ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಕಾರ್ಯ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿತ್ತು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಕಾರ್ಯಕ್ಕೆ ಸಂಬAಧಿಸಿದAತೆ ಕಾರ್ಯೊನ್ಮುಖರಾಗಿ, ಜಲಸಂಪನ್ಮೂಲ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಯೋಜನೆಯ ಪ್ರಗತಿಯ ಕಾರ್ಯಕ್ಕೆ ಗೋವಿಂದಪ್ಪನವರ ಶ್ರಮ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಕಂದಾಯ ಗ್ರಾಮ, ಉಪಗ್ರಾಮ, ಬಗರ್ ಹುಕ್ಕುಂ ಸಾಗುವಳಿ ಪತ್ರ, ಬರಖಾಸ್ತು ಪೋಡಿ, ೯೪ಸಿ ಹಕ್ಕುಪತ್ರ, ಇ-ಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಹುದಿನಗಳಿಂದ ಚಿತ್ರದುರ್ಗ ಜಿಲ್ಲೆಯ ೬ ತಾಲೂಕುಗಳಲ್ಲಿ ೧೦,೦೦೦ ಫಲಾನುಭವಿಗಳನ್ನು ಹುಡುಕಿ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸಬೇಕೆಂದು ಯೋಜನೆ ರೂಪಿಸಲಾಗಿತ್ತು. ಹೊಸದುರ್ಗದಲ್ಲಿ ಇಂತಹ ಕಾರ್ಯ ಮೊದಲು ನಡೆಯುತ್ತಿದೆ ಎಂದರು.
ತಾಲೂಕಿನ ಬಹುತೇಕ ಕಡೆ ಚೆಕ್ ಡ್ಯಾಮ್ಗಳನ್ನು ನಿರ್ಮಿಸಿ, ಅಂತರ್ಜಲದ ಮಟ್ಟ ಹೆಚ್ಚಿಸಿದ್ದಾರೆ. ಒಂದು ತಿಂಗಳೊಳಗೆ ಚಿತ್ರದುರ್ಗದ ಬೋಡೂರು ತಲುಪಬೇಕೆಂಬ ಗುರಿಯಿದೆ. ೫ ಗ್ಯಾರಂಟಿಗಳ ಮಧ್ಯೆಯು ಸಿಎಂ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯ ಹಿಂದೆಯೇ ನಡೆಯಬೇಕಿತ್ತು. ನಿರಂತರ ಪ್ರಯತ್ನದಿಂದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮದಿಂದ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಕೃಷ್ಣೆಗೌಡರು ಕಂದಾಯ ಸಚಿವರಾದ ಮೇಲೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಜಿಲ್ಲಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಕ್ಕೆ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷ್ ಆಡಳಿತದ ವೈಖರಿಯನ್ನ ಮೊಟಕುಗೊಳಿಸಿ, ನಮ್ಮದೇ ಆಡಳಿತವನ್ನು ನೀಡುತ್ತಿದ್ದಾರೆ. ಸಚಿವರಂತೆಯೇ ಜಿಲ್ಲಾಧಿಕಾರಿಗಳು ಉತ್ತಮ ಆಡಳಿತ ನಡೆಯುತ್ತಿದ್ದು, ಇದು ನಿರಂತರವಾಗಿ ಹೀಗೆಯೇ ನಡೆಯಬೇಕು ಎಂದು ತಿಳಿಸಿದರು.
ವಿವಿ ಸಾಗರ ಜಲಾಶಯದಿಂದ ಹಿನ್ನೀರಿನ ಭಾಗದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ೧೩೦ ಅಡಿಗಿಂತ ಹೆಚ್ಚು ನೀರು ಬಂದಾಗ ಜನರ ಭೂಮಿ ಮುಳುಗಡೆಯಾಗುತ್ತದೆ. ಇದರಿಂದಾಗಿ ಕೋಡಿ ಬಾಯಿಗೆ ೧೨೫ ಕೋಟಿ ರೂ.ವೆಚ್ಚದಲ್ಲಿ ಕ್ರಸ್ಟ್ ಗೇಟ್ ಅಳವಡಿಸಲಾಗುವುದು. ಇನ್ನೆರಿಗೆ ಮುಳುಗಡೆಯಾಗಿರುವ ರೈತರ ಜಮೀನುಗಳ ಬೆಳೆಗಳ ನಷ್ಟಕ್ಕೆ ಪರಿಹಾರ ಕೊಡಲು ಆಗಿರಲಿಲ್ಲ. ಇದೀಗ, ೯೪೦ ರೈತರಿಗೆ ಪರಿಹಾರ ನೀಡಲಾಗುತ್ತದೆ. ಫೆಬ್ರವರಿ ತಿಂಗಳಿಗೆ ಹೊಸದುರ್ಗ ತಾಲೂಕಿನ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಕಾರ್ಯ ನಡೆಯಲಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗೋವಿಂದಪ್ಪನವರು ಹೊಸದುರ್ಗದಲ್ಲಿ ಮಾದರಿ ಕಾರ್ಯ ರೂಪಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಅವರು ಸಕ್ರಿಯರಾಗಿರುತ್ತಾರೆ. ೪ ಬಾರಿ ಶಾಸಕರಾಗಿ ಹೊಸದುರ್ಗ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ೨೦೦೨ರಲ್ಲಿ ರಚನೆಯಾದ ನಂಜುAಡಪ್ಪ ವರದಿಯ ಪ್ರಕಾರ ಹೊಸದುರ್ಗ ಹಿಂದುಳಿದ ತಾಲೂಕು ಪಟ್ಟಿಗೆ ಸೇರಿದ್ದು, ಗೋವಿಂದಪ್ಪನವರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಕಲ್ಯಾಣ ಶ್ರಮಿಸುತ್ತಿದ್ದಾರೆ. ಸರ್ಕಾರದ ಸವಲತ್ತುಗಳನ್ನ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೊಸದುರ್ಗ ಕ್ಷೇತ್ರದ ಅಭಿವೃದ್ಧಿಗೆ ೪.೦೦೦ ಕೋಟಿ ರೂ.ಹಣವನ್ನು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್,ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ತಾಂತ್ರಿಕ ನಿರ್ಧೇಶಕ ರಾಮಾಂಜನೇಯ,ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಣ್ಣ,ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಆರ್.ಶಾಂತಕುಮಾರ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಆಗ್ರೋ ಹೆಚ್.ಶಿವಣ್ಣ, ಡಿಪಿ ಸದಸ್ಯರುಗಳಾದ ದೀಪಿಕಾಸತೀಶ್, ಲೋಕೇಶ್ವರಪ್ಪ, ಪದ್ಮನಾಭ ಡಿ, ತಹಶಿಲ್ದಾರ್ ತಿರುಪತಿಪಾಟೀಲ್,ತಾಲೂಕು ಪಂಚಾಯಿತಿ ಇ.ಓ ಸುನಿಲ್‌ಕುಮಾರ್, ಬಿ.ಇ.ಓ ಸೈಯಾದ್‌ಮೋಸಿನ್ ಸೇರಿದಂತೆ ಮತ್ತಿತರರು ಉಪಸ್ಧಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.