January 29, 2026
n64439202417348303753016b67fba703b683316969cb8011eccf2732a61f71061b743bb00aa2006b0612d7.jpg

ಚಳ್ಳಕೆರೆ ತಾಲೂಕಿನ ಪರುಶುರಾಮಪುರ ಠಾಣಾ ವ್ಯಾಪ್ತಿಯಲ್ಲಿ ಇದೇ ಡಿಸೆಂಬರ್ 19 ರಂದು ನಡೆದಿದ್ದ ಕೊಲೆ ಪ್ರಕರಣ ದಾಖಲಾದ 48 ಗಂಟೆಯಲ್ಲಿಯೇ ಕೊಲೆ ಆರೋಪಗಳನ್ನು ಪತ್ತೆ ಮಾಡಿ ಬಂಧಿಸಿದ ಘಟನೆ ಪರುಶುರಾಮಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಣ್ಣ, ಕೊಟ್ರೇಶ, ಬಸವರಾಜ ಮತ್ತು ಸುಧಮ್ಮ ಬಂಧಿತ ಆರೋಪಿಗಳು. ಡಿಸೆಂಬರ್ 19 ರಂದು ಗಿತ್ತರಾಜ ಎಂಬುವವರ ಶವ ನಾಗಪ್ಪನಹಳ್ಳಿ ಗೇಟ್ ಸಮೀಪ ಕುಂದುರ್ಪಿ ಗೇಟ್ ಬಸ್ ಸ್ಟ್ಯಾಂಡ್ ನ ಹಿಂಭಾಗದ ಗೌರಮ್ಮ ರವರ ಜಮೀನಿನಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ನಾಗರಾಜ ಅವರು ಪರುಶುರಾಮಪುರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆ ಮತ್ತು ಪರಶುರಾಂಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಘಟನೆ ನಡೆದ 48 ಗಂಟೆಯಲ್ಲಿಯೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಗೆ ಚಿತ್ರದುರ್ಗ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading