ಮೊಳಕಾಲ್ಮೂರು ಮಾ.23
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳಾದ ಅಶೋಕನ ಶಿಲಾ ಶಾಸನ, ಜಟಿಂಗರಾಮೇಶ್ವರ, ಶ್ರೀ ನುಂಕಮಲೆಸಿದ್ದೇಶ್ವರ ದೇವಸ್ಥಾನದಂತಹ ಪುರಾತನ ಸ್ಥಳಗಳಲ್ಲಿ ಪುರಾತನ ನಿಧಿ, ಶಾಸನ, ವಿಗ್ರಹಗಳನ್ನ ಕಳುವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕರ್ನಾಟಕ-ಆಂದ್ರಪ್ರದೇಶ-ತಮಿಳುನಾಡು ರಾಜ್ಯದವರಾದ 09 ಮಂದಿ ಅಂತರ್ ರಾಜ್ಯ ನಿಧಿ ಕಳ್ಳರನ್ನು ಮೊಳಕಾಲ್ಮೂರು ಪೊಲೀಸರು ಬಂಧಿಸಿದ್ದಾರೆ.








ತಿಮ್ಮರಾಜು ತಂದೆ ಮರಿಸ್ವಾಮಿ ಭೈರಾಪುರ ಗ್ರಾಮ, ಮೊಳಕಾಲ್ಮೂರು ತಾಲೂಕು,
ರಾಮಾಂಜಿನಿ ( 45 ) ಟಿ.ಸಣ್ಣಪ್ಪ ( 60)ಮೈಲಾರಪ್ಪ ( 52 ) ವೇಣು(38)
ಎಂ.ಆರ್.ಮಂಜುನಾಥ ( 42)ಎಂ.ಆನಂದ (36) ,
ಶ್ರೀನಿವಾಸಲು (45) ವೆಂಕಟೇಶ( 40) ಭೈರಾಪುರ-ಹಿರೇಕೆರೆಹಳ್ಳಿ, ಗ್ರಾಮಗಳ ಮಧ್ಯದಲ್ಲಿರುವ ವಿಭೂತಿ ಗುಡ್ಡದಲ್ಲಿ ಇನ್ನೊವಾ ಕಾರಿನಲ್ಲಿ ಉಪಕರಣಗಳನ್ನಿಟ್ಟುಕೊಂಡು ಅನುಮಾನಾಸ್ಪದವಾಗಿ ಗುಡ್ಡಗಳ ಸುತ್ತಾ-ಮುತ್ತಾ, ತಿರುಗಾಡುತ್ತಾ ಭೂಮಿಯನ್ನು ಶೋಧಿಸುತ್ತಿದ್ದರು. ಸ್ಥಳಿಯರು ನೀಡಿದ ಖಚಿತ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸರು ಬಂಧಿಸಿ ಅವರಿಂದ ಇನ್ನೋವಾ ಕಾರ್, ಜನರೇಟರ್, ಡ್ರಿಲ್ಲಿಂಗ್ ಮಿಶಿನ್, 20 ಮೀಟರ್ ಉದ್ದದ ವೈರ್, ನಾಲ್ಕು ಪ್ಲಾಸ್ಟಿಕ್ ಪುಟ್ಟಿ, ಮೂರು ಸಲಿಕೆ ಯನ್ನು ವಶಪಡಿಸಿಕೊಂಡಿದ್ದಾರೆ.
ಈ ಅಂತರ್ ರಾಜ್ಯ ನಿಧಿಗಳ್ಳರನ್ನು ಪತ್ತೆಹಚ್ಚಲು
ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ
ರಾಜಣ್ಣ, ಟಿ.ಬಿ, ಮೊಳಕಾಲ್ಮೂರು ವೃತ್ತ ನಿರೀಕ್ಷಕ ವಸಂತ ವಿ ಅಸೋದೆರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ಈರೇಶ, ಪಾಂಡುರಂಗ ಹಾಗೂ ಸಿಬ್ಬಂದಿಯವರನ್ನು ತಂಡವನ್ನು ರಚಿಸಲಾಗಿರುತ್ತದೆ. ಈ ತಂಡವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದರಂಜಿತ್ ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಜಿ.ಎಸ್. ರವರು ಪ್ರಶಂಶಿಸಿರುತ್ತಾರೆ.
About The Author
Discover more from JANADHWANI NEWS
Subscribe to get the latest posts sent to your email.