February 23, 2026
FB_IMG_1771848482388.jpg

ಚಳ್ಳಕೆರೆ ತಾಲ್ಲೂಕಿನ ಪರಸದುರಾಂಪುರ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಹಲವಾರು ಮೊಬೈಲ್ ಫೋನ್‌ಗಳನ್ನು Central Equipment Identity Register (CEIR) ಪೋರ್ಟಲ್ ಮೂಲಕ ಪತ್ತೆಹಚ್ಚಿ, ಸಂಬಂಧಿತ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪೊಲೀಸ್ ಅಧಿಕಾರಿಗಳ ಸಮರ್ಪಕ ಕಾರ್ಯಾಚರಣೆ ಮತ್ತು ತಾಂತ್ರಿಕ ಸಹಾಯದಿಂದ ಕಳೆದುಹೋಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಮರಳಿ ನೀಡಲಾಗಿದೆ. ಮೊಬೈಲ್ ಸ್ವೀಕರಿಸಿದ ಸಾರ್ವಜನಿಕರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಸಾರ್ವಜನಿಕರು ತಮ್ಮ ಮೊಬೈಲ್ ಕಳ್ಳತನವಾದಲ್ಲಿ ಅಥವಾ ಕಳೆದು ಹೋದರೆ ಗಾಬರಿಯಾಗದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಬೈಲ್ ಕಳೆದು ಹೋದರೆ ಅನುಸರಿಸಬೇಕಾದ ಕ್ರಮಗಳು:
ಮೊಬೈಲ್ ಕಳೆದು ಹೋದ ಬಗ್ಗೆ ತಕ್ಷಣವೇ Karnataka State Police ಆಪ್ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ E-Lost ಮೂಲಕ ದೂರು ದಾಖಲಿಸಬೇಕು ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಬೇಕು.
ಕಳೆದು ಹೋದ ಮೊಬೈಲ್‌ನಲ್ಲಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಡುಪ್ಲಿಕೇಟ್ ಸಿಮ್ ಪಡೆಯಬೇಕು.
CEIR ಪೋರ್ಟಲ್‌ನಲ್ಲಿ IMEI ಸಂಖ್ಯೆಯ ಮೂಲಕ ಮೊಬೈಲ್ ಅನ್ನು ಬ್ಲಾಕ್ ಮಾಡಬೇಕು.
ಸಾರ್ವಜನಿಕರು ಮೊಬೈಲ್ ಕಳ್ಳತನ ಪ್ರಕರಣಗಳ ಬಗ್ಗೆ ಜಾಗರೂಕರಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading