January 30, 2026
FB_IMG_1766417185382.jpg

ಚಿತ್ರದುರ್ಗಡಿ.22:
ಟೆಕ್ನಾಲಜಿ ಕ್ಲಿನಿಕ್, ಕೈಗಾರಿಕಾ ಯಾಂತ್ರೀಕರಣವು ಒಂದು ದೊಡ್ಡ ಪದ. ತಾಂತ್ರಿಕ ಯುಗದಲ್ಲಿ ಕೈಗಾರಿಕೋದ್ಯಮದಲ್ಲಿ ಸ್ಪರ್ಧಾತ್ಮಕತೆಗೆ ಯಾಂತ್ರೀಕರಣವು ಒಂದು ಕಾರ್ಯತಂತ್ರದ ಗುಣಕವಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಶ್ರಮ ಮತ್ತು ವ್ಯಾತ್ಯಾಸ ಕಡಿಮೆ ಮಾಡುತ್ತದೆ. ಸುರಕ್ಷತೆ ಮತ್ತು ಗುಣಮಟ್ಟ ಸುಧಾರಿಸುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಹೇಳಿದರು.

ಚಳ್ಳಕೆರೆಯ ನಗರದ ಎಪಿಎಂಸಿ ಯಾರ್ಡ್ ಮುಂಭಾಗದ ಚೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿ ಸೋಮವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಆರ್‍ಎಎಂಪಿ ಯೋಜನೆಯಡಿ ಎರಡು ದಿನಗಳ ಕೈಗಾರಿಕೋದ್ಯಮದಲ್ಲಿ ತಾಂತ್ರಿಕ ಚಿಕಿತ್ಸಾಲಯ ಯೋಜನೆಯ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಸ್ತಚಾಲಿತ ಪ್ರಕ್ರಿಯೆಗಳೊಂದಿಗೆ ಅಸಾಧ್ಯವಾದ ವ್ಯವಹಾರ ಮಾದರಿಗಳನ್ನು ಬಹಳ ಸರಳೀಕರಣಗೊಳಿಸುತ್ತದೆ. ಇಂತಹ ಎಲ್ಲಾ ಅನುಕೂಲತೆಯೂ ತಾಂತ್ರಿಕ ಚಿಕಿತ್ಸಾಲಯ ಕಾರ್ಯಾಗಾರದಲ್ಲಿ ಕೈಗಾರಿಕೋದ್ಯಮಿಗಳು ಹೆಚ್ಚಿನ ಜ್ಞಾನ ಪಡೆಯಬಹುದಾಗಿದೆ ಎಂದು ತಿಳಿಸಿದ ಅವರು, ಸರ್ಕಾರದ ಯೋಜನೆಗಳನ್ನು ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಕೈಗಾರಿಕಾ ಘಟಕಗಳಲ್ಲಿ ಹೊಸ ಹೊಸ ತಾಂತ್ರಿಕ ಯಂತ್ರಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಸತೀಶ್ ಮಾತನಾಡಿ, ಕರ್ನಾಟಕದ ವಿಜ್ಞಾನ ನಗರ ಮತ್ತು ತೈಲ ನಗರಿ ಎಂದು ಕರೆಯಲ್ಪಡುವ ಚಳ್ಳಕೆರೆ ನಗರ ಮುಂಬೈ ಮಾರುಕಟ್ಟೆ ನಂತರ ತೈಲದ ಎರಡನೇ ಅತೀ ದೊಡ್ಡ ಉತ್ಪಾದಕ/ಪೂರೈಕೆದಾರ ಕೇಂದ್ರವಾಗಿದೆ. ಚಳ್ಳಕೆರೆಯಲ್ಲಿ ಸುಮಾರು 10 ರಿಂದ 15 ತೈಲ ಉತ್ಪಾದನೆ ಕೈಗಾರಿಕಾ ಘಟಕಗಳು ಹಾಗೂ ಸುಮಾರು 50 ಶೇಂಗಾ ಬೀಜ ಬೇರ್ಪಡಿಸುವ ಕೈಗಾರಿಕಾ ಘಟಕಗಳಿವೆ. ಎಣ್ಣೆ ಮಾತ್ರವಲ್ಲದೇ ಬೇಳೆ, ಹುರಿದ ಕಡಲೆ, ಅಕ್ಕಿ ಮುಂತಾದ ಹಲವಾರು ಕೈಗಾರಿಕೆಗಳು ಸಹ ಇವೆ. ಅಂತಹ ಉದ್ಯಮಗಳಲ್ಲಿ ಈಗಾಗಲೇ ಹಲವು ಹೊಸ ತಾಂತ್ರಿಕ ಯಂತ್ರೋಪಕರಣಗಳನ್ನು ಬಳುಸುತ್ತಿದ್ದು, ಇಂತಹ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೈಗಾರಿಕಾ ಘಟಕಗಳಿಗೆ ಅನುಕೂಲವಾಗುವಂತ ವಿಷಯ ಅರಿಯಬೇಕೆಂದು ಕೈಗಾರಿಕೋದ್ಯಮಿಗಳಿಗೆ ಕಿವಿ ಮಾತು ಹೇಳಿದರು.
ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್) ಸಿಇಒ ಸಿದ್ಧರಾಜು ಮಾತನಾಡಿ, ಮೊದ ಮೊದಲು ಗಾಣದಿಂದ ಎಣ್ಣೆಯನ್ನು ತೆಗೆಯುವ ಅಭ್ಯಾಸವಿತ್ತು, ಗಾಣಗಳಿಂದ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಈಗಿನ ಕಾಲದಲ್ಲಿ ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ಎಣ್ಣೆ ತೆಗೆಯುತ್ತಿದ್ದಾರೆ, ಎಕ್ಸುಪೆಲ್ಲರು ಯಂತ್ರಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಗಾಣದಿಂದ ಬರುವ ಹಿಂಡಿಯಲ್ಲಿ ಶೇ.11 ಮೇಲೆ ಎಣ್ಣೆ ಉಳಿದಿರುತ್ತದೆ, ಆದರೆ ಎಕಸುಪೆಲ್ಲರು ಯಂತ್ರಗಳಿಂದ ಬರುವ ಹಿಂಡಿಯಲ್ಲಿ ಶೇ.6.7 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಉಳಿದಿರುತ್ತದೆ. ಶೇಂಗಾ ಹಿಂಡಿಯಲ್ಲಿ ಉಳದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಎಂಬ ಕೈಗಾರಿಕಾ ಯಂತ್ರದಲ್ಲಿ ಅಳವಡಿಸಿ ತೆಗೆದಾಗ ಸಾಲೈಂಟ್ ಪ್ಲಾಂಟಿಮ್‍ನಿಂದ ಬರುವ ಹಿಂಡಿಯಲ್ಲಿ ಶೇ.1ಕ್ಕಿಂತ ಕಡಿಮೆಯಾಗಿ ಎಣ್ಣೆ ಉಳಿದಿರುತ್ತದೆ. ಹಿಂಡಿಯಿಂದ ಪೂರ್ಣ ಎಣ್ಣೆಯನ್ನು ತೆಗೆದ ಮೇಲೆ ಹಿಂಡಿಯ ಪೆÇ್ರೀಟಿನ್ ಅಂಶ ಜಾಸ್ತಿ ಆಗುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ಹಸುಗಳಿಗೆ ಮೇವಾಗಿ ಬಳಸುತ್ತಾರೆ ಮತ್ತು ಹೊಲದಲ್ಲಿ ಎರೆ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಆದ್ದರಿಂದ ಇಂದು ಮಾರುಕಟ್ಟೆಯಲ್ಲಿ ಜನತೆ ನಾವೀನತ್ಯೆಗೆ ಹೆಚ್ಚಾಗಿ ಒಲವು ತೋರುತ್ತಿರುವುದರಿಂದ ತಮ್ಮ ಕೈಗಾರಿಕೋದ್ಯಮದಲ್ಲಿ ನವ್ಯ ತಾಂತ್ರಿಕ ಯಂತ್ರೋಪಕರಣಗಳನ್ನು ಬಳಸಿಕೊಳ್ಳಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೈಗಾರಿಕೋದ್ಯಮಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಚಿದಾನಂದ ಗುಪ್ತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ.ಮಂಜುನಾಥ ಸ್ವಾಮಿ, ಮೈಸೂರು ಸಿಎಫ್‍ಟಿಆರ್‍ಐ ಉಪನ್ಯಾಸಕ ರಾಘವೇಂದ, ಡಿಪಿಆರ್ ಕನ್ಸ್‍ಲ್ಟಂಟ್ ವೆಂಕಟೇಶ್ ಗೌಡ, ಮೈಸೂರಿನ ಡಿಎಫ್‍ಒ ವಿಭಾಕರ್ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading