
ಚಳ್ಳಕೆರೆ: ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೇ ನ. 25ರ ಸೋಮವಾರದಂದು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ಎಲ್ಲಾ ಮಠಾಧೀಶರುಗಳ ನೇತೃತ್ವದಲ್ಲಿ ವಕ್ಫ್ ಮಂಡಳಿಯ ರೈತ ವಿರೋಧಿ ಧರ್ಮ ವಿರೋಧಿ ಸಮಾಜ ವಿರೋಧಿ ನಿಲುವಿನ ವಿರುದ್ಧ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲು ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದವರೆಗೆ ಪಾದಯಾತ್ರೆ ನಡೆಸಿ ಸಭಾ ಕಾರ್ಯಕ್ರಮವನ್ನು ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು ಈ ಚಳುವಳಿಯ ನೇತೃತ್ವವನ್ನು ಜಿಲ್ಲೆಯ ಎಲ್ಲಾ ಮಠಾಧೀಶರು ವಹಿಸಿಕೊಳ್ಳಲು ಮುಂದಾಗಿದ್ದು ಎಲ್ಲಾ ರೈತ ಬಾಂಧವರು ರೈತ ಸಂಘಟನೆಗಳು ಸಾಮಾಜಿಕ ಸಂಘಟನೆಗಳು ಧಾರ್ಮಿಕ ಸಂಘಟನೆಗಳು ಜಾತ್ಯತೀತರಾಗಿ ಈ ಚಳುವಳಿಯಲ್ಲಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರೈತರ ಪಹಣಿಯಲ್ಲಿ ಅಧಿಕಾರಿ ಗಳ ತಪ್ಪಿನಿಂದ ಹೆಸರು ತಪ್ಪಾದರೆ ವರ್ಷಗಟ್ಟೆಲೆ ಕಚೇರಿಗೆ ಅಲೆದಾಡಿ ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿಯಲ್ಲೂ ಪೂರ್ವಜರ ರೈತರ ಹೆಸರಿಗಿರುವ ಜಮೀನನ್ನು ರಾತ್ರೋ ರಾತ್ರಿ ವಕ್ಟ್ ಬೋರ್ಡ್ ಹೆಸರು ಬದಲಾಯಿಸುವ ಮೂಕಕ ರೈತರ ಆಸ್ತಿ ಕಬಳಿಸುವುದನ್ನು ಕೈಬಿಡ ಬೇಕು ವಕ್ಟ್ ಬೋರ್ಡ್ ರದ್ದಾಗ ಬೇಕು ರೈತರ ಮಠಾದೀಶರ ಆಸ್ತಿ ಉಳಿಸ ಬೇಕು. ಇದನ್ನು ವಿರೋಧಿಸಿ ನ.25ರಂದು ಜಿಲ್ಲಾ ಕೇಂದ್ರ ಹಾಗೂ 26 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಕಿಸಾನ್ ರೈತ ಸಂಘದಿಂದ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದೇವೆ
ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಅಮೃತ ತೆರುಮಾಲ್ ಮಾತನಾಡಿ ದೇಶದಲ್ಲಿ 2013ರ ವೇಳೆ ವಕ್ಫ್ ಕಾಯ್ದೆಗೆ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದು ಮಿತಿಮೀರಿದ ಅಧಿಕಾರ ಮಂಡಳಿಗೆ ನೀಡಿದ ಪರಿಣಾಮ 8000 ಎಕರೆಗಳಷ್ಟು ಇದ್ದ ವಕ್ಫ್ ಭೂಮಿ ಇಂದು 9,40,000 ದಷ್ಟು ಹೆಚ್ಚು ವಿಸ್ತಾರವಾಗಿದೆ ರೈತರ ಕೃಷಿ ಭೂಮಿ ಸ್ಮಶಾನ ಸರ್ಕಾರಿ ಆಸ್ತಿ ಮಠ ಮಂದಿರಗಳ ಮತ್ತು ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಕಬಳಿಸಿ ಘೋಷಣೆ ಮಾಡಿರುವುದು ಭಯಾನಕ ಸತ್ಯವಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕಂಡುಬಂದಿದ್ದು ಇದರ ಸಲುವಾಗಿ ಭಾರತೀಯ ಕಿಸಾನ್ ಸಂಘವು ವಕ್ಫ್ ತೊಲಗಲಿ ದೇಶ ಉಳಿಯಲಿ ಎಂಬ ಅಭಿಯಾನದ ಅಡಿಯಲ್ಲಿ ರೈತ ಘರ್ಜನೆ ರ್ಯಾಲಿಯನ್ನು ನ. 26 ಮಂಗಳವಾರ ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದು ರಾಜ್ಯದ ಸ್ವಾಭಿಮಾನಿ ರೈತರು ವಿವಿಧ ಜನಪರ ಸಂಘಟನೆಗಳು ಪಾಲ್ಗೊಂಡು ರಾಜ್ಯದಲ್ಲಿ ರೈತರ ಬದುಕಿಗೆ ಕೊಳ್ಳಿ ಇಡಲು ಹೊರಟಿರುವ ಕರಾಳ ವಕ್ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸಿ ಕಬಳಿಸಿದ ಭೂಮಿಯನ್ನು ಉಳಿಸಿಕೊಳ್ಳಲು ಪಣ ತೊಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ ತಿಪ್ಪೆಸ್ವಾಮಿ ಜ್ಞಾನೇಶ್ವರ್ ಹನುಮಂತಪ್ಪ ಸಿ ವೀರೇಶ್ ಮಂಜುನಾಥ ವೆಂಕಟೇಶ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.