ಚಳ್ಳಕೆರೆ ಅ.22 ವಾಯುಬಾರ ಕುಸಿತದಿಂದ ಸುರುಯುತ್ತಿರುವ ಮಳೆಗೆ ಜಗಲೂರಜ್ಜನ ಕೆರೆ ಕೋಡಿಬಿದ್ದಿದೆ. ನಗರದ ರಹೀಂನಗರ. ಶಾಂತಿನಗರದ ಮೂಲಕ ಪಾವಗಡ ರಸ್ತೆ ಟೋಲ್‍ಗೇಟ್ ಬಳಿ ಹಾದು ಹೋಗುವ ಹಳ್ಳ ತುಂಬಿ ಹರಿಯುತ್ತಿದೆ.









ಕಾಟಪ್ಪನಹಟ್ಟಿ, ರೈಲು ನಿಲ್ದಾಣದ ರಸ್ತೆಯ ಮೇಲೆ ಹೆಚ್ಚು ನೀರು ಹರಿಯುತ್ತಿರುವ ಕಾರಣ ಒಂದು ಗಂಟೆಯವರೆಗೆ ಜನರ ಸಂಚಾ ಸ್ಥಗಿತಗೊಂಡಿತ್ತು.
ರೈಲ್ವೇ ನಿಲ್ದಾಣ ರಸ್ತೆಯ ರಾಘವೇಂದ್ರ ಕಲ್ಯಾಣ ಮಂಟಪದ ಮುಂಭಾಗದ ಕಾಲೇಜು ಜಲಾವೃತಗೊಂಡಿದೆ.
ಗಂಗಾಪೂಜೆ
ಐತಿಹಾಸಿಕ ಜಗಲೂರಜ್ಜನ ಕೆರೆ 2022 ರಲ್ಲಿ ಕೆರೆಗೆ ನೀರು ಬಂದಿತ್ತು ಕೋಡಿ ಬಿದ್ದರಲಿಲ್ಲ ಸೋಮವಾರ ರಾತ್ರಿ ಸುರಿದ ಮಳೆಯಿಂದ ನನ್ನಿವಾಳ ಸೇರಿದಂತೆ ವಿವಿಧ ಕೆರೆಗಳು ಕೋಡಿ ಬಿದ್ದು ಅಜ್ಜನಕೆರೆಗೆ ನೀರು ಬಂದಿದ್ದು ಎರಡು ಕೋಡಿ ಬಿದ್ದಿದ್ದಯ ಜನರು ಗಂಗಾದೇವತೆ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿ ಗಂಗೆಯನ್ನು ಕೊಂಡೊಯ್ಯತ್ತಿರುವ ದೃಶ್ಯ ಕಂಡು ಬಂದಿತ್ತು ಐತಿಹಾಸಿಕ ಜಗಲೂರಜ್ಜನ ದೇವಸ್ಥಾನಕ್ಕೂ ನೀರು ನುಗ್ಗಿದೆ ಕೆರೆ ಕೋಡಿ ನೀರು ನೋಡಲು ಜನರು ಕೆರೆಯತ್ತ ದಾವಿಸುತ್ತಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.