ಚಳ್ಳಕೆರೆ: ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಹಕಾರ ಸಂಘಗಳ ಪುನಸ್ಚೇತನಕ್ಕೆ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದು ರೈತರು ಇದರ ಸದ್ಬಳಕೆ ಮಾಡಿಕೊಂಡು ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಗಿತಗೊಳಿಸದೆ ಅಭಿವೃದ್ಧಿಯತ್ತ ಕೊಂಡಯ್ಯಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿ ಸಿ ಸಂಜೀವ ಮೂರ್ತಿ ತಿಳಿಸಿದರು.

ತಾಲೂಕಿನ ನರಹರಿ ನಗರದ ಕಚೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು ರೈತರು ಖಾಸಗಿ ಹಾಲು ಒಕ್ಕೂಟಗಳ ಆಸೆ ಆಮಿಷಗಳಿಗೆ ಬಲಿಯಾಗದೆ ರೈತರ ಹಿತವನ್ನು ಕಾಪಾಡುವ ಸರ್ಕಾರಿ ಸ್ವಾಮ್ಯದ ಹಾಲು ಒಕ್ಕೂಟಗಳಿಗೆ ಹಾಲನ್ನು ವಿತರಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳ ಬಹುದಾಗಿದೆ ಸರ್ಕಾರ ರೈತರು ಸಾಕುವ ಹಸುಗಳಿಗೆ ಜೀವ ವಿಮೆ ಸೌಲಭ್ಯ ಒದಗಿಸುತ್ತಿದ್ದು ರೈತರ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತವೆ ಅಲ್ಲದೆ ರೈತರಿಗೆ ಹೈನು ಉದ್ಯಮವನ್ನು ಉತ್ತೇಜಿಸಲು ಸಾಲ ಸೌಲಭ್ಯವು ಸಹ ದೊರೆಯುವುದರಿಂದ ಸರ್ಕಾರದ ಹಾಲು ಒಕ್ಕೂಟಗಳೊಂದಿಗೆ ರೈತರು ಸಂಪರ್ಕ ಇಟ್ಟುಕೊಂಡರೆ ಉತ್ತಮ ಲಾಭಾಂಶದ ಜೊತೆಗೆ ಪ್ರೋತ್ಸಾಹ ಧನವು ದೊರೆಯುತ್ತದೆ ಈ ನಿಟ್ಟಿನಲ್ಲಿ ಎಲ್ಲಾ ರೈತರು ಸಂಘಟಿತರಾಗಿ ಹೈನು ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಇದೆ ವೇಳೆ ಸ್ಥಗಿತಗೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಸ್ಯೆಗಳನ್ನು ಆಲಿಸಿ ಸಂಘಗಳನ್ನು ಪುನಶ್ಚೇತನಗೊಳಿಸಲು ಕೆಲ ಪರಿಹಾರಗಳನ್ನು ಸಹ ಸೂಚಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಉಪ ವ್ಯವಸ್ಥಾಪಕರಾದ ಡಾ. ಸಂಜಯ್ ತಾಲೂಕು ವಿಸ್ತರಣಾಧಿಕಾರಿ ನಯಾಜ್ ಬೇಗ್, ಎಸ್. ಜಿ. ಕೃಷ್ಣಕುಮಾರ್ ಮತ್ತು ಪೃಥ್ವಿ ಹಾಗೂ ಸ್ಥಗಿತಗೊಂಡ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.