January 30, 2026
d23-tm2.jpg


ಹೊಸದುರ್ಗ: ನಗರೋತ್ತನ್ನ ಹಂತ  , ರ ಯೋಜನೆಯ ಅಡಿಯಲ್ಲಿ ಪಟ್ಟಣದ ಪ್ರಮುಖ ರಸ್ತೆಯಾದ ಹಿರಿಯೂರು ಸರ್ಕಲ್ ನಿಂದ ಮಟನ್ ಮಾರ್ಕೆಟ್ ಮುಂಭಾಗ ಮತ್ತು ತೋಟಗಾರಿಕೆ ಇಲಾಖೆಯ ಪಕ್ಕದವರೆಗೆ ರಾಜ ಕಾಲುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ಭಾನುವಾರ ಪುರಸಭಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿಆನಂದ್ ಮತ್ತು ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಸತತ ನಾಲ್ಕು ಗಂಟೆಗಳ ಕಾಲ ಕಾಮಗಾರಿಯನ್ನ ವೀಕ್ಷಿಸಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಪಟ್ಟಣದ ವ್ಯಾಪ್ತಿಯಲ್ಲಿ ನಗರೋತ್ತನ ಹಂತ 4ರ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಸುಮಾರು 4.5 ಕೋಟಿ ರೂ ವೆಚ್ಚಕ್ಕೆ ಕಳೆದ ಒಂದು ತಿಂಗಳ ಹಿಂದೆ ವಿವಿಧ ಕಾಮಗಾರಿಗಳಿಗೆ ಪಟ್ಟಣದ ೨೩ ವಾರ್ಡುಗಳಿಗೆ ಚಾಲನೆ ನೀಡಿದ್ದರು.
ಸದರಿ ಕಾಮಗಾರಿಗಳು ನಡೆಯುತ್ತಿದ್ದು ಕಾಮಗಾರಿಗಳು ನಡೆಯುತ್ತಿರುವ ಸ್ಧಳಗಳಿಗೆ ಅಧ್ಯಕ್ಷರು ಮತ್ತು ಅಭಿಯಂತರರೊಂದಿಗೆ ( ಇಂಜಿನಿಯರ್) ಬೇಟಿ ನೀಡಿ ಕಾಮಗಾರಿಗಳನ್ನ ಪರಿಶೀಲಿಸಿ ಗುತ್ತಿಗೆದಾರರಿಗೆ ಉತ್ತಮ ಗುಣ ಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಪಟ್ಟಣದ 23 ವಾರ್ಡುಗಳಲ್ಲೂ ಸಹಾ ಸಮರೋಪಾದಿಯಲ್ಲಿ ಕಾಮಗಾರಿಗಳನ್ನ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮತ್ತು ಚರಂಡಿಗಳು ಬಹು ಮುಖ್ಯವಾಗಿದ್ದು ಇವುಗಳ ನಿರ್ವಹಣೆ ಮತ್ತು ಕಾಮಗಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಪುರಸಭೆಯಿಂದ ಎಲ್ಲಾ ಕ್ರಮಗಳನ್ನ ಅನುಸರಿಸಲಾಗುತ್ತಿದ್ದು ಎಸ್.ಎಸ್.ವಿಶೇಷ ಅನುದಾನ ಹಾಗೂ ನಗರೋತ್ತನ್ನ ಹೆಚ್ಚುವರಿ ಅನುದಾನದಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪನವರು 20 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಪಟ್ಟಣದ ಅಭಿವೃದ್ದಿಗಾಗಿ ಮಂಜೂರು ಮಾಡಿಸುವ ಮೂಲಕ ಹೆಚ್ಚಿನ ಅಭಿವೃದ್ದಿಯನ್ನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
23ವಾರ್ಡುಗಳಲ್ಲಿ ನಗರೋತ್ತನ್ನ ಹಂತ ೪ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪ್ರತಿನಿತ್ಯ ಸ್ಧಳ ಪರಿಶೀಲಿಸಿ ಅಲ್ಲಿನ ಕಾಮಗಾರಿಗಳ ಗುಣ ಮಟ್ಟ ಕಾಪಾಡುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನ ನೀಡಲಾಗುತ್ತಿದೆ ಮತ್ತು ಪಟ್ಟಣದ ಪ್ರಮುಖ ರಸ್ತೆಯಲ್ಲಿರುವಂತಹ ಡಿವೈಡರ್ ನಿರ್ಮಣ ಮತ್ತು ವಿಶೇಷವಾಗಿ ಅತ್ಯಾಧುನಿಕ ವಿದ್ಯುತ್ ದೀಪಗಳನ್ನ ಅಳವಡಿಸಲು 15 ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 50 ಲಕ್ಷಕ್ಕೆ ಅನುಮೋದನೆ ನೀಡಲಾಗಿದ್ದು ಶಾಸಕರ ನೇತೃತ್ವದಲ್ಲಿ ಮತ್ತು ಪುರಸಭಾ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ತುರ್ತಾಗಿ ಪೂಜೆ ಸಲ್ಲಿಸಿ ಕಾಮಗಾರಿಯನ್ನ ಪ್ರಾರಂಭಿಸಲಾಗುವುದು ಎಂದರು.
ಈ ಸಂಧರ್ಬದಲ್ಲಿ ಗುತ್ತಿಗೆದಾರ ನಿರಂಜನ್‌ಮೂರ್ತಿ ಸೇರಿದಂತೆ ಸಾರ್ವಜನಿಕರು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading