ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪಟ್ಟಣದ ಶಾದಿ ಮಹಲ್ ಸಭಾಂಗಣದಲ್ಲಿ ಸೋಮವಾರ ನಡೆದ ಬಿಸಿಯೂಟ ನೌಕರರ ತರಬೇತಿ ಕಾರ್ಯಕ್ರಮವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಿ ಮಾತನಾಡಿದರು. 60 ವರ್ಷ ಪೂರೈಸಿದ ಅಡುಗೆ ನೌಕರರಿಗೆ ತಲಾ ₹40,000 ಹಿಂಡುಗಂಟು ಚೆಕ್ಕನ್ನು ವಿತರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ ಅವರು, ಹೊಸದುರ್ಗ ತಾಲ್ಲೂಕಿನಲ್ಲಿ ಒಟ್ಟು 17,450 ವಿದ್ಯಾರ್ಥಿಗಳು ಇದ್ದು, 356 ಶಾಲೆಗಳಲ್ಲಿ 614 ಅಡುಗೆ ಸಿಬ್ಬಂದಿಯವರು ಪ್ರತಿದಿನ ಹಾಲು, ಮೊಟ್ಟೆ, ಮಾಲ್ಟ್, ಬಿಸಿಯೂಟ ಹಾಗೂ ಉಸಲಿ ವಿತರಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಬಿಸಿಯೂಟ ಯೋಜನೆ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್, ಬಿಸಿಯೂಟ ಫೆಡರೇಶನ್‌ನ ಕುಮಾರಸ್ವಾಮಿ, ಮುಖಂಡರಾದ ಆಗ್ರೋ ಶಿವಣ್ಣ ಹಾಗೂ ಲೋಕೇಶಪ್ಪ ಅವರು ಮಾತನಾಡಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು.
ಕಾರ್ಯಕ್ರಮದಲ್ಲಿ ಟಿಪಿಇಓ, ಬಿ.ಆರ್.ಪಿ., ಈಸಿಓ, ಸಿಆರ್‌ಪಿ ಮತ್ತು ಅನುಷ್ಠಾನಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.