ಚಳ್ಳಕೆರೆ: ತಾಲೂಕಿನ ನಗರ ಸಭೆಗೆ ನೂತನ ಉಪಾಧ್ಯಕ್ಷರಾಗಿ 10ನೇ ವಾರ್ಡಿನ ಸದಸ್ಯೆ ಸುಮಾ ಭರಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಈ ಹಿಂದೆ ರಹೀಮ್ ನಗರ ವಾರ್ಡಿನ ಸುಜಾತ ಪ್ರಹಲ್ಲಾದ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಈಗ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸುಮಾ ಭರಮಯ್ಯರವರನ್ನು ಆಯ್ಕೆ ಮಾಡಲಾಗಿದ್ದು ಎರಡೂವರೆ ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಮ ಭರಮಯ್ಯನವರಿಗೆ ಶಾಸಕ ಟಿ ರಘುಮೂರ್ತಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಸೇರಿದಂತೆ ನಗರಸಭೆ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ನಗರಸಭೆ ಸಿಬ್ಬಂದಿ ಶುಭ ಹಾರೈಸಿದ್ದಾರೆ.






About The Author
Discover more from JANADHWANI NEWS
Subscribe to get the latest posts sent to your email.