ನಾಯಕನಹಟ್ಟಿ: ಫೆ.23. ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗೆ ಜಿನಿಗಿ ಹಳ್ಳದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು..
ಮಲ್ಲೂರಹಳ್ಳಿ ಬುಡಕಟ್ಟು ಮ್ಯಾಸನಾಯಕರು ಶ್ರೀರಾಜಲು ದೇವರನ್ನು ಉರಿಮೆ,ವಾದ್ಯಗಳೊಂದಿಗೆ ಗುಡಿಯಿಂದ ಹೊರಡಿಸಿಕೊಂಡು ಜಿನಿಗಿಹಳ್ಳಕ್ಕೆ ಕರದುಕೊಂಡು ಹೋಗಿ ಗಂಗಾ ಪೂಜೆ ನೆರವೇರಿಸಲಾಯಿತು.
ಎತ್ತಿನಗಾಡಿ,ಟ್ರಾಕ್ಟರ್ ಗಳ ಮೂಲಕ ದೇವರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು




24 /2/ 2025ನೇ ಸೋಮವಾರ ಸಂಜೆ ಶ್ರೀ ರಾಜಲುದೇವರು ಮಹಾಪೂಜೆ ನಂತರ ಓಬಯನಹಟ್ಟಿ ಅಣ್ಣ-ತಮ್ಮಂದಿರಿಂದ ಹಾಗೂ ಬಜನಾ ಕಲಾವಿದರಿಂದ ಕಾರ್ಯಕ್ರಮ ಪ್ರೌಢ ಶಾಲಾ ಬಯಲು ಹಸಿರು ಪಾಳಯ ಅಂಗಳದಲ್ಲಿ ಜರುಗುವುದು ದಿನಾಂಕ 25.2.2025ನೇ ಮಂಗಳವಾರ ಆಗಲು ಶ್ರೀದೇವರ ಎತ್ತುಗಳ ಹರಿಯುವುದು ಮತ್ತು ಅನ್ನದಾತೋಹ ಕಾರ್ಯಕ್ರಮ ಇರುತ್ತದೆ.
ದಿನಾಂಕ 26.2.2025ನೇ ಬುಧವಾರ ಮುಂಜಾನೆ ಸೂರ್ಯೋದಯ ಸಮಯದಲ್ಲಿ ಶ್ರೀ ಓಬಳದೇವರು ಮತ್ತು ಶ್ರೀ ರಾಜಲು ದೇವರುಗಳ ವಿಜೃಂಭಣೆಯಿಂದ ಗುಡಿ ತುಂಬುವುದು ನಂತರ ಇದೇ ದಿನ ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಯೋಗದೊಂದಿಗೆ ಜಾತ್ರೆಗೆ ತೆರೆ ಬೀಳುವುದು
ಶನಿವಾರ ಮುಂಜಾನೆ ಮಹಾ ಮಂಗಳಾರತಿ ಮತ್ತು ಮಹಾಪೂಜೆ ಜರಗಲಾಗುತ್ತದೆ ಆದ ಬಳಿಕ ಸಂಘ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಯಲ್ಲಿ ಪಂಜು ನುಂಗುವ ಕಾರ್ಯಕ್ರಮ ನಡೆಯಲಿದೆ. ಬುಧವಾರ ಮುಂಜಾನೆಯ ಸಮಯದಲ್ಲಿ ವಿಜೃಂಭಣೆಯಿಂದ ಗುಡಿ ತುಂಬಲಿದೆ
ಇದೇ ಸಂದರ್ಭದಲ್ಲಿ ನೇರಲಗುಂಟೆ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ, ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಯಜಮಾನರು ಓ. ಮಂಜುನಾಥ್, ಲೈಸನ್ಸ್ದಾರರು ಜಿ ಮಲ್ಲಿಕಾರ್ಜುನ್, ಗುಂಜಿಗಾರರು ಜಿ.ಯು. ರಾಜೇಶ್ ರೆಡ್ಡಿ, ಹಾಗೂ ಮಲ್ಲೂರಹಳ್ಳಿ ಯಜಮಾನರು ಗೌಡರು ಎಲ್ಲಾ ಗುಡಿಕಟ್ಟಿನ ಅಣ್ಣತಮ್ಮಂದಿರು ಪೂಜಾರಿಗಳು ಧಗಂ ಪೂಜಾರಿಗಳು ಕಿಲಾಡಿಗಳು ಮೇಟಿ ಗೊಂಚಿಗಾರರು ಕೋಮುದಾರರು ಮತ್ತು ಓಬಯ್ಯನಹಟ್ಟಿ ಗೌಡ್ರು ಅಣ್ಣ ತಮ್ಮಂದಿರು ಬಂಧುಗಳು ಹಾಗೂ ಸರ್ವ ಭಕ್ತಾದಿಗಳು ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.