ಚಳ್ಳಕೆರೆ ಅ.22 ಎಡೆಬಿಡದೆ ಸುರಿಯುತ್ತಿರುವ ಮಳೆ ಕೆರೆ ಕಾಲುವೆ ಅಪಾಯ ಮಟ್ಟದಲ್ಲಿ ಹರಿದರೆ ಇಲ್ಲೊಂದು ಐತಿಹಾಸಿಕ ಕೆರೆ ಏರಿಯಲ್ಲಿ ನೀರು ಸೋರಿಯಾಗುತ್ತಿದ್ದು ಜನರು ಆತಂಕಕ್ಕೀಡಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರಕ್ಕೆ ಹೊಂದಿಕೊಂಡ ಕರೆಕಲ್ಲುಕೆರೆಗೆ ನೀರಿನ ಒಳ ಹರಿವು ಹೆಚ್ಚಾಗಿ ಕೋಡಿ ಬೀಳಲು ಕ್ಷಣಗಳನೆ ಇದ್ದು ಇತ್ತ ಇಂಜಿನಿಯರಿಂಗ್ ಕಾಲೇಜು ರಸ್ತೆಯ ಸೂಜಿಮಲ್ಲೇಶ್ವರ ದೇವಸ್ಥಾನದ ಬಳಿ ಕೆರೆ ಏರಿಯಲ್ಲಿ ನೀರು ಸೋರಿಯಾಗಿತ್ತಿದ್ದು ಕೆರೆ ಏರಿ ಎಲ್ಲಿ ಹೊಡೆ ಹೋಗುತ್ತದೆ ಎಂಬ ಭೀತಿ ಎದುರಾಗಿದೆ.
ಕೆರೆ ಏರಿ ಏನಾದರೂ ಅಪಾಯವಾದರೆ ಸೂಜಿ ಮಲ್ಲೇಶ್ವರನಗರ. ಕಾಟಪ್ಪನಹಟ್ಟಿ . ಅಭಿಶೇಖ್ ನಗರ ಸೇರಿದಂತೆ ತಗ್ಗು ಪ್ರದೇಶಗಳು ಮುಳುಗುವ ಆತಂಕ ಎದುರಾಗಿದೆ.
ವೆಂಕಟೇಶ್ವರ ನಗರದ ಸಮೀಪದ ಕರೆಕಲ್ಲು ಕೆರೆ ಕೋಡಿಯನ್ನು ಎತ್ತರ ಮಾಡಿರುವುದನ್ನು ಕೂಡಲೆ ಒಂದು ಅಡಿ ತಗ್ಗಿಸದಿದ್ದರೆ ಸೂಜಿ ಮಲ್ಲೇಶ್ವರ ನಗರದ ಬಳಿ ಕೆರೆ ಏರಿಗೆ ಅಪಾಯ ತಳ್ಳಿಹಾಕುವಂತ ಕೂಡಲೆ ಕೆರೆ ಕೋಡಿ ತಗ್ಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆರೆಗಳನಿರ್ವಹಣೆಯಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷವೇ ಕಾರಣವಾಗಿದೆ ಕೆರೆ ಏರಿ ಕೆರೆಯಲ್ಲಿ ಜಂಗಲ್ ತೆಗಿಸದೆ ಇರುವುದು ಮಳೆಗಾಲದಲ್ಲಿ ಕೆರೆಗಳು ಅಪಾಯಕ್ಕೆ ಸಿಲುಕುವಂತೆ ಮಾಡಿವೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೆ ಕರೆ ಕಲ್ಲು ಕೆರೆಗೆ ಭೇಡಿ ನೀಡಿ ಕೆರೆ ಏರಿ ಬುಡದಲ್ಲಿ ಸೋರಿಕೆ ಯಸಗುತ್ತಿರುವುದನ್ನು ದುರಸ್ಥಿ ಪಡಿಸಿ ಕೆರೆ ತೂತು ತಗ್ಗಿಸುವಂತೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.





















About The Author
Discover more from JANADHWANI NEWS
Subscribe to get the latest posts sent to your email.