March 17, 2026
IMG-20250223-WA0136.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ದೇವತಾ ಕಾರ್ಯಗಳಲ್ಲಿ ಸರ್ವರೂ ಭಾಗವಹಿಸಿ ತಮ್ಮ ಕೈಲಾದ ಸೇವೆಯನ್ನು ಮಾಡಬೇಕು ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಹೇಳಿದರು.

ಅವರು ತಾಲೂಕಿನ ಮಿರ್ಲೆ ಗ್ರಾಮದ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾದ ಗರುಡಗಂಭ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ನಮ್ಮ ಗ್ರಾಮದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಗ್ರಾಮಸ್ಥರುಗಳು ಒಟ್ಟಾಗಿ ಸೇರಿ ತಮ್ಮ ತಮ್ಮ ಕೈಲಾದ ಸಹಕಾರವನ್ನು ಮಾಡಿ ಅಭಿವೃದ್ಧಿ ಮಾಡಬೇಕು ಆ ನಿಟ್ಟಿನಲ್ಲಿ ಗ್ರಾಮದ ದೇವಾಲಯಕ್ಕೆ ಗರುಡಗಂಬವನ್ನು ಮಾಡಿಸಿಕೊಟ್ಟಿರುವ ದರ್ಶನ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಗ್ರಾಮಗಳಲ್ಲಿ ದೇವರ ಕಾರ್ಯಗಳು ಆಗಾಗ್ಗೆ ನಡೆಯುವುದರಿಂದ ಸರ್ವರೂ ಒಂದೆಡೆ ಸೇರಲು, ಕುಟುಂಬಸ್ಥರು, ಮಕ್ಕಳು, ಸಂಬಂಧಿಗಳು ಹಾಗೂ ಎಲ್ಲಾ ಸಮುದಾಯದವರು ಸೇರುವಂತಾಗುತ್ತದೆ. ಇದರಿಂದ ಪ್ರತಿಯೊಬ್ಬರೂ ಒಂದೆಡೆ ಸೇರುವುದು, ಪರಸ್ಪರ ಒಬ್ಬರಿಗೊಬ್ಬರು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು, ಸಂಬಂಧಗಳನ್ನು ಮಾಡುವುದು, ಪರಸ್ಪರ ವ್ಯವಹಾರ ಹಾಗೂ ಸಮಾಲೋಚನೆಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.

ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮತ್ತು ಅದಕ್ಕೆ ನೆರವಾಗಲು ಯಾವುದೇ ತಾರತಮ್ಯವನ್ನು ಮಾಡದೆ ಒಳ್ಳೆಯ ಮನಸ್ಸಿನೊಂದಿಗೆ ಪಾಲ್ಗೊಂಡು ಸರ್ವರಿಗೂ ಒಳಿತನ್ನು ಬಯಸುವ ಕೆಲಸವನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ದೇವಾಲಯಕ್ಕೆ ಗರುಡಗಂಭ ಸ್ಥಾಪನೆಯನ್ನು ಮಾಡಿಕೊಟ್ಟ ದಾನಿಗಳಾದ
ಜೆ.ದರ್ಶನ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅರವಿಂದ, ಜಿಲ್ಲಾ ಪತ್ರ ಬರಹಗಾರ ರಾಜೀವ್, ಅರ್ಚಕ ಸುರೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು, ಮಾಜಿ ಅಧ್ಯಕ್ಷ ವಿಶ್ವನಾಥ್, ಸದಸ್ಯರುಗಳಾದ ಬಲರಾಮ, ಮಂಗಳ, ಅಣ್ಣಯ್ಯ, ಸಿಂಧು, ಮಂಜುಳಾ, ದೇವಸ್ಥಾನದ ಮುಖ್ಯಸ್ಥ ಶಾಮಿಯಾನ ಪ್ರಕಾಶ್, ಮುಖಂಡರುಗಳಾದ ರಾಜೇಶ್, ಹೊಸಹಟ್ಟಿರಘು, ಮಂಜುನಾಥ್, ಪ್ರಕಾಶ್, ಲೋಕೇಶ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading