲಿಯವರೆಗೆ ಎಳೆದು ತಂದಿದ್ದೇನೆ ಸಾಧ್ಯವಾದರೆ ಇಲ್ಲಿಂದ ಮುಂದಕ್ಕೆ ತೆಗೆದುಕೊಂಡು ಹೋಗಿ ಇಲ್ಲಾಂದ್ರೆ ಅದೇ ಜಾಗದಲ್ಲಿ ಇರಲಿ ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಸಂವಿಧಾನ ಬರೆದು ನಿಮ್ಮೆಲ್ಲರಿಗೂ ನಾಗರಿಕ ಹಕ್ಕು ಮೀಸಲಾತಿ ಸವಲತ್ತು ನೀಡಿರುವುದರಿಂದ ಶಿಕ್ಷಣವನ್ನು ಪಡೆದಿದ್ದೀರಿ ನೀವು ಯಾವ ಸಮಾಜದಿಂದ ಬಂದಿದ್ದೀರಿ ಆ ಸಮಾಜವನ್ನು ಮರೆಯಬೇಡಿ ಸಮಾಜಕ್ಕೆ ನಿಮ್ಮಲ್ಲಿರುವ ಜ್ಞಾನವನ್ನು ಸಮಯವನ್ನು ಪ್ರೋತ್ಸಾಹವನ್ನು ನೀಡುವ ಮೂಲಕ ಸಮಾಜವನ್ನು ರಕ್ಷಿಸಿ ಮತ್ತು ಪ್ರೋತ್ಸಾಹಿಸಿ ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಎಸ್ಸಿ ಎಸ್ಟಿ ಹಿಂದುಳಿದ ಸಮುದಾಯಗಳ ಮೇಲೆ ದೌರ್ಜಲವಾಗಿದೆ ಜಾತಿ ವ್ಯವಸ್ಥೆ ಅಸಮಾನತೆ ಅಸ್ಪೃಶ್ಯತೆ ಮೂಢನಂಬಿಕೆ ಅಂದವಿಶ್ವಾಸಗಳು ಇವುಗಳನ್ನೆಲ್ಲ ಸಾಧ್ಯವಾದರೆ ಇವುಗಳನ್ನು ನೀವು ತಡೆಗಟ್ಟಿ ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಿ ಅದು ಆಗಲಿಲ್ಲ ಎಂದರೆ ನಿಮ್ಮ ಜಾತಿಯಲ್ಲಿ ಇದ್ದು ನಿಮ್ಮ ಜಾತಿಗೆ ಹೆಸರು ಬರುವಂತೆ ಮಾಡಿ ಮೂರು ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಉತ್ತಮ ಸ್ಥಾನಮಾನ ಪಡೆಯುವ ಮೂಲಕ ಪ್ರೇರಣೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗಾದ್ರಿಪಾಲ ನಾಯಕ ದೇವರ ಗುಡಿ ಕಟ್ಟಿನ ಗುರು- ಹಿರಿಯರು, ಅಣ್ಣತಮ್ಮಂದಿರು, ಸಮಸ್ತ ಭಕ್ತಾಧಿಗಳು, ಗ್ರಾಮಸ್ಥರು ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.