March 17, 2026
IMG-20251122-WA0262.jpg

ಚಳ್ಳಕೆರೆ ನ.22 ನಿವೃತ್ತ ನೌಕರರನ ಮನೆ ಬೀಗ ಮುರಿದು ಚಿನ್ನದ ಒಡೆ ಹಣ ದೋಚಿ ಪರಾರಿಯಾಗಿದ್ದ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ನಗರ ಆದರ್ಶ ಶಾಲೆ ಹಿಂಭಾಗದ ನಿವೃತ್ತ ಅಗ್ನಿಶಾಮಕ ಠಾಣೆಯ ನೌಕರ ಜಯಣ್ಣನ ಮನೆಯಲ್ಲಿ ನವಂಬರ್ 23 ರಂದು ಮದ್ಯಾಹ್ನ 2-30 ಸಮಯದಲ್ಲಿ ಕಳವು ಮಾಡಲಾಗಿತ್ತು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಭಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಡಿವೈಎಸ್ಪಿ ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ರವರ ನೇತೃತ್ವದಲ್ಲಿ,
ಪಿಎಸ್‌ಐ ಗಳಾದ ಶಿವರಾಜ್ ಜೆ, ಈರೇಶ್, ಧರೇಪ್ಪ ಬಿ.ದೊಡಮನಿ ಹಾಗೂ ಎಎಸ್‌ಐ ರಾಘವರೆಡ್ಡಿ, ಸಿಬ್ಬಂದಿಗಳಾದ ಶ್ರೀನಿವಾಸ್ . ಶಿವಕುಮಾರ್, ವೆಂಕಟೇಶ, ಪರಶುರಾಮ,ಶಿವರಾಜ್, ಶ್ರೀಧರ
ವಸಂತ ಧರಣ್ಯ .ರಮೇಶ. ತಿರುಕಪ್ಪ ತಳವಾರ, ಬಸವರಾಜ ಹಿರೇಮಠ ಗನ್ನು
ತಂಡವನ್ನು ನೇಮಿಸಿದ್ದು, ಆರೋಪಿತರಾದ ಉಮಾಶಂಕರ ರೆಡ್ಡಿ, ಕೊಟ್ನಂಪಲ್ಲಿ, ಗ್ರಾಮ. ಜಗನ್ನಾಥ @ ಜಗ ತಂದೆ ತಿಮ್ಮಣ, ಕೊಡಿಗೆ ಹಳ್ಳಿ.ನಾಗರಾಜ ನಾಯ್ಕ ಚಿಕ್ಕನಾಯ್ಕನಹಳ್ಳಿ, ತಾಲುಕು ಆರೋಪಿಳನ್ನು‌ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ರಾಣೆಬೆನ್ನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ 5,50,ಲಕ್ಷರೂ ಮೌಲ್ಯದ 56 ಗ್ರಾಂ, 850 ಮಿಲಿ ತೂಕದ ಬಂಗಾರದ
ಆಭರಣಗಳನ್ನು ಹಾಗೂ 100 ಗ್ರಾಂ ನಕಲಿ ಬಂಗಾರವನ್ನು ವಶಪಡಿಸಿಕೊಂಡಿರುತ್ತದೆ ಶ್ರೀನಾಥ ರೆಡ್ಡಿ,
ತಂದೆ ಸುಬ್ಬಾರೆಡ್ಡಿ,
ಕೊಟ್ನಂಪಲ್ಲಿ, ಗ್ರಾಮ, ಬಾಗೇಪಲ್ಲಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
ತಲೆಮರೆಸಿಕೊಂಡಿದ್ದು ಪತ್ತೆ ಬಗ್ಗೆ ತನಿಖೆ ಮುಂದುವರೆಸಿರುತ್ತದೆ.
ಮೇಲ್ಕಂಡ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ನ್ಯಾಯಾಂಗ ಬಂಧನಕ್ಕಾಗಿ ಒಪ್ಪಿಸಲಾಗಿದೆ. ಚಿತ್ರದುರ್ಗ ಜಿಲ್ಲಾ,
ಪೊಲೀಸ್‌ ಅಧೀಕ್ಷಕ ಶ್ರೀ ರಂಜಿತ್ ಕುಮಾರ್ ಭಂಡಾರು, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ ಡಾ||
ಶಿವಕುಮಾರ್ ಆರ್ ರವರು ಚಳ್ಳಕೆರೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುತ್ತಾರೆ,

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading