September 15, 2025
IMG-20250223-WA0200.jpg

ಚಳ್ಳಕೆರೆ ನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾನಿಲಯದಿಂದ ಮೂರು ದಿನಗಳ ಕಾಲ ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಚಾಲಕಿ ವಿಮಲಕ್ಕ ತಿಳಿಸಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 25ರಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಉದ್ಘಾಟನೆಯನ್ನು ಶಾಸಕ‌ ಟಿ.ರಘುಮೂರ್ತಿ ಮಾಡಲಿದ್ದು, ಕೃಷಿ ಜಂಟಿ‌ ನಿರ್ದೇಶಕ ಬಿ.ಮಂಜುನಾಥ, ತಹಶೀಲ್ದಾರ್ ರೆಹಾನ್ ಪಾಷ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ವಿರೂಪಾಕ್ಷ, ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಜೆ. ಅಶೋಕ್, ಪೌರಾಯುಕ್ತ ಜಗರೆಡ್ಡಿ, ರೇಷ್ಮೆ ವಿಸ್ತರಾಣಾಧಿಕಾರಿ ಬಿ.ಉಮಾಪತಿ ಮುಂತಾದವರು ಭಾಗವಹಿಸುವರು.
26ರ ಬುಧುವಾರ, ಸಂಜೆ 6:00 ಕ್ಕೆ ಮಹಾ ಶಿವರಾತ್ರಿ – ಮಹೋತ್ಸವ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವವು. 27ರ ಗುರುವಾರ,ಸಂಜೆ6:00ಕ್ಕೆ ಈಶ್ವರೀಯ ಅಭಿನಂದನಾ ಉತ್ಸವದ ಅಂಗವಾಗಿ ಶಿವನು ಸರ್ವವ್ಯಾಪಿಯೇ? ಚಿಂತನ ಮಹೋತ್ಸವ ನಡೆಯಲಿದೆ. ಶಿವನ ಸಮಗ್ರ ಪರಿಚಯದಿಂದಲೇ ಮುಕ್ತಿ ಜೀನನ್ಮುಕ್ತಿ ಪ್ರಾಪ್ತಿ ಎಂಬ ವಿಷಯದ ಕುರಿತು ವಿಶೇಷ ಕಾರ್ಯಗಾರ ಹಾಗೂ ಸರ್ವ ದೇವಾಲಯಗಳ ಪೂಜಾರಿಗಳು, ಪುರೋಹಿತರು,ಜೋಯಿಸರಿಗೆ ಈಶ್ವರೀಯ ಸನ್ಮಾನ. ಭಾರತೀಯ ಪರಂಪರೆಯನ್ನು ರಕ್ಷಿಸಿಸುತ್ತಿರುವ ನಾಡಿನ ಭಕ್ತ ಪರಂಪರೆಗೆ ಗೌರವಾರ್ಪಣೆ ಮಾಡಲಾಗುವುದು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಾರ್ಯನಿರ್ವಾಹಕ ಅಧಿಕಾರಿ‌ಎಚ್.ಶಶಿಧರ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೀಹಳ್ಳಿ, ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ಎಂ.ನರೇಶ್ ರೆಡ್ಡಿ, ಹರೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ. ಟಿ.ವೀರಭದ್ರಸ್ವಾಮಿ ಮುಂತಾದವರು ಭಾಗವಹಿಸುವರು.
ಶಿವಸ್ಮರಣೆಯ ಹಿನ್ನೆಲೆ, ಮಹತ್ವ -;
ಭಾರತ ದೇಶ ಹಬ್ಬಗಳ ತವರೂರು, ಹಬ್ಬ ಎಂದರೆ ಉತ್ಸಾಹ, ಸಂಭ್ರಮದ ಪ್ರತೀಕ, ಯುಗಾದಿ, ಸಂಕ್ರಾಂತಿ ಇತ್ಯಾದಿ ಹಬ್ಬಗಳನ್ನು ಪ್ರಕೃತಿಯ ಶೋಭೆಯನ್ನು ವಿಜೃಂಭಿಸಲು ಆಚರಿಸುವೆವು. ಗಾಂಧಿ ಜಯಂತಿ, ವಿವೇಕಾನಂದರ ಜಯಂತಿ, ಬುದ್ಧನ ಜಯಂತಿ, ಕನಕ ಜಯಂತಿ ಇತ್ಯಾದಿ ಹಬ್ಬಗಳ ಐತಿಹಾಸಿಕ ವೀರರನ್ನು, ಅವರ ಆದರ್ಶಗಳನ್ನು ನೆನಪು ಮಾಡಿಕೊಂಡು ಹೆಮ್ಮೆ ಪಡುವವು. ಸಂಬಂಧಿಕರೊಂದಿಗೆ ಪರಸ್ಪರ ಕೂಡಿ ಖುಷಿಯಲ್ಲಿ ಬಾಳಬೇಕು ಎಂದು ಸಡಗರದಿಂದ ದೀಪಾವಳಿ ಮುಂತಾದ ಅನೇಕ ಹಬ್ಬಗಳನ್ನು ಆಚರಿಸುವೆವು. ಕೆಲವೊಂದು ಹಬ್ಬಗಳು ಜೀವನೌಲ್ಯಗಳನ್ನು ಜಾಗೃತಿ ಮಾಡಿಸಿದರೆ,ಇನ್ನು ಕೆಲವು ಹಬ್ಬಗಳು ಸ್ವ-ಪರಿವರ್ತನೆಯ ಸಂದೇಶವನ್ನು ನೀಡುವವು. ಮಹಾಶಿವರಾತ್ರಿ ಹಬ್ಬವು ಯಾವುದಕ್ಕೆ ಸಂಬಂಧಿಸಿದೆ? ಭಕ್ತರು ಆ ದಿನ ಉಪವಾಸ ಏಕೆ ಇರುತ್ತಾರೆ? ಜಾಗರಣೆ ಏಕೆ ಮಾಡುತ್ತಾರೆ?ಶಿವನ ಯಾವ ಕರ್ತವ್ಯಕ್ಕಾಗಿ ಶಿವರಾತ್ರಿಯ ಆಚರಣೆ?
ಇಂದಿನ ಆಧುನಿಕವಾದ ಸಲಕರಣೆಗಳಿಂದ ಸುಸಜ್ಜಿತವಾದ ಸಮಾಜದಲ್ಲಿ ಅನೇಕ ರೀತಿಯ ಅಸುರಕ್ಷತೆಯ ಭಯಗಳು ಬುಗಿಲೆದ್ದೇಳುತ್ತಿವೆ.ರೋಗಗಳ ಭಯವನ್ನು ಔಷಧಿಯಿಂದ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಉನ್ನತಿಯ ಭಯವನ್ನು ಟ್ಯೂಷನ್, ಕೋಚಿಂಗ್ ನಿಂದ ಉಪಶಮನ ಮಾಡಬಹುದು. ಆದರೆ ವಿಶ್ವದಾದ್ಯಂತ ಶತಶತಮಾನಗಳಿಂದ ಅನೇಕ ಸಾವುನೋವುಗಳನ್ನು, ಸಾಮಾಜಿಕ ಅಸುರಕ್ಷಿತತೆಯನ್ನು ಸೃಷ್ಟಿಸಿದ ಕೋಮುಗಲಭೆಗಳನ್ನು ಯಾರಿಂದಲೂ ಸಹ ಈ ಜಾತಿಮತದ ಕಲಹಗಳನ್ನು ನಿವಾರಿಸಲು ಆಗುತ್ತಲೇ ಇಲ್ಲ. ಇಂತಹ ಸವಾಲುಗಳ ಮಧ್ಯದಲ್ಲಿ ಭಾವೈಕ್ಯತೆಯನ್ನು, ಸದ್ಭಾವನೆಯನ್ನು ಕಟ್ಟಿ ವೈಯಕ್ತಿಕವಾಗಿ ಸ್ನೇಹ, ವೈಶ್ಚಿಕವಾಗಿ ಸ್ನೇಹ, ಹೊಂದಾಣಿಕೆಯನ್ನು ನಿರ್ಮಾಣ ಮಾಡುವ ಏಕಮೇವ ರಾಷ್ಟ್ರೀಯ ಭಾವೈಕ್ಯತೆಯನ್ನು ಸ್ಥಾಪಿಸುವ ಹಬ್ಬವೇ ಮಹಾಶಿವರಾತ್ರಿ
ಮಹಾಶಿವರಾತ್ರಿಗೂ ಸದ್ಭಾವನೆಗೂ ಏನು ಸಂಬಂಧ? ಯಾವುದೇ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಆಯಾ ದೇಶದ ಪೌರಾಣಿಕ ಇತಿಹಾಸವು, ಘಟನೆಗಳು ಆಧಾರವಾಗಿರುತ್ತವೆ ಅಥವಾ ಸೀಮಿತವಾದ ಪ್ರಾಂತ್ಯಕ್ಕೆ ಸಂಬಂಧಪಟ್ಟ ವ್ಯಕ್ತಿತ್ವದ ಜೀವನದ ಕಥೆಯೊಂದಿಗೆ ಹಬ್ಬಗಳು ಪೋಣಿಸಲ್ಪಟ್ಟಿರುತ್ತವೆ. ಆದರೆ ಶಿವರಾತ್ರಿಯ ಶಿವನು ಯಾವುದೇ ಸೀಮಿತ ಜನಾಂಗಕ್ಕೆ ಸಂಬಂಧಪಟ್ಟವನಲ್ಲ. ವಿಶ್ವವನ್ನು ಏಕತೆಯ ಸೂತ್ರದಲ್ಲಿ ತರುವ ಸೂತ್ರಧಾರಿ- ಶಿವನ ಹೆಸರಿನಲ್ಲಿ ನಡೆಯುವ ಈ ಶಿವರಾತ್ರಿಯು ವಿಶ್ವದಲ್ಲಿ ಭ್ರಾತೃತ್ವವನ್ನು ಒಡಮುಡಿಸುತ್ತದೆ. ಭಾರತೀಯರು ದೇಶದಾದ್ಯಂತ ಜ್ಯೋತಿಲಿರ್ಂಗಗಳ ರೂಪದಲ್ಲಿ ಶಿವನನ್ನು ಆರಾಧಿಸುತ್ತಿದ್ದಾರೆ. ಭಾರತ ದೇಶದ ರಾಜ ಶ್ರೀರಾಮನು ಧನುಷೋಡಿಯಲ್ಲಿ ಈಶ್ವರ ಲಿಂಗವನ್ನು ಸ್ಥಾಪಿಸಿ ಈಶ್ವರನನ್ನು ಪೂಜೆ ಮಾಡಿದ್ದಾನೆ ಎನ್ನುವ ಪ್ರತೀತಿ ಇದೆ. ರಾಮನು ಸ್ಥಾಪಿಸಿ ಪೂಜೆ ಮಾಡಿರುವ ಈ ಈಶ್ವರ ಲಿಂಗುವು ದ್ವಾದಶ ಜ್ಯೋತಿಲಿರ್ಂಗಗಳಲ್ಲಿ ಒಂದಾಗಿದೆ. ರಾಜ ಶ್ರೀರಾಮನು ಅರ್ಚಿಸಿದ ಈ ಶಿವಲಿಂಗಕ್ಕೆ “ರಾಮೇಶ್ವರ” ಎಂಬ ಹೆಸರಿದೆ. ವಾಯುವ್ಯ ಸಂಹಿತೆ ಪ್ರಕಾರ ಶ್ರೀ ಕೃಷ್ಣನು ಹಿಮಾಲಯ ಪರ್ವತದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನ ಸಾಕ್ಷಾತ್ಕಾರ ಮಾಡಿಕೊಂಡನು. ಶ್ರೀ ಕೃಷ್ಣನು ಸ್ಥಾಪಿಸಿದ ಶಿವಲಿಂಗಕ್ಕೆ ಗೋಪೇಶ್ವರ ಎಂದು ಹೆಸರಿದೆ. ಬಸವಾದಿ ಶರಣರು ಜ್ಯೋತಿರ್ಲಿಂಗ ಸ್ವರೂಪನಾದ ಪರಮಾತ್ಮನ ಪ್ರತೀಕವಾದ ಶಿವಲಿಂಗವನ್ನು ಧರಿಸಿಕೊಂಡು ಶಿವನೊಂದಿಗೆ ಯೋಗಾನು ಸಂಧಾನವನ್ನು ಮಾಡುತ್ತಾ ದೇವನೊಬ್ಬ ನಾಮ ಹಲವು ಎಂದು ಹೇಳಿದ್ದಾರೆ. ಬುದ್ಧನು ಸಹ ಗಯದಲ್ಲಿ ಕುಳಿತು ತಪಸ್ಸು ಮಾಡಿದಾಗ ಪರಂಜ್ಯೋತಿ ಸ್ವರೂಪನಾದ ಪರಮಾತ್ಮನ ಸಾಕ್ಷಾತ್ಕಾರದಿಂದ ಜ್ಞಾನೋದಯವಾಗಿ ಬುದ್ಧನಾದನು. ಸಿಖ್ ಧರ್ಮದವರು ಸಹ ಪರಮಾತ್ಮನನ್ನು ಏಕ್ ಓಂಕಾರ ನಿರಾಕಾರನೆಂದು ಭಜಿಸಿ, ಜ್ಯೋತಿಸ್ವರೂಪವೇ ಪರಮಾತ್ಮ ಎಂದು ಸಾಬೀತುಪಡಿಸಿದ್ದಾರೆ. ಯೇಸು ಕ್ರಿಸ್ತನು ಪರಮಾತ್ಮನನ್ನು ಗಾಡ್ ಈಜ್ ಲೈಟ್ ಎಂದು ಮಹಿಮೆ ಮಾಡಿ ಇವತ್ತಿಗೂ ಚರ್ಚಿನಲ್ಲಿ ಮೇಣದ ಬತ್ತಿಯೊಂದಿಗೆ ಆರಾಧಿಸುವುದನ್ನು ನೋಡುತ್ತೇವೆ. ಇದರಿಂದ ಅವರು ಸಹ ಜ್ಯೋತಿ ಸ್ವರೂಪ ಪರಮಾತ್ಮನನ್ನೇ ಸ್ವೀಕರಿಸುತ್ತಾರೆ ಎಂಬ ನಿಶ್ಚಯವು ಇದರಲ್ಲಿದೆ. ಮುಸಲ್ಮಾನ ಬಾಂಧವರು ಅಲ್ಲಾ ಹೋ ಅಕ್ಟರ್, ಲಾ ಇಲಾಹ್ ಇಲ್ಲಲ್ಲಾಹು ಎಂದು ಪ್ರಾರ್ಥಿಸುತ್ತಾರೆ. ಅಲ್ಲಾಹ್ ಏಕ್ ನೂರ್ ಹೈ ಎನ್ನುತ್ತಾರೆ. ನೂರ್ ಅಂದರೆ ಬೆಳಕು. ಇದರಿಂದ ಅರ್ಥವಾಗುತ್ತದೆ ಶಿವ ಜ್ಯೋತಿ ಸ್ವರೂಪ ಪ್ರತೀಕವೇ ನೂರ್ ಆಗಿದೆ. ಮಹಾವೀರ ಮುಂತಾದ ತೀಥರ್ಂಕರರು ಸಹ ಪರಮಾತ್ಮನನ್ನು ಅರಿಹಂತ ಎಂದು ಪ್ರಾರ್ಥಿಸುತ್ತಾರೆ. ಜ್ಯೋತಿರ್ಲಿಂಗ ಸ್ವರೂಪ ಪರಮಾತ್ಮನನ್ನೇ ತಪಸ್ವಿ ಶಂಕರನು ಸಹ ಅನನ್ಯವಾಗಿ ಧ್ಯಾನ ಮಾಡುತ್ತಾರೆ. ಪಾರ್ವತಿಯೂ ಸಹ ಜ್ಯೋತಿಲಿರ್ಂಗವನ್ನೇ ಪೂಜಿಸುತ್ತಾಳೆ. ಗಣಪತಿಯು ಸಹ ಜ್ಯೋತಿಲಿರ್ಂಗವನ್ನೇ ಪೂಜಿಸುತ್ತಾನೆ. ಕಾರ್ತಿಕನೂ ಸಹ ಜ್ಯೋತಿಲಿರ್ಂಗವನ್ನೇ ಎಲ್ಲರಿಗೂ ಉಡುಗೊರೆಯಾಗಿ ಕೊಡುವುದನ್ನು ಗಮನಿಸಬಹುದು. ಸರ್ವದೇವಾತ್ಮರಿಗೆ, ಸರ್ವಧರ್ಮಾತ್ಮರಿಗೆ ಏಕಮೇವ ಪಿತಾ ಪರಮಾತ್ಮ. ಅವನನ್ನು ಅನ್ಯ ಭಾಷೆಗಳಲ್ಲಿ ಶಿವ, ಜ್ಯೋತಿ, ಅಲ್ಲಾಹ್, ಖುದಾ ಎಂದು ಕರೆಯುತ್ತೇವೆ. ಹೇಗೆ ಅಕ್ಕಿಗೆ ಕನ್ನಡದಲ್ಲಿ ಅಕ್ಕಿ ಎಂದು, ಹಿಂದಿಯಲ್ಲಿ ಚಾವಲ್, ಆಂಗ್ಲದಲ್ಲಿ ರೈಸ್, ತೆಲುಗು ದಲ್ಲಿ ಬಿಯ್ಯಂ, ತಮಿಳಲ್ಲಿ ಅರಸಿ, ಮರಾಠಿಯಲ್ಲಿ ತಾಂದೂ‌ ಎಂದು ಕರೆಯುವಂತೆ, ಜ್ಯೋತಿಲಿರ್ಂಗನನ್ನು ಪರಬ್ರಹ್ಮ, ಗಾಡ್, ಅಲ್ಲಾಹ್, ಏಕ್ ಓಂಕಾರ ಎಂದು ಕರೆಯುತ್ತೇವೆ. ಈ ರೀತಿ ಸರ್ವಧರ್ಮದವರಿಗೂ ಒಬ್ಬನೇ ತಂದೆ ಪಿತಾ ಪರಮಾತ್ಮ, ಅಂದಮೇಲೆ ನಾವೆಲ್ಲಾ ಒಬ್ಬ ಜ್ಯೋತಿಸ್ವರೂಪ ಪರಮಾತ್ಮ ತಂದೆಯ ಮಕ್ಕಳು. ಕೆಲವೊಂದು ನಾಡ ಹಬ್ಬಗಳಿವೆ, ಕೆಲವೊಂದು ಪ್ರಾಂತ್ಯ ಹಬ್ಬಗಳು, ಗ್ರಾಮ ಹಬ್ಬಗಳು, ರಾಷ್ಟ್ರ ಹಬ್ಬಗಳು ನಮ್ಮ‌ಮಹತ್ವವನ್ನು ಸಾರಲಿವೆ ಎಂದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading