March 16, 2026
FB_IMG_1729571362750.jpg


ಹಿರಿಯೂರು :
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಇಳುವರಿ ಕುಸಿತದಿಂದ ಉತ್ತಮ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಬಯಲು ಸೀಮೆ ರೈತರ ಜೀವನಾಧಾರ ವಾಣಿಜ್ಯ ಬೆಳೆ ಶೇಂಗಾ, ಮಳೆ ಕೊರತೆ , ರೋಗಬಾಧೆಯಿಂದ ಬಿತ್ತನೆ ಮಾಡಿದ ಫಸಲು ರೈತರ ಕೈ ಸೇರಿಲ್ಲ. ಮುಂಗಾರಿನಲ್ಲಿ ನಾಲ್ಕೈದು ಸಲ ಹದವಾದ ಮಳೆಯಾದ ಕಾರಣ ಶೇಂಗಾ ಬೆಳೆ ಚೆನ್ನಾಗಿತ್ತು.
ಆದರೆ, ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಶೇಂಗಾ ಕಾಳು ಕಟ್ಟುವಾಗ ತೇವಾಂಶದ ಕೊರತೆಯಿಂದ ಫಸಲಿನ ಇಳುವರಿಯೂ ಸಹ ಕುಸಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸತತವಾಗಿ ನಾಲ್ಕೈದು ವರ್ಷಗಳ ಕಾಲ ಶೇಂಗಾ ಬೆಳೆ ಇಳುವರಿ ಮತ್ತು ಬೆಲೆ ಕುಸಿತದಿಂದ ಅನ್ನದಾತರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಶೇಂಗಾಕ್ಕೆ 4 ರಿಂದ 5ಸಾವಿರ ರೂ ಬೆಲೆ ಲಭಿಸಿದೆ. ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದೆ. ಅತಿವೃಷ್ಠಿ–ಅನಾವೃಷ್ಠಿಯಿಂದ ಇಳುವರಿ ಕುಂಠಿತ, ಮೇವು ಕೂಡ ಹಾಳಾಗಿದೆ. ದರ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ತಕ್ಷಣ ಶೇಂಗಾಕ್ಕೆ ಬೆಂಬಲ ಬೆಲೆ ಘೋಷಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading