ಹಿರಿಯೂರು ಟೌನ್ ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್,”ಡಾಗ್ ಸರ್ಕಲ್ “ಗೆ ಸಂಪರ್ಕ ಕಲ್ಪಿಸುವ ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರ ಮದ್ಯದ ಗಡಿ ಗುರುತು ಮಾಡಿ ರಸ್ತೆ ವಿವಾದ ಇತ್ಯರ್ಥ ಮಾಡಲು ಹಿರಿಯೂರು ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಮತ್ತು ನಗರಸಭೆ ಕಮಿಷನರ್ ಎ.ವಾಸಿಂ,ರವರು ಫೆಬ್ರವರಿ -21 ರಂದು DGPS ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದರು ಎಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ತಿಳಿಸಿದ್ದಾರೆ.
ಅತ್ಯಾಧುನಿಕ ಮತ್ತು ನಿಖರವಾದ ಅಳತೆ ತೋರಿಸುವ ಯಂತ್ರದ ಮೂಲಕ ಬೆಳಿಗ್ಗೆ 11-00 ಗಂಟೆಯಿಂದ ಸಂಜೆ 6-30 ರ ತನಕ ಅಳತೆ ಮಾಡಿಸಿ ನಗರಸಭೆ ಸಿಬ್ಬಂದಿಗಳ ಮೂಲಕ ಸರ್ವೆ ನಂಬರ್ 38 ರ ಗಡಿಯಿಂದ 39 ಮತ್ತು 40 ಮದ್ಯದಲ್ಲಿ 15 ಕಡೆ ಕಲ್ಲು ಹಾಕಿಸಿ ಬಣ್ಣದಲ್ಲಿ ಮಾರ್ಕ್ ಮಾಡಿದ್ದಾರೆ.
ಶೀಘ್ರದಲ್ಲೇ ನಗರಯೋಜನೆ ಅನುಮೋದಿತ ಬಡಾವಣೆ ನಕ್ಷೆಗಳ ಅಳತೆ ಪ್ರಕಾರ ಎರಡು ಸರ್ವೇ ನಂಬರ್ ಗಳಲ್ಲಿ ಬರುವ ರಸ್ತೆ ಗಡಿ ಗುರುತು ಮಾಡಿ ಒತ್ತುವರಿ ತೆರವು ಮಾಡಿಸಿ ರಸ್ತೆ ಬಿಡಿಸಿಕೊಡಲು ಮುಂದಿನ ಅಗತ್ಯ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು,ಸರ್ವೇ ಇಲಾಖೆ ಅಧಿಕಾರಿಗಳು,ಉಪ್ಪಾರ ಸಮಾಜದ ಮುಖಂಡರು,ನಾಗರೀಕ ಹಿತರಕ್ಷಣಾ ಸಮಿತಿ ಸದಸ್ಯರು,ನಗರದ ನಾಗರಿಕರು ವಿವಿಧ ಬಡಾವಣೆ ಮಾಲೀಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.