March 19, 2026
d23-tm1.JPG


ಹೊಸದುರ್ಗದಲ್ಲಿ ಇಂದು ಇ ಖಾತಾ ಅಭಿಯಾನಕ್ಕೆ ಶಾಸಕರಿಂದ ಚಾಲನೆ
ಹೊಸದುರ್ಗ: ಫೆ.೨೪ ರಂದು ಸೋಮವಾರ ಮದ್ಯಾಹ್ನ ೧.೩೦ ಕ್ಕೆ ಪಟ್ಟಣದ ಪುರಸಭಾ ಆವರಣದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಇ ಖಾತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ.ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಒಂದು ಕಾರ್ಯಕ್ರಮಕ್ಕೆ ಪುರಸಭಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಅನಂದ್,ಉಪಾಧ್ಯಕ್ಷೆ ಶ್ರೀಮತಿ ಗೀತಾಆಸಂಧಿ ಸೇರಿದಂತೆ ಸರ್ವ ಪುರಸಭಾ ಸದಸ್ಯರುಗಳು ಭಾವವಹಿಸಲಿದ್ದು ಪಟ್ಟಣದ ೨೩ ವಾರ್ಡಿನ ಎಲ್ಲಾ ಸಾರ್ವಜನಿಕರು ಆಸ್ತಿ ಮಾಲಿಕರು ತಮ್ಮ ತಮ್ಮ ದಾಖಲೆಗಳನ್ನ ಸಲ್ಲಿಸುವ ಮೂಲಕ ಈ ಅಭಿಯಾನದ ಯಶಸ್ವಿಗೆ ಕಾರಣವಾಗಬೇಕು ಮತ್ತು ಇದನ್ನು ಸದುಪಯೋಗ ಪಡಿಸಿಕೊಂಡು ಅಭಿಯಾನವನ್ನ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿರುವ ಅವರು ಮನೆ ಮನೆ ಬಾಗಿಲಿಗೆ ಸರ್ಕಾರ ಇರಲಿ ನಿಮ್ಮ ಸಹಕಾರ
ಎಂಬ ಅಭಿಯಾನದಡಿ ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣದ ೨೩ ವಾರ್ಡುಗಳಲ್ಲಿ ಅನಧಿಕೃತ ಬಡಾವಣೆಗಳಲ್ಲಿ ಈಗಾಗಲೆ ಖಾತೆ ಹೊಂದಿರುವAತಹ ಸ್ವತ್ತುಗಳಿಗೆ ಕಳೆದ ೧೬ ವರ್ಷಗಳಿಂದ ಸ್ವತ್ತಿನ ಮಾಲಿಕರು ಪರದಾಡುವಂತಹ ಪರುಸ್ಧಿತಿಯನ್ನ ಮನಗಂಡು ರಾಜ್ಯ ಸರ್ಕಾರ ಒಂದು ಸಮಿತಿಯನ್ನು ರಚಿಸಿ ಫೆ.೧೧ ರಿಂದ ಪ್ರಾರಂಭವಾಗುವAತೆ ಮುಖ್ಯಮಂತ್ರಿಗಳು ಹಾಗೂ ಪೌರಳಿತ ಸಚಿವರಾದ ರಹೀಂಖಾನ್ ಅವರು ಈ ಒಂದು ಅಭಿಯಾನಕ್ಕೆ ಈಗಾಗಲೆ ಚಾಲನೆ ನೀಡಿದ್ದು ಈ ಅಭಿಯಾನದಡಿ ಅನಧಿಕೃತ ಬಡಾವಣೆಗಳಲ್ಲಿ ಈಗಾಗಲೆ ಖಾತೆ ಹೋಂದಿರುವAತಹ ಎಲ್ಲಾ ಸ್ವತ್ತುಗಳಿಗೆ ಅತೀ ಕಡಿಮೆ ದಾಖಲೆಗಳನ್ನು ಸಲ್ಲಿಸಿ ಒಂದು ಭಾರಿಗೆ ದುಪ್ಪಟ ತೆರಿಗೆಯನ್ನ ಪಾವತಿಸುವ ಮೂಲಕ ಎಲ್ಲಾ ಸ್ವತ್ತುಗಳಿಗೆ ಇ ಖಾತಾ ಮತ್ತು ಬಿ ಖಾತಾ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು ಆಸ್ತಿ ಮಾಲಿಕರು ಈ ಒಂದು ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಆಸ್ತಿಗಳಿಗೆ ಇ ಖಾತಾ ಪಡೆಯುವ ಮೂಲಕ ಮತ್ತು ತೆರಿಗೆ ಪಾವತಿಸುವ ಮೂಲಕ ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿರುವ ಅವರು ಈ ಅವಕಾಶವನ್ನು ಮೂರು ತಿಂಗಳವರೆಗೆ ಮಾತ್ರ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading