‘
ಚಳ್ಳಕೆರೆ: ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬುದನ್ನ ನಂಬಿದ ನಾವು,ಕಳೆದ ಎರೆಡು ವರ್ಷಗಳಿಂದ ನಮ್ಮ ‘ಕನ್ನಡ ಕೌಸ್ತುಭ’ದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವುದು ತಮಗೆಲ್ಲಾ ತಿಳಿದ ವಿಚಾರವಾಗಿದೆ. ಅದರಂತೆ, ಈ ಬಾರಿಯೂ,ನವೆಂಬರ್ ೧ ಶನಿವಾರದಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್ ಎಂ ಎಸ್ ಲೇಔಟ್ ನ ಕನ್ನಡ ಕೌಸ್ತುಭದಲ್ಲಿ ‘ಕನ್ನಡ ಕಲರವ-೩’ ಕಾರ್ಯಕ್ರಮ ಆಯೋಜಿಸುತಿದ್ದೇವೆ. ಆದಕಾರಣ ಈ ಕಾರ್ಯಕ್ರಮದಲ್ಲಿ ನಡೆಯುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅದರೊಟ್ಟಿಗೆ ಕನ್ನಡ ಗೀತೆಗಳ ಗಾಯನವೂ ಸಹ ಇರುತ್ತದೆ. ಆಸಕ್ತ ಕನ್ನಡಿಗರು ತಮ್ಮ ಕವಿತೆಗಳನ್ನು ಈ ಕೆಳಗಿನ ಸಂಖ್ಯೆಗೆ ಕಳುಹಿಸಿ. ಹಾಗೆಯೇ ಕನ್ನಡ ಗೀತಗಾಯನದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಲು ಈ ಮೂಲಕ ಕೋರಲಾಗಿದೆ ಎಂದು ಕನ್ನಡಾಮಾನಿಗಳು ಹಾಗೂ ಶಿಕ್ಷಕದಂಪತಿಗಳಾದ ಡಿ.ಶಬ್ರಿನಾ ಮಹಮದ್ ಅಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೯೭೩೧೮೭೯೮೪೦.
About The Author
Discover more from JANADHWANI NEWS
Subscribe to get the latest posts sent to your email.