ಮೊಳಕಾಲ್ಮೂರು ಮಾ.23
ಮಾಚೇನಹಳ್ಳಿ ಬಳಿಯ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಮಾಜಿ ಶಾಸಕ ನೇರಲಗುಂಟೆ ಎಸ್ ತಿಪ್ಪೇಸ್ವಾಮಿ ಭೇಟಿ ಪರಿಶೀಲನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ಮಾಚೇನಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅವರು ‘ಅನಾಧಿಕೃತ ಮತ್ತು ವಿವೇಚನಾರಹಿತ ಮರಳು ಗಣಿಗಾರಿಕೆಯ ಪರಿಣಾಮ ಬಯಲು ಸೀಮೆಯ ಚಿನ್ನಹಗರಿ ಹಳ್ಳ ಬತ್ತಿ ಹೋಗುತ್ತಿದ್ದು, ಇದರಿಂದಾಗಿ,ಈ ಭಾಗದಲ್ಲಿರುವ ಜೀವರಾಶಿಗೆ ಕುಡಿಯುವ ನೀರಿನ ಪೂರೈಕೆಯೂ ದುಸ್ತರವಾಗಿದೆ.ಭವಿಷ್ಯದಲ್ಲಿ ಇದರ ದುಷ್ಪರಿಣಾಮ ತಾರಕಕ್ಕೇರುವ ಅಪಾಯವಿದೆ’, 10 ಅಡಿ ಆಳದವರೆಗೆ ಮರಳು ಅಕ್ರಮವಾಗಿ ಲೂಟಿ ಮಾಡುತ್ತಿದ್ದೂ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದು ಹೋಗಿದೆ. ರೈತರಿಗೆ ಕೊಳವೆ ಬಾವಿಗಳಲ್ಲಿ ನೀರು ಕೂಡ ಬರುತ್ತಿಲ್ಲ ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಒತ್ತಾಯಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.