ತಳಕು ಡಿ.22ಮನಸ್ಸನ್ನು ಕೇಂದ್ರೀಕರಿಸುವ ಸ್ಥಳಗಳೆಂದರೆ ಅದುವೇ ದೇವಸ್ಥಾನಗಳು ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು
ಅವರು ತಳಕು ಹೋಬಳಿಯ ಬಂಡೆ ತಿಮ್ಮಲಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಭಾರತದ ಹಿಂದೂ ಪರಂಪರೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಮೊದಲನೇ ಸ್ಥಾನವಿದೆ ಇದು ನಮ್ಮಗಳ ನಾಗರೀಕತೆಗಳಿಂದ ಬಂದಂತ ಬಳುವಳಿ ಶ್ರೀ ರಾಮಾಯಣ ಮತ್ತು ಗೀತೆಗಳು ಉಪದೇಶಗಳಷ್ಟೇ ಮೌಲ್ಯಗಳನ್ನು ದೇವಸ್ಥಾನಗಳ ಕಠಿಣ ವೃತ ಪೂಜಾ ಪೂಜಾ ವಿಧಿ ವಿಧಾನಗಳಿಂದ ಮತ್ತು ಉತ್ತಮ ನಡವಳಿಕೆಗಳಿಂದ ಪಡೆಯಬಹುದು ಇದಕ್ಕೆ ಆಂಜನೇಯ ನಮಗೆ ಉದಾಹರಣೆ ದಾಸನಾದರೂ ಕೂಡ ಶ್ರೀರಾಮನಿಗಿಂತ ಉತ್ಕೃಷ್ಟವಾದ ಸಾಲಿಗೆ ಆಂಜನೇಯ ನಿಲ್ಲುತ್ತಾನೆ ಶ್ರದ್ಧೆ ನಿಷ್ಠೆ ಮತ್ತು ಭಕ್ತಿ ಇವುಗಳಿಗೆ ಮುಖ್ಯ ಕಾರಣ ಈ ರಥೋತ್ಸವದ ಮುಖಾಂತರ ನಾವೆಲ್ಲರೂ ಕೂಡ ಈ ಬರುವ ವರ್ಷ ಸನ್ನಡತೆ ಮತ್ತು ಸನ್ಮಾರ್ಗದಲ್ಲಿ ನಡೆಯೋಣ ಮತ್ತು ಸಕಲ ಸೌಭಾಗ್ಯವನ್ನು ಕೊಟ್ಟು ನಮ್ಮನ್ನು ಬೆಳಕಿನ ಕಡೆಗೆ ಕೊಂಡೊಯ್ಯಲಿ ಎಂದು ಆಂಜನೇಯ ನನ್ನ ಪ್ರಾರ್ಥಿಸೋಣ ಎಂದು ಹೇಳಿದರು

ಸಮಾರಂಭದಲ್ಲಿ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ನಾಯಕ ಸದಸ್ಯರಾದಂತಹ ಮತ್ತು ವಕೀಲರಾದಂತ ಶಶಿ ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್ ಗ್ರಾಮದ ಹಿರಿಯ ಮುಖಂಡರಾದ ರಾಮಣ್ಣ.ಬಸನಗೌಡ ಡಬಲ್ ಮಾರಣ್ಣ. ಮತ್ತು ಶ್ರೀಧರ್ ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.