ಪರಶುರಾಂಪುರ.
ಭದ್ರಾ ಮೇಲ್ದಂಡೆ ನೀರು ಚಳ್ಳಕೆರೆ ಮತ್ತು ಪಾವಗಡ ಭಾಗದ ಕೆರೆಗಳಿಗೆ ಮುಂದಿನ ವರ್ಷದ ಅವಧಿಯೊಳಗೆ ನೀರು ಹರಿಸುವ ವಿಶ್ವಾಸವಿದೆ ಎಂದು ವಿಶ್ವೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಹೋಬಳಿ ವ್ಯಾಪ್ತಿ ಸೇರಿದಂತೆ ಚಳ್ಳಕೆರೆ ಮತ್ತು ಪಾವಗಡ ಭಾಗದ ಕೆರೆಗಳಿಗೆ ಭದ್ರ ನೀರು ಹರಿಸುವ ನಿಟ್ಟಿನಲ್ಲಿ ಪಿ.ಮಹದೇವಪುರ,ಗೋಸಿಕೆರೆ,ಕ್ಯಾದಿಗುಂಟೆ ಲಿಂಗದಹಳ್ಳಿ ,ಬೆಳ್ಳಿ ಬಟ್ಟಲು,ಶೈಲಾಪುರ,ವದನ ಕಲ್ಲು ಒಳಗೋಂಡಂತೆ ಇನ್ನೂ ಹಲವಾರು ಹಳ್ಳಿಗಳಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿದರು.
ಈ ವೇಳೆಯಲ್ಲಿ ಆಕ್ಷೇಪಣೆಗಳಿದ್ದಂತಹ ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಾ,ರೈತರ ಮನವೊಲಿಸಿ ರೈತಪರ ಕಾಳಜಿಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸೋಮಗದ್ದು ರಂಗಸ್ವಾಮಿ ಅವರ ಸಲಹೆಯಂತೆ ಕಿಸಾನ್ ಎ.ನಾಗರಾಜ್ ಪರಶುರಾಂಪುರ ಮಾತನಾಡಿ, ಭದ್ರಾ ಮೇಲ್ದಂಡೆ ಯಿಂದ ಪೈಪ್ಲೈನ್ ಹೋಗುವ ಮಾರ್ಗದಲ್ಲಿ ಬರುವ ರೈತರಿಗೆ ಯಾವುದೇ ತೊಂದರೆಯಾಗದ ರೀತಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿಕೊಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.ನಿದೇ೯ಶಕರು ಗ್ರಾಮೀಣ ಭಾಗದವರಾಗಿರುವುದರಿಂದ ಇಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆ ಇರುವುದರಿಂದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಹಾಗೆ ರೈತರಿಗೆ ಬರಬೇಕಾದ ಬೆಳೆ ಪರಿಹಾರ ಹಾಗೂ ಭೂಮಿ ಪರಿಹಾರವನ್ನು ಮೂರ್ನಾಲ್ಕು ತಿಂಗಳೊಳಗೆ ಕೊಡಿಸಿ ಕೊಡಬೇಕೆಂದು ಮನವಿ ಮಾಡಿದರು, ಜೊತೆಗೆ ಅತಿ ತುರ್ತಾಗಿ ಕೆರೆಗಳಿಗೆ ನೀರುಣಿಸಿದರೆ ಈ ಭಾಗದ ರೈತರು ಕೃಷಿಯಲ್ಲಿ ತೊಡಗಿ ಆರ್ಥಿಕವಾಗಿ ಸದೃಢವಾಗುವುದರ ಮುಖಾಂತರ ರೈತರೇ ಈ ದೇಶದ ಬೆನ್ನೆಲುಬು ಎಂಬ ನಾಣ್ಣುಡಿಯಂತೆ ಸ್ವಾವಲಂಬನೆ ಬದುಕು,ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮೈಲಿಗಲ್ಲಾಗುವರು ತಿಳಿಸಿದರು.
ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆಯ ಅಧಿಕಾರಿಗಳಾದ CE ಪಾಟೀಲ್ , EE ಮಧುಸೂದನ್,AEE ಜನಾರ್ದನ್,ENG ಅಮೋಘ,ರೈತರದ ಶ್ರೀ ರಾಮಣ್ಣ ಈರಣ್ಣ, ಚಿತ್ತಯ್ಯ, ರವಿ ,ವದನಕಲ್ಲು ಪಾಪಣ್ಣ ಒಳಗೊಂಡಂತೆ ಇನ್ನಿತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.