ಚಳ್ಳಕೆರೆ : ಮತ್ಸಮುದ್ರ ಗ್ರಾಮದ
ಶ್ರೀ ಆಂಜನೇಯಸ್ವಾಮಿ ದೇವರ ಕಡೇ
ಕಾರ್ತಿಕೋತ್ಸವ, ರಥೋತ್ಸವ ಹಾಗೂ
ಮನೋರಂಜನೆಯ ಉಟ್ಲಕಂಬ ಏರುವ
ಉತ್ಸವ ಶನಿವಾರ ಬೆಳಗಿನಜಾವ ದಿಂದ
ಭಾನುವಾರ ಸಂಜೆವರೆಗೆ ವಿಜೃಂಭಣೆಯಿಂದ
ಜರುಗಿದವು.
ಶ್ರೀ ದೇಗುಲದಲ್ಲಿ ಕಾರ್ತಿಕ ದೀಪವನ್ನು
ಬೆಳಗಿಸುವ ಮೂಲಕ ಭಕ್ತರು ದೇವರಿಗೆ
ಹಣ್ಣುಕಾಯಿ ಸಮರ್ಪಿಸಿದರು. ಬಳಿಕ
ಬೆಳಗಿಜಾವ ರಥೋತ್ಸವದ ವೇಳೆ ಅಪಾರ
ಸಂಖ್ಯೆಯ ಭಕ್ತರು ಭಾಗಿಯಾಗಿ
ರಥೋತ್ಸವದಲ್ಲಿ ತೇರಿಗೆ ಸೂರುಬೆಲ್ಲ
ಸೂರುಮೆಣಸ್ಸು ಎರಚುವ ಮೂಲಕ ಮೂಲಕ
ಭಕ್ತಿ ಸಮರ್ಪಿಸಿದರು.
ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವ ಉಟ್ಲ ಪರಿಷೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.






ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ.ನಗರಸಭೆ ಸದಸ್ಯರಮೇಶ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕುಮಾರ್, ಮುಖಂಡರಾದ ಮೂಳಪ್ಪ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಹಾಲೇಶ, ಅಂಜಿನಪ್ಪ, ತಿಪ್ಪೇಸ್ವಾಮಿ, ರುದ್ರಪ್ಪ, ಗುಜಾರಪ್ಪ, ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯರಯ .ಮುಖಂಡರು ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.