January 29, 2026
IMG-20241221-WA0208.jpg


ಶ್ರೀ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಸಾಣೀಕೆರೆ ವತಿಯಿಂದ ಇಂದು ಮೊದಲ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು ಕಾರ್ಯಕ್ರಮದ ಉದ್ಟಾಟನೆಯನ್ನು ಸಾಣೀಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ .ಡಿ ದೀಪ ಬೆಳಗಿಸುವ ಮೂಲಕ ಉದ್ಟಾಟನೆ ಮಾಡಿದರು ನಂತರ ಮಾತನಾಡಿ ಇಂದಿನ ಪ್ರಸ್ತುತ ದಿನಗಳಲ್ಲಿ ಒತ್ತಡದ ಜೀವನ ನಿವಾರಣೆಗೆ ಯೋಗ ಧ್ಯಾನ ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ಪ್ರತಿ ದಿನ ನಾವುಗಳು ಐದು ನಿಮಿಷಗಳಾದರೂ ಧ್ಯಾನವನ್ನು ರೂಡಿಸಿಕೊಳ್ಳಬೇಕು ಅದಕ್ಕಾಗಿ ಸಾಣೀಕೆರೆ ಶ್ರೀಪತಂಜಲಿ ಯೋಗ ಕೇಂದ್ರವು ಯೋಗ ಧಾನ್ಯ ಕಾರ್ಯವನ್ನು ಗ್ರಾಮದಲ್ಲಿ ನಡೆಸುತ್ತಿರುವುದು ಶ್ಲಾಘಿಸಿದರೂ, ಗ್ರಾಮ ಪಂಚಾಯತ್ ಸದಸ್ಯರಾದ ಅಂಜು ಮಂಜುನಾಥ್ ಹಿಂದಿನ ಋಷಿ ಮುನಿಗಳು ರೂಡಿಸಿಕೊಂಡಿದ್ದ ಜೀವನ ಪದ್ಧತಿ ಇಂದು ವಿಶ್ವಕ್ಕೆ ಮಾದರಿಯಾಗಿ ವಿಶ್ವ ಧ್ಯಾನ ದಿನಾಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ವಿಷಯ ಈ ಯೋಗ ಧ್ಯಾನ ವನ್ನು ನಮ್ಮ. ಗ್ರಾಮ ದ ಪ್ರತಿ ಮನೆಯಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು ,ಸಂಚಾಲಕರಾದ ದಯಾನಂದ ಯೋಗ ,ಧ್ಯಾನ ನಡೆದು ಬಂದ ದಾರಿ ಈಗ.ಇದರ ಮಹತ್ವ ಎಷ್ಟು ಪ್ರಮುಖ ಎಂಬುದನ್ನು ಅರ್ಥೈಸಿದರು.ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಜೆ ತಿಪ್ಪೇಸ್ವಾಮಿ ತಿಮ್ಮಣ್ಣ,ತರಂಗ ಶ್ರೀಪತಂಜಲಿ ಯೋಗ ಶಿಕ್ಷಣ ಕೇಂದ್ರದ ಸದಸ್ಯರು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಐದು ನಿಮಿಷ ಧ್ಯಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕಾರ್ಯಕ್ರಮ ಯಶ್ವಸಿಗೊಳಿಸಿದರು. ನಟರಾಜ .ಡಿ ಶಿಕ್ಷಕರು ಸ್ವಾಗತಿಸಿದರು ಜಗದೀಶ್ ಕಾರ್ಯಕ್ರಮದಲ್ಲಿ ವಂದಿಸಿದರು‌.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading