
ನಾಯಕನಹಟ್ಟಿ : ಪಟ್ಟಣದ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ಪಟ್ಟಣದ ಮುಖಂಡರು ಹಾಗೂ ಗ್ರಾಮಸ್ಥರು ಸೇರಿ ದೊಡ್ಡಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಗಂಗಾ ಪೂಜೆ ನೆರವೇರಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು.
ನಂತರ ಮುಖಂಡರಾದ ಪ್ರಭುಸ್ವಾಮಿ ಮಾತನಾಡಿ ಬರುವ ಮಂಗಳವಾರದಂದು ಅನ್ನ ಸಂತರ್ಪಣೆ ಹಾಗೂ ಗುರುವಾರದಂದು ಗಂಗಾಪೂಜೆ ನೆರವೇರಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮುಖಂಡರಾದ ಕವಲಪ್ಪರ ತಿಪೆರುದ್ರಪ್ಪ, ಎಂವೈಟಿ ಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಜೆ ಆರ್ ರವಿಕುಮಾರ್, ಅಬಕಾರಿ ತಿಪ್ಪೇಸ್ವಾಮಿ, ಕೆ ಇ ಬಿ ಕಂಟ್ರಾಕ್ಟರ್ ಓಂ ಪ್ರಕಾಶ್, ಉಮೇಶ್ ಹಟ್ಟಿ ಯಜಮಾನರು ಹಾಗೂ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.