March 16, 2026
IMG-20241222-WA0083.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಪ್ರತಿಯೊಬ್ಬರೂ ತಮ್ಮ ನಡೆ ನುಡಿಯನ್ನು ಒಳ್ಳೆಯದಾಗಿ ಇಟ್ಟುಕೊಂಡಿದ್ದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಎಸ್ಎಂಎಸ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಟಿ.ಬಸವಂತಪ್ಪ ಹೇಳಿದರು.

ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚನ್ನoಗೆರೆ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯ 1997- 2000ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ಶಿಕ್ಷಕರು ಶಾಲೆಗೆ ಬಂದು ಪಾಠ ಮಾಡುವ ಮುನ್ನ ಮನೆಯಲ್ಲಿ ಪೂರ್ವ ತಯಾರಿ ಮಾಡಿಕೊಂಡು ಬಂದು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಹಿರಿಯ ವಿದ್ಯಾರ್ಥಿಗಳು ತಾವುಗಳು ಕೆಲಸ ಮಾಡುವ ಸ್ಥಳಗಳಲ್ಲಿ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಬೇಕು. ತಮ್ಮ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಎಲ್ಲಾ ಶಿಕ್ಷಕರುಗಳನ್ನು ಒಂದೇ ವೇದಿಕೆಗೆ ಕರೆತಂದು ಗೌರವಿಸುವ ಕೆಲಸವನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇದೊಂದು ಎಂದೆಂದಿಗೂ ಮರೆಯಲಾಗದ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ಎಂಎಸ್ ಪ್ರೌಢಶಾಲೆಯಲ್ಲಿ ಈ ಹಿಂದೆ ಸೇವೆಸಲ್ಲಿಸಿದ ಶಿಕ್ಷಕರುಗಳಾದ
ಎಂ.ಎನ್.ಮಾಸಣಗಿ,
ಎನ್.ನಂಜುಂಡಪ್ಪ,
ಸಿ.ಎಂ.ಬಸವಲಿಂಗಪ್ಪ,
ಡಿ.ಜಿ.ಪ್ರಕಾಶ್, ಸುಬ್ರಮಣ್ಯ,
ಹೆಚ್.ರಂಗಪ್ಪ,
ಎಂ.ಹೆಚ್.ಮಕಾoದರ್, ರೇಣುಕಪ್ಪ, ಕಾಳಪ್ಪ, ಎನ್.ಎಸ್.ಗುರುಸಿದ್ದಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ ಕಾಂತರಾಜು, ಎಸ್ ಎಂ ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ
ಕೆ.ಜಿ.ರಂಗಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ನಟರಾಜ್, ರಘು, ಕಾಂತರಾಜು, ಹಿರಿಯ ವಿದ್ಯಾರ್ಥಿಗಳಾದ ಸುರೇಶ, ವೃಷಬೇಂದ್ರ, ಸುಕುಮಾರ್, ಭಾನುಶ್ರೀ, ಹೆಚ್.ಆರ್.ನಂದಿನಿ, ಹರ್ಷವರ್ಧನ್, ಯೋಗಾನಂದ, ರಾಜೇಂದ್ರ, ಹೆಚ್.ನಂದಿನಿ, ಸುದೀಸ್, ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು, ಶಿಕ್ಷಕರುಗಳು, ಮುಖಂಡರುಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading