March 17, 2026
IMG-20250922-WA0203.jpg

ವರದಿ: ಎಂ ಶಿವಮೂರ್ತಿ ನಾಯಕನಹಟ್ಟಿ

ನಾಯಕನಹಟ್ಟಿ : ತಳಕು ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿ.24 ಬುಧವಾರದಂದು ಕೆಪಿಟಿಸಿಎಲ್ ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಪೂರೈಕೆ ಸ್ಥಿಗಿತವಾಗಲಿದೆ. ಆದ್ದರಿಂದ ಗ್ರಾಹಕರು, ರೈತರು ಸಹಕರಿಸಬೇಕು ಎಂದು ಎ ಇ ಇ ಎನ್‌ಜಿ ಮಮತಾ, ಇಂಜಿನಿಯರ್ ಬೋರಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು :
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ, ನೆಲಗೇತನಹಟ್ಟಿ, ಗೌಡಗೆರೆ, ಮಲ್ಲೂರಹಳ್ಳಿ, ನೇರಲಗುಂಟೆ ಎನ್ ದೇವರಹಳ್ಳಿ, ಎನ್ ಮಹದೇವಪುರ, ತಿಮ್ಮಪ್ಪಯ್ಯನಹಳ್ಳಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading